

ಉದ್ಯೋಗ ಖಾತ್ರಿ ಫಲಾನುಭವಿಗಳ ಬಳಿ ತೆರಳಿ ಆರ್ಥಿಕ ಸಾಕ್ಷರತಾ ವಾರ ಆಚರಣೆ, ವ್ಯಾಪಕಪ್ರಶಂಸೆ
ಆರ್ಥಿಕ ಸಾಕ್ಷರತಾ ವಾರದ ಆಚರಣೆಅಂಗವಾಗಿ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ವಿಭಿನ್ನ ಆರ್ಥಿಕ ಸಾಕ್ಷರತಾ ವಾರ ಆಚರಣೆ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮನಮನೆಯಲ್ಲಿ ನಡೆಯಿತು.
ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಈ ಕುರಿತು ಮಾಹಿತಿ ನೀಡಲಾಯಿತು.
ಕೆಲಸದ ನಡುವೆ ಬಿಡುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಆರ್ಥಿಕ ಸಾಕ್ಷತರಾ ಕೇಂದ್ರದ ಸಮಾಲೋಚಕ ಎ.ಶಬ್ಬೀರ್ ಅಹಮದ್ ಆರ್ಥಿಕ ಸಾಕ್ಷರತಾ ವಾರದ ಆಚರಣೆಯ ಕುರಿತು ಮಾಹಿತಿ ನೀಡಿ ಬ್ಯಾಂಕ್ ನಲ್ಲಿ ಜನಸಾಮಾನ್ಯರಿಗೆ ಕೂಲಿ ಕಾರ್ಮಿಕರಿಗೆ, ಕೃಷಿಕರಿಗೆ ಸಿಗುವ ಸೌಲಭ್ಯಗಳು, ಫ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಿರಿಯ ಸಮಾಲೊಚಕ ಶಿವಶಂಕರ ಎನ್ ಕೆ. ಮನಮನೆ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ನಾಯ್ಕ, ಸಿದ್ದಾಪುರ ಸಿಂಡಿಕೇಟ್ ಬ್ಯಾಂಕ್ ನ ರೋಹಿತ್, ಬ್ಯಾಂಕ್ ಮಿತ್ರ ಲೂರ್ದಿನಾ ಫರ್ನಾಂಡಿಸ್, ಉಪಸ್ಥಿತರಿದ್ದರು.
ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಅವರ ಬಳಿ ತೆರಳಿ ತಿಳುವಳಿ ನೀಡುವ ಮೂಲಕ ಆರ್ಥಿಕ ಸಾಕ್ಷರತಾ ವಾರ ಆಚರಿಸಿದ ಸಿದ್ಧಾಪುರದ ಸಿಂಡಿಕೇಟ್ ಬ್ಯಾಂಕ್ ಮತ್ತು ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರದ ವಿಧಾಯಕ ಕೆಲಸ ಸ್ಥಳಿಯರ ಪ್ರಶಂಸೆಗೂ ಪಾತ್ರವಾಗಿದೆ.

