
ವಿಡಂಬಾರಿ ಚುಟುಕುಗಳು-
ಹಿಟ್ಲರನ ಸಂತಾನ
ಧರ್ಮ ಗುತ್ತಿಗೆ ಪಡೆದ ಕೆಲವರಿಗೆ ಸತ್ಯ
ಅಹಿಂಸೆ ಎಂದಿಗೂ ಆಗದೋ ಪಥ್ಯ
ಹೀಗಾಗಿ ಮೊದಲಿಗೇ ಹಾರಿಸುತ ಗುಂಡು
ಗಾಂಧೀಜಿ ಎಂಬವನ ಮುಗಿಸಿಹರು ಕೊಂದು
…..ವಿಡಂಬಾರಿ
ನಾಜಿಗಳ ಸಂತಾನ
ಧರ್ಮ ಗುತ್ತಿಗೆ ಪಡೆದ ಮಂದಿಗಳು ಮತ್ತೆ
ನಾಜಿಗಳು ಬೇರಲ್ಲ ಒಂದೇನೆ ಗೊತ್ತೆ?
ದೇವರು ಧರ್ಮಗಳ ಮುಂದಿಟ್ಟು ಇಂದೆ
ಹಸಿರು ಭೂಮಿಯ ಕೆಂಪು ಮಾಡಿದುದ ಕಂಡೆ.
… ವಿಡಂಬಾರಿ
ಮೋದಿ ಹೇಳಿದ್ದು
ಗೆಲುವೊಂದೆ ನನ್ನ ಗುರಿ ಅಂದನೋ ಮೋದಿ
ಗೊತ್ತುಂಟು ಈ ಹಿಂದೆ ತುಳಿದಿರುವ ಹಾದಿ
ಕೋಮುದಂಗೆ, ರಕ್ತಪಾತ ಈ ಗುರಿಯ ಹಿಂದೆ
ಅಡಗಿದುದ ಬೆರಗಾಗಿ ಮನಕರಗಿ ಕಂಡೆ
ವಿಡಂಬಾರಿ
