

ಖುಷ್ವಂತರ ಆರೋಗ್ಯ ಸೂತ್ರಗಳು
ನಮ್ಮ ನಡುವಿದ್ದ ಶತಾಯುಷಿ
ಸಾಹಸಪ್ರವೃತ್ತಿಯ ಬರಹಗಾರ, ಗಂಡದೆಯ ಪತ್ರಕರ್ತ ದೇಶಕಂಡ ಬಹುಮುಖಿ ವ್ಯಕ್ತಿತ್ವ ಖುಷ್ವಂತ್ ಸಿಂಗ್ ತಮ್ಮ 99ರ ವರಯಸ್ಸಿನಲ್ಲಿ ಉತ್ತಮ ಆರೋಗ್ಯ, ಆರೋಗ್ಯಕರ ಮನಸ್ಥಿತಿಯ ಮನುಷ್ಯ ಅನುಕರಿಸಬಹುದಾದ ಆರೋಗ್ಯ (ಕರ) ಸಲಹೆಗಳನ್ನು ನೀಡಿದ್ದರು. ಅವು ನಿಮಗಾಗಿ ನಿಮ್ಮ ಆರೋಗ್ಯ, ಆಯುಷ್ಯ ನಿರಂತರವಾಗಿ ಹೆಚ್ಚುತ್ತಿರಲಿ.
ಒಬ್ಬನ ಜೀವಿತಾವಧಿಯನ್ನು ನಿರ್ಧರಿಸುವಲ್ಲಿ, ವಂಶವಾಹಿನಿಗಳದು ಬಹುದೊಡ್ಡ ಪಾತ್ರವಿದೆಯೆಂದು ನಾನು ನಂಬಿದ್ದೇನೆ.
ಸುದೀರ್ಘ ಕಾಲ ಬದುಕಿರುವ ಪಾಲಕರ ಮಕ್ಕಳು ಬಹಳ ಕಾಲ ಬದುಕುತ್ತಾರೆ. ಆದಾಗ್ಯೂ, ತನ್ನ ಬದುಕನ್ನು ಪೂರ್ಣವಾಗಿ ಬದುಕುವುದಕ್ಕೆ ಮತ್ತು ಇರುವ ಕಾಲಾವಕಾಶವನ್ನು ಆರೋಗ್ಯಪೂರ್ಣವಾಗಿ ಮತ್ತು ಸಾಫಲ್ಯತೆಯಿಂದ ಬಾಳಲು ಹಲವು ದಾರಿಗಳಿವೆ.
1) ಪ್ರಯತ್ನಿಸಿ ಒಂದು ಆಟ ಆಡುವುದಕ್ಕೆ -ಅದು ಟೆನ್ನೀಸ್ ಇರಬಹುದು, ಸ್ಕ್ವಾಶ್ ಬ್ಯಾಡ್ಮಿಂಟನ್ ಅಥವಾ ಗಾಲ್ಫ್, ಒಂದು ಸುತ್ತಾಟ ಒಳ್ಳೆಯದು ನಿಮಗೆ.
ಅಥವಾ ನಿಯಮಿತವಾದ ವ್ಯಾಯಾಮ: ಒಂದು ಗಂಟೆಯ ಚುರುಕಾದ ನಡೆದಾಟ, ಈಜುವುದು ಅಥವಾ ಓಡುವುದು ಒಳ್ಳೆಯದು.
2) ಒಂದು ವೇಳೆ ನಿಮಗೆ ಇವುಗಳಲ್ಲಿ ಯಾವುದನ್ನೂ ಮಾಡಲಾಗದಿದ್ದರೆ, ಸುಮ್ಮನೆ ತೀವ್ರತೆಯಿಂದ ಕೂಡಿದ ಅಂಗಮರ್ಧನ ಮಾಡಿಸಿಕೊಳ್ಳಿ. ಕೊನೇಪಕ್ಷ ದಿನಕ್ಕೊಂದು ಬಾರಿ. ಶಕ್ತಿಶಾಲಿ ಕೈಗಳು ನಿಮ್ಮದೇಹದ ಮೇಲೆ ಚಲಿಸಲಿ.
ನತ್ತಿಯಿಂದ ಹಿಡಿದು ಕಾಲ್ಬೆರಳುಗಳ ತನಕ. ಇದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
3) ನೀವು ತೆಗೆದುಕೊಳ್ಳುವ ಆಹಾರದ ಪ್ರಮಾಣ ಕಡಿಮೆಗೊಳಿಸಿ ಕುಡಿಯುವುದರಲ್ಲಿಯೂ, ಊಟದ ವೇಳೆಯ ಬಗ್ಗೆ ಕಟ್ಟುನಿಟ್ಟಿನ ವೇಳಾಪಟ್ಟಿಯನ್ನು ಅನುಸರಿಸಿ:
ನಾನು ಮುಂಜಾನೆ 6.30ಕ್ಕೆ ನನ್ನ ಉಪಾಹಾರವನ್ನು ತೆಗೆದುಕೊಳ್ಳುತ್ತೇನೆ,
ಊಟ ಮಧ್ಯಾಹ್ನ, ಸಂಜೆ 7ಕ್ಕೆ ಪಾನೀಯ ಸೇವನೆ ಮತ್ತು ರಾತ್ರಿಯ ಔತಣ 8ಕ್ಕೆ ನಿಮ್ಮ ದಿನಚರಿಯನ್ನು ಒಂದು ಲೋಟ ಹಣ್ಣಿನ ರಸದಿಂದ ಆರಂಭಿಸಿ.
(ಸೀಬೆ ಹಣ್ಣಿನ ರಸ ಬೇರೆ ಯಾವುದೇ ಹಣ್ಣಿನ ರಸಕ್ಕಿಂತಲೂ ಉತ್ತಮ.)
4). ಸಂಜೆ ಒಂದು ಪೆಗ್ ಸಿಂಗಲ್ ಮಾಲ್ಟ್ ವಿಸ್ಕಿ ಒಳ್ಳೆಯದು ನಿಮ್ಮ ಹಸಿವನ್ನು ಹೆಚ್ಚಿಸುವುದಕ್ಕೆ
5)ನಿಮ್ಮ ಔತಣವನ್ನು ಸವಿಯಲು ಆರಂಭಿಸುವುದಕ್ಕೆ ಮುನ್ನ, ನಿಮಗೆ ನೀವೇ ಹೇಳಿಕೊಳ್ಳಿರಿ; ‘ಹೆಚ್ಚು ತಿನ್ನಬೇಡ. ಒಂಟಿಯಾಗಿ ಮತ್ತು ಮೌನವಾಗಿ ತಿನ್ನುವುದಕ್ಕೆ ಪ್ರಯತ್ನಿಸಿ….
6). ಒಂದೇ ರೀತಿಯ ತರಕಾರಿಗಳಿಗೆ ಅಥವಾ ಮಾಂಸಕ್ಕೆ ಒಗ್ಗಿಕೊಳ್ಳಿ,
ಊಟದ ನಂತರ ಇರಲಿ ಒಂದು ಚಿಟಿಕಿ ಚೂರ್ಣ. (ಇಡ್ಲಿ-ದೋಸೆ ಆರೋಗ್ಯಕರ ಬದಲಿ ಆಯ್ಕೆ, ಏಕೆಂದರೆ ಜೀರ್ಣಿಸಿಕೊಳ್ಳುವುದಕ್ಕೆ ಸುಲಭ).
7) ನಿಮ್ಮನ್ನು ನೀವು ಮಲಬದ್ಧತೆಗೆ ತುತ್ತಾಗುವುದಕ್ಕೆ ಅವಕಾಶ ಮಾಡದಿರಿ. ನಿಮ್ಮ ಹೊಟ್ಟೆಯನ್ನು ಕರುಳನ್ನು ಸ್ವಚ್ಛವಾಗಿರಿಸಿಕೊಳ್ಳಿ-
ಯಾವುದೇ ವಿಧಾನದಿಂದಾದರೂ ಸರಿ: ಮಲವಿಸರ್ಜನೆ ಮಾಡಿಸುವ ಪಿಚಕಾರಿ, ವಸ್ತಿದ್ರವ, ಗ್ಲಿಸರಿನ್ ಇತ್ಯಾದಿಗಳಿಂದ.
8). ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಲಿ ಹಣ-
ಮನಸ್ಸಿನ ನೆಮ್ಮದಿಗಾಗಿ. ಅದು ಕೋಟಿಗಟ್ಟಲೆ ಇರಬೇಕಾಗಿಲ್ಲ. ಆದರೆ, ನಿಮ್ಮ ಭವಿಷ್ಯದ ಅಗತ್ಯಗಳನ್ನು ಪೂರೈಸುವಷ್ಟು ಕಾಯಿಲೆ ಕಸಾಲೆ, ಆರೋಗ್ಯದಲ್ಲಿ ಏರುಪೇರು ಇತ್ಯಾದಿಗಳಿಗೆ.
9). ನಿಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬೇಡಿ. ಆಗಾಗ್ಗೆ ನಗುತ್ತಿರಿ.
10) ಸುಳ್ಳಾಡಬೇಡಿ.
11) ಉದಾರವಾಗಿ ನೀಡಿ. ಅದು ನಿಮ್ಮ ಅತ್ಮವನ್ನು ಶುದ್ಧಿಗೊಳಿಸುತ್ತದೆ. ನೆನಪಿಡಿ,
ನಿಮ್ಮಲ್ಲಿದ್ದದ್ದನ್ನು ನೀವು ಹೋಗುವಾಗ, ತೆಗೆದುಕೊಂಡು ಹೋಗಲಾಗುವುದಿಲ್ಲ.
12). ನಿಮ್ಮ ಅಮೂಲ್ಯ ಸಮಯವನ್ನು ಪ್ರಾರ್ಥಿಸುತ್ತ ಹಾಳುಮಾಡಿಕೊಳ್ಳಬೇಡಿ.
ಅದರ ಬದಲಿಗೆ ಒಂದು ಹವ್ಯಾಸವನ್ನು ರೂಢಿ ಮಾಡಿಕೊಳ್ಳಿ: ತೋಟಗಾರಿಕೆ, ಸಂಗೀತ, ಮಕ್ಕಳಿಗೆ ಸಹಾಯ ಮಾಡುವುದು ಅಥವಾ ಅಗತ್ಯವಿದ್ದವರಿಗೆ ನೆರವಾಗುವುದು.
ನೆನಪಿಡಿ: ನಿಮ್ಮ ಮನಸ್ಸು ಮತ್ತು ಕೈಗಳೆರಡೂ ಕೆಲಸ ಮಾಡುತ್ತಿರಲಿ.

Kushwant Singh …. Nice tips