ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ
ನಿಮಗೆ ಗೊತ್ತಾ?
ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ!
ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ ಜನಾಭಿಪ್ರಾಯ ಖರೀದಿಸಿದವರ್ಯಾರು? ಎನ್ನುವುದು ಎಲ್ಲರಿಗಿಂತಲೂ ಹೆಚ್ಚಾಗಿ ಸ್ವಯಂಘೋಷಿತ ದೇಶಭಕ್ತರಿಗಂತೂ ಸಂಪೂರ್ಣ ವಾಸ್ತವ,ಸತ್ಯದ ಅರಿವಿದೆ.
ಅದಕ್ಕೂ ಸಿದ್ಧಾಪುರ ತಾಲೂಕಿನ ತ್ಯಾರಸಿ-ಬೇಡ್ಕಣಿಯ ಚಳ್ಳೆವಟ್ಟಿ ಬಿಯರ್ ಬಾಂಡರಿಗೂ ಬಾದರಾಯಣ ಸಂಬಂಧವಿರಬಹುದು! ಅದರ ಕತೆ ಬಿಡಿ. ಇಲ್ಲಿಯ ವಿಶೇಶವೆಂದರೆ…….
ಬೇಡ್ಕಣಿ ಗ್ರಾಮಪಂಚಾಯತ್ ತ್ಯಾರಸಿ ಚಳ್ಳೆವಟ್ಟಿ ಮೈದಾನ ಬಹುವರ್ಷಗಳಿಂದ ಸ್ಥಳಿಯ ಯುವಕರ ನೆಚ್ಚಿನ ಕ್ರಿಕೆಟ್ ಮೈದಾನ.
ಇಲ್ಲಿ ಪ್ರತಿದಿನ, ವಾರ ಎನ್ನುವಂತೆ ಯುವಕರ ಕ್ರಿಕೆಟ್ ಮ್ಯಾಚ್ ನಡೆಯುತ್ತವೆ.
ಇಲ್ಲಿ ಆಡುವ ಕ್ರಿಕೆಟ್ಟಿಗರು ಬಿಯರ್ (ಕುಡಿಯುತ್ತಾರೋ?) ಬಾಟಲ್ ಮುಟ್ಟುತ್ತಾರೊ? ಇಲ್ಲವೋ ತಿಳಿದಿಲ್ಲ.
ಆದರೆ, ಈ ಕ್ರಿಕೆಟ್ ಮೈದಾನದ ಬಾಂಡರಿ ಲೈನ್ ಬಿಯರ್ ಬಾಟಲಿಗಳ ಬೇಲಿ, ಇಲ್ಲಿ ಸಿಕ್ಸ್ ಹೊಡೆಯುವವನು ಬಿಯರ್ ಬಾಂಡ್ರಿ ದಾಟಲೇಬೇಕು. 4 ಹೊಡೆಯುವವನು ಬಿಯರ್ ಬಾಂಡ್ರಿ ಮುಟ್ಟಲೇಬೇಕು.
ಹಗಲು ಕ್ರಿಕೆಟಿಗರು ಇಲ್ಲಿ ಬಿಯರ್ ಬಾಂಡ್ರಿ ವ್ಯಾಪ್ತಿಯೊಳಗೆ ಆಡುತ್ತಾರೆ. ಆದರೆ ರಾತ್ರಿ ಈ ಮೈದಾನದ ಎದುರಿನ ರಸ್ತೆಯಿಂದ ಸಾರ್ವಜನಿಕರು ಸಾಗುವುದು ಕಷ್ಟ. ಅಷ್ಟುಜನ ಗುಂಡೋಪಂಥರು ಇಲ್ಲಿ ಠಳಾಯಿಸುತ್ತಾರೆ.
ಇದು ಪಾವಗಡ ರಾಜ್ಯ ಹೆದ್ದಾರಿ, ಈ ಮೈದಾನದ ಕೂಗಳತೆಯಲ್ಲೆ ಸಿದ್ಧಾಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯವಿದೆ.
ಮೈದಾನದಲ್ಲಿ ಆಡುವವರು ಬಿಯರ್ ಬೇಲಿ ದಾಟಲೇಬೇಕು, ದಾಟುತ್ತಾರೆ. ಆದರೆ ಇಲ್ಲಿಯ ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು, ಪ್ರಯಾಣಿಕರದ್ದ್ಯಾವ ಕರ್ಮ!
ಈ ಬಿಯರ್ ಬಾಂಡರಿ ದಾಟುವುದು ಎನ್ನುತ್ತಾರೆ ರಕ್ಷಣಾ ವೇದಿಕೆಯ ಯುವ ನಾಯಕ ಸಂಪಕಂಡದ ದಿವಾಕರ ನಾಯ.್ಕ
ಹಾಗಾಗಿ ಈ ಮೈದಾನದಲ್ಲಿ ಆಡುವವರು, ಈ ಕಾಲೇಜಿಗೆ ಹೋಗುವವರು, ಹಾಗೂ ರಾತ್ರಿ ಸಮಯದಲ್ಲಿ ಬಿಯರ್ ಸಮಾರಾಧನೆ ಮಾಡುವವರು ಯಾರ ಮಕ್ಕಳು ಎಂಬುದರ ಬಗ್ಗೆ ಸ್ಥಳಿಯರು ಗಮನಹರಿಸಬೇಕು. ಮತ್ತು ಬಿಯರ್ ಬಾಂಡರಿ ಮಾಡುವಷ್ಟು ಬಾಟಲ್ ಒಗೆದಿರುವ ಕುಡುಕರ ಬಗ್ಗೆಯೂ ಸ್ಪಲ್ಫಸಹಾನುಭೂತಿಯಿಂದಲೇ ಕಾನೂನು ಕ್ರಮದ ಎಚ್ಚರಿಕೆ ಕೊಡಿ ಎನ್ನುವುದು ಸಾರ್ವಜನಿಕರ ಆಗ್ರಹ.
ಇದು ಸತ್ಯಾನಾ?