
ಇಂದಿನ ಸುದ್ದಿ ವಿಶೇಶ-
ಅಣ್ಣಾಮಲೈ ರಾಜೀನಾಮೆ, ಬ.ಜೆ.ಪಿ. ಜಿಲ್ಲಾಧ್ಯಕ್ಷರ ವಾರ್ಡ್ನಲ್ಲಿ ಮಾಟ,ಮಂತ್ರದ ತಂತ್ರ! ನಾಳೆ ಸಂತೆ ಇಲ್ಲ.
ಅಣ್ಣಾ ರಾಜೀನಾಮೆ- ಕರ್ನಾಟಕದ ಕಡಕ್ ಪೊಲೀಸ್ ಅಧಿಕಾರಿ ತಮಿಳುನಾಡಿನ ಅಣ್ಣಾಮಲೈ ರಾಜಕೀಯ ಪಕ್ಷ ಸೇರಿ ಜನಸೇವೆ ಮಾಡುವ ಉದ್ಧೇಶದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ತೀರ್ಮಾನ ಕೈಗೊಂಡಿದ್ದು, ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ಬಿ.ಜೆ.ಪಿ.ಆಹ್ವಾನ ತಿರಸ್ಕರಿಸಿರುವ ರಿಯಲ್ ಸಿಂಗಂ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ರಾಜಕೀಯ ಶೈಲಿ ಇಷ್ಟಪಟ್ಟಿದ್ದು, ತನ್ನ ಪ್ರಾಮಾಣಿಕ ಸೇವೆಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸಹಕಾರ ಕಾರಣ ಎಂದ ಅವರು ತನ್ನ ಪ್ರಾಮಾಣಿಕ ಸೇವೆ ಗುರುತಿಸಿದ ಕನ್ನಡಿಗರು ನನ್ನ ಅಭಿಮಾನದ ಜನರು ಎಂದಿದ್ದಾರೆ.
ತಮಿಳುನಾಡಿನ ಡಿ.ಎಂ.ಕೆ. ಪಕ್ಷದಿಂದ ರಾಜಕಾರಣ ಪ್ರಾರಂಭಿಸುವ ಸುಳಿವು ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಮನೆಮಾತಾಗಿದ್ದ ದಿಟ್ಟ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ವಿಶ್ರಾಂತಿ ನಂತರ ಜನಸೇವೆಗಾಗಿ ಬದುಕು ಮುಡಿಪಿಡುವುದಾಗಿ ನಿರ್ಧರಿಸಿರುವ ದಿಟ್ಟತನದ ತೀರ್ಮಾನದ ಬಗ್ಗೆ ಹೇಳಿಕೊಂಡಿದ್ದಾರೆ.
ಬದುಕಿನ ಕಠಿಣ ತೀರ್ಮಾನದ ನಂತರ ನಾನೊಬ್ಬ ಮತ್ತೆ ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ನನ್ನ ಮಗನಿಗೆ ಒಬ್ಬ ಒಳ್ಳೆಯ ತಂದೆಯಾಗುವ ಅವಕಾಶ ನನ್ನೆದುರಿಗಿದೆ. ಪತ್ನಿ, ಮಕ್ಕಳು ನನ್ನ ನಿರ್ಧಾರ ಬೆಂಬಲಿಸುತ್ತಾರೆ. ಮರಳಿ ಗ್ರಾಮಕ್ಕೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳಲಿದ್ದೇನೆ. ನನ್ನ ಪ್ರಾಮಾಣಿಕಸೇವೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಮಾಟ,ಮಂತ್ರದ ತಂತ್ರ-
ಉತ್ತರ ಕನ್ನಡ ಜಿಲ್ಲೆಯ ಬಿ.ಜೆ.ಪಿ. ಅಧ್ಯಕ್ಷರು ಸ್ಫರ್ಧಿಸಿರುವ ಪಟ್ಟಣ ಪಂಚಾಯತ್ ಚುನಾವಣೆಯ ಸಿದ್ದಾಪುರ ಪ.ಪಂ. ನ 11 ನೇ ವಾರ್ಡ್ನಲ್ಲಿ ಪ್ರತ್ಯೇಕ ಮೂರ್ನಾಲ್ಕು ಕಡೆ ಲಿಂಬು,ಕುಂಕುಮ ಎಸೆದು ವಾಮಾಚಾರ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಕೊಂಡ್ಲಿ,ಹಾಳದಕಟ್ಟಾ ಭಾಗದ ಈ ವಾರ್ಡ್ನಲ್ಲಿ ನಾಲ್ಕು ಜನ ಸ್ಫರ್ಧಿಗಳಿದ್ದಾರೆ. ಅವರಲ್ಲಿ ಉತ್ತರಕನ್ನಡ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಒಬ್ಬರಾದರೆ, ಉಳಿದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮತ್ತು ಇನ್ನೊಬ್ಬರು ಜಾತ್ಯಾತೀತ ಜನತಾದಳದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಮಲಾಕರ.
ಹೀಗಿರುವ ಕ್ಷೇತ್ರಕ್ಕೆ ಮೇ,29 ರಂದು ಚುನಾವಣೆ ನಡೆಯುತ್ತಿದೆ. ಮೇ 27 ರ ರಾತ್ರಿ ಈ ವಾರ್ಡ್ನ ಮೂರ್ನಾಲ್ಕು ಕಡೆ ಲಿಂಬು ಮತ್ತು ಕುಂಕುಮ ಚೆಲ್ಲಿದ್ದು, ಇದು ಚುನಾವಣಾ ಗೆಲುವಿಗಾಗಿ ಮಾಡಿದ ವಾಮಾಚಾರ ಎನ್ನುವ ಶಂಕೆಗೆ ಆಸ್ಫದವಾಗಿದೆ.
ವಿಚಿತ್ರವೆಂದರೆ ಈ ಮಾಟ,ಮಂತ್ರ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕರ ಗೆಲುವು ತಡೆಯಲು ನಡೆಸಿದ ಪ್ರಯತ್ನ ಇದನ್ನು ತೆಗೆಯಲು ಸಾಧ್ಯ ಎಂದು ವೈದಿಕರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಅದೆಲ್ಲಾ ಸುಮ್ನೆ, ಜನರ ಒಲುವು ಗಳಿಸಿ ಗೆಲ್ಲಬೇಕೆ ಹೊರತು, ಈ ಮಾಟ, ಮಂತ್ರ,ತಂತ್ರಗಳಿಂದ ಅಲ್ಲ. ಆ ಬಗ್ಗೆ ತನಗೆ ನಂಬಿಕೆಯೂ ಇಲ್ಲ ಎಂದಿದ್ದಾರೆ.
ನಾಳೆ ಸಂತೆ ಇಲ್ಲ-
ಸಿದ್ಧಾಪುರ ತಾಲೂಕಿನ ವಾರದ ಸಂತೆ ಬುಧವಾರ ನಡೆಯುವುದು ವಾಡಿಕೆ. ಆದರೆ ನಾಳೆ ಬುಧವಾರ ಪಟ್ಟಣಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರದ ವಾರದ ಸಂತೆ ನಡೆಯುತ್ತಿಲ್ಲ. ಮೇ 29 ರ ಬುಧವಾರ ನಡೆಯಬೇಕಿದ್ದ ವಾರದಸಂತೆ ಕಳೆದ ಸೋಮುವಾರ ನಡೆದಿದೆ. ಪೂರ್ವಸೂಚನೆ ನಡುವೆ ಕೂಡಾ ನಿನ್ನೆಯ ಸೋಮುವಾರದ ವಿಶೇಶ ಸಂತೆ ಸಪ್ಪೆಯಾಗಿ ನಡೆದಿದ್ದು ಸಾರ್ವಜನಿಕರು ಬುಧವಾರದ ಸಂತೆಗೆ ಹೊಂದಿಕೊಂಡ ಪರಿಣಾಮ ಇದು ಎನ್ನಬಹುದಾಗಿದೆ.
