ಕೆರೆಮನೆಯವರ ಬರಹ- ಕಾಡುವ ಗರ್ಭ…

ಶ್ರೀದೇವಿ ಕೆರೆಮನೆಯವರ ಬರಹ-
ಕಾಡುವ ಗರ್ಭ…
“ಏಯ್, ಸರ್‍ಕಣೇ….
ರಸ್ತಿ ಮ್ಯಾನ್ ನಿಂತ್ಕುಂಡೆ ಸಾಯುಕ್ ಮಾಡಿ?”
ಹಿಂದಿನಿಂದ ಒಂದು ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದೆ.
ಹಿಂತಿರುಗಿದರೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಹೆಂಗಸೊಬ್ಬಳು ದುರುಗುಟ್ಟುತ್ತಾ ನಿಂತಿದ್ದಳು.
ಆಕೆ ಏನು ಮಾಡುತ್ತಾಳೋ ಬಿಡುತ್ತಾಳೋ… ನನಗಂತೂ ಒಂದುಕ್ಷಣ ಮೈ ನಡುಗಿ ಹೋಯ್ತು.
ಹಾಗೆ ನೋಡಿದರೆ ಆಕೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ರಸ್ತೆಯ ಮೇಲೇ ನಿಂತು ಬಸ್‍ಗಾಗಿ ಕಾಯುತ್ತಿದ್ದೆ. ನಾನು ನೋಡುತ್ತಿರುವ ವಿರುದ್ಧ ದಿಕ್ಕಿನಿಂದೇನಾದgೂ ಬಸ್ ಬಂದರೆ, ಅಥವಾ ಯಾವುದಾದರೂ ಗಾಡಿ ಓವರ್ ಟೇಕ್ ಮಾಡಲೆತ್ನಿಸಿದರೆ ನಾನು ಖಂಡಿತಾ ಅಪಘಾತಕ್ಕೆ ಒಳಗಾಗುತ್ತಿದ್ದೆ. ಆದರೂ ಯಾಕೋ ಮುಜುಗರವೆನ್ನಿಸಿ ಸುತ್ತ ಮುತ್ತ ನೋಡಿದರೆ ಅಲ್ಲಿರುವ ಯಾರೆಂದರೆ ಯಾರೂ ನಮ್ಮತ್ತ ಲಕ್ಷಕೊಟ್ಟಿರಲಿಲ್ಲ.
ಆಕೆಯ ಮಾತನ್ನು ಸಹಜ ಎಂಬಂತೆ ಎಲ್ಲರೂ ಸ್ವೀಕರಿಸಿದ್ದರು. ಒಬ್ಬಳು ಮಾನಸಿಕ ಅಸ್ವಸ್ಥಳು ಯಾರ ಮೇಲಾದರೂ ರೇಗಿದರೆ ಸುತ್ತ ನಿಂತು ತಮಾಶೆ ನೋಡುವವರೇ ಅಧಿಕವಾಗಿರುವಾಗ ಯಾರೂ ಕೂಡ ಕುತೂಹಲಕ್ಕೆಂದೂ ನಮ್ಮತ್ತ ನೋಡದಿರುವುದು ನನಗೇ ಅಚ್ಚರಿಯೆನಿಸಿತು.
ಆ ದಿನ ಶಾಲೆಗೆ ಹೋದವಳೇ ನನಗಾದ ಅನುಭವ ತಿಳಿಸಿದೆ.
“ಪ್ರೇಮಾ ಮಳ್ಳಿ ಇರಬೇಕು… ಅವಳು ಹಾಗೇನೇ..” ನನ್ನ ಸಹೋದ್ಯೋಗಿಗಳೂ ನಿರ್ಲಿಪ್ತವಾಗಿ ಹೇಳಿದರು.
ಆ ಊರಿಗೆ ಅಲ್ಲಿ ಪರಿಸರಕ್ಕೆ ಹೊಸಬಳಾದ ನನಗೆ ಯಾಕೋ ಪ್ರೇಮಾಮಳ್ಳಿ ಕುತೂಹಲ ಹುಟ್ಟಿಸಿದ್ದಳು.
ಅದೆಲ್ಲಕ್ಕಿಂತ ಹೆಚ್ಚಾಗಿ ಹಿರಿಯ ಶಿಕ್ಷಕರೊಬ್ಬರು “ಎಲ್ಲಾದ್ರೂ ಅವಳೆದುರಿಗೆ ಈ ಊರಿನ ಹೆಸರು ಹೇಳಿ ಬಿಟ್ಟೀಯಾ…ಅಲ್ಲಿಗೆ £ನ್ನ ಕತೆ ಮುಗಿತು” ಎಂದೂ ಸೇರಿಸಿ ನನ್ನ ಕುತೂಹಲಕ್ಕೆ ಮತ್ತಷ್ಟು ರೆಕ್ಕೆ ಸೇರಿಸಿದ್ದರು. ಹಾಗೆಂದು ಅವಳ ಬಗ್ಗೆ ಕೇಳಿದರೆ ಮಾತ್ರ ‘ಪಾಪ ಬಿಡು, ಅವಳ ಬಗ್ಗೆ ಏನು ಹೇಳೋದು” ಎಂಬ ಕನಿಕರ, ಮರುಕದಲ್ಲಿಯೇ ಉತ್ತರ ಮುಗಿದು ಹೋಗುತ್ತಿತ್ತು.
ದಿನ ಕಳೆದಂತೆ ಹೊಸ ಊರು ಪರಿಚಿತವಾಯಿತು. ಊರಿನ ಜನ ಆತ್ಮೀಯರಾದರು. ಶಾಲಾ ವಾತಾವರಣ ಆಪ್ತವಾಯಿತು. ಸುತ್ತಲಿನ ಜನ ಹೆಚ್ಚಿನ ಸಂಪರ್ಕಕ್ಕೆ ಬಂದರು. ಬೆಳಿಗ್ಗೆ ನಾನು ಶಾಲೆಗೆ ಹೋಗುವ ಹೊತ್ತಲ್ಲಿ ಒಂದಲ್ಲ ಒಂದು ಅಂಗಡಿ ಬಾಗಿಲಲ್ಲಿ ಏನಾದರೂ ಗೊಣಗುತ್ತ ತಲೆತಗ್ಗಿಸಿ ಕಸಗುಡಿಸುತ್ತಿದ್ದ ಆಕೆ ಕೂಡ ಮೊದಲ ದಿನ ಕಂಡಂತೆ ಹೆದರಿಕೆ ಹುಟ್ಟಿಸುತ್ತಿಲ್ಲ.
ಎಲ್ಲೋ ಒಮ್ಮೊಮ್ಮೆ “ಶಾಲೆಗೆ ಹೋತೀ” ಎಂದು ರಾಗವಾಗಿ ಕೇಳಿ, ಕೊನೆಗೆ ಕೇಳಿದ್ದಕ್ಕೆ ಉತ್ತರಿಸುವ ಮುನ್ನವೇ ಅಲ್ಲಿಂದ ಹೊರಟು ಬಿಡುತ್ತಿದ್ದ ಆಕೆಯ ನಡೆ ಎಷ್ಟೋ ಸಲ ಅಚ್ಚರಿ ಎನ್ನಿಸುತ್ತಿತ್ತು, ಕೆಲವು ಸಲ ನಾರ್ಮಲ್ ಎಂದರೆ ಅಗದೀ ನಾರ್ಮಲ್ ಆಗಿರುತ್ತಿದ್ದವಳು ಎಷ್ಟೋ ಸಲ ಯಾರನ್ನೋ ದೊಡ್ಡ ಧ್ವನಿ ತೆಗೆದು ಬೈಯ್ಯುತ್ತ ಕ್ಯಾಕರಿಸಿ ಉಗಿಯುತ್ತ ಇಡಿ ವಾತಾವರಣವನ್ನೇ ರಾಣಾರಂಪ ಮಾಡಿ ಬಿಟ್ಟಿರುತ್ತಿದ್ದಳು.
ಅಷ್ಟಾದರೂ ಸುತ್ತಲಿನ ಜನ ಅದೊಂದು ಸಾಮಾನ್ಯ ಸಂಗತಿ ಎಂಬಂತೆ ಆಕೆಗೆ, ಆಕೆಯ ಬೈಗುಳಕ್ಕೆ ಹೊಂದಿಕೊಂಡು ಬಿಟ್ಟಿದ್ದರು. ಬೆಳಗಿನ ಹೊತ್ತು ತುಂಬಾ ಸ್ವಾಭಾವಿಕವಾಗಿ ವರ್ತಿಸುತ್ತಿದ್ದ ಆಕೆ ಮಧ್ಯದಲ್ಲಿ ಎಲ್ಲೋ ನೆತ್ತಿಗೇರಿದಂತೆ ಕೂಗಾಡುವುದು ದಿನನಿತ್ಯದಷ್ಟೇ ಸಹಜವಾಗಿ ಬಿಟ್ಟಿತ್ತು. ಆ ಊರಿನ ಬಸ್‍ಸ್ಟಾಂಡಿನಲ್ಲಿ ತನ್ನದೊಂದಿಷ್ಟು ಹರಕು ಬಟ್ಟೆಯೊಂದಿಗೆ ಬಿಡಾರ ಹೂಡಿದ್ದಳು.
ದಿನ ಕಳೆದಂತೆ ಆಕೆಯ ವಿಚಾರ ಗೊತ್ತಾಗತೊಡಗಿತು. ಒಂದು ಕಾಲದಲ್ಲಿ ಸುಂದರ ಹೆಂಗಸಾಕೆ.
ಯಾವುದೋ ಕಾರಣÀದಿಂದಾಗಿ ಒಂಟಿಯಾದವಳು. ಬಹುಶಃ ಅಷ್ಟರಲ್ಲಾಗಲೇ ಮನಸ್ಸು ನಿಧಾನಕ್ಕೆ ಸ್ಥಿಮಿತ ಕಳೆದುಕೊಳ್ಳತೊಡಗಿತ್ತು. ಅದನ್ನು ತಮ್ಮ ಲಾಭಕ್ಕಾಗಿ ¨ಳಸಿಕೊಂಡ ಡಾಕ್ಟರ್ ಎಂದು ಹೇಳಿಕೊಂಡ ಕಂಪೌಂಡರ್ ಒಬ್ಬರು ಆಕೆಯನ್ನು ಯದ್ವಾತದ್ವಾ ಬಳಸಿಕೊಂಡರು ಎನ್ನುವ ಮಾತಿದೆ. ವರ್ಷಕ್ಕೊಂದರಂತೆ ಆಕೆ ಹೆರುತ್ತಿದ್ದ ಮಕ್ಕಳನ್ನು ಮುಂಬೈ, ಗೋವಾ ಮುಂತಾದ ದೂರದೂರದ ಊರಿಗೆ ದತ್ತು ಕೊಡುವ ಲೆಕ್ಕದಲ್ಲಿ ಮಾರಿ ಕೈ ತುಂಬ ಹಣ ಮಾಡಿಕೊಂಡ.ಎಲ್ಲೋ ಒಂದು ಎರಡು ಸಾವಿರ ಆಕೆಯ ಕೈಲಿಟ್ಟರೆ ಮುಗಿಯಿತು.
ನನ್ನ ಶಾಲೆ ಇದ್ದ ಊರಿಗೂ ಆಕೆಯ ಯಾವುದೋ ಮಗುವನ್ನು ಕೊಡಲಾಗಿತ್ತಂತೆ. ಅದು ಹೇಗೋ ಆಕೆಗೆ ಗೊತ್ತಾಗಿ ಆ ಊರಿನ ಹೆಸರು ಕೇಳಿದ ಕೂಡಲೇ ಕೆರಳಿದಂತೆ ವರ್ತಿಸುತ್ತಿದ್ದಳಂತೆ. ಆದರೆ ವಯಸ್ಸು ಯಾರಪ್ಪನ ಗಂಟೂ ಅಲ್ಲ. ಆಕೆಗೆ ವಯಸ್ಸಾದ ಹಾಗೆ ಆಕೆ ಮತ್ತೆ ಬೀದಿಗೆ ಬೀಳಬೇಕಾಯಿತು. ಅದೂ ಅಲ್ಲದೆ ಪ್ರತೀ ವರ್µ ಹೊರು,ಹಡೆ ಹಾಗೂ ಕಳೆದುಕೊಳ್ಳು ಎನ್ನುವುದು ಆಕೆಯ ಮನಸ್ಥಿತಿಯನ್ನು ಸಾಕಷ್ಟು ಹಾಳು ಮಾಡಿತ್ತು.
ಕಳೆದುಕೊಂಡ ಮಕ್ಕಳ ನೆನಪು ಆಕೆಯ ಮನಸ್ಸನ್ನು ಆಗಾಗ ಹಾಳು ಮಾಡುತ್ತಿತ್ತು. ಎಲ್ಲಾದರೂ ತನ್ನ ಯೌವನ ಕಾಲದಲ್ಲಿ ತನ್ನನ್ನು ಬಳಸಿಕೊಂಡ ಆ ಊರಿನ ಹಲವಾರು ಹಿರಿತಲೆಗಳನ್ನು ಕಂಡಾಕ್ಷಣ ಭಾವನೆಗಳು ಉದ್ರೇಕಗೊಂಡು ಕೆರಳುತ್ತಿದ್ದಳು. ಆದರೆ ಆಕೆಯ ತಾಯಿಯಂತಹ ಮನಸ್ಸು ಮಾತ್ರ ಹಾಗೇ ಇದೆ. ತನಗೇ ಹೊಟ್ಟೆಗಿಲ್ಲದ ಹೊತ್ತಲ್ಲೂ ಕೈಲಿದ್ದ ತುತ್ತನ್ನು ಬೀದಿ ನಾಯಿಗೆ ಹಾಕಿ ತಾನು ಉಪವಾಸ ಕುಳಿತಿದ್ದನ್ನು ನಾನು ಹಲವಾರು ಸಲ ಕಂಡಿದ್ದೇನೆ. ಇಂದಿಗೂ ಆಕೆ ಯಾರ ಎದುರೂ ಕೈಚಾಚುವುದಿಲ್ಲ. ಅಂಗಡಿಗಳ ಎದುರು ಕಸಗುಡಿಸುತ್ತಾಳೆ. ಅವರು ಕೊಟ್ಟ ಹಣದಿಂದ ಏನನ್ನಾದರೂ ಕೊಂಡು ತಿನ್ನುತ್ತಾಳೆ. ತನಗೆ ಊಟ ಹಾಕುವ ಎರಡು ಮೂರು ಹೋಟೆಲ್‍ಗಳ ಎದುರು ಬೆಳಿಗ್ಗೆ ಬೆಳಿಗ್ಗೆನೇ ಕಸಗುಡಿಸಿ ಸ್ವಚ್ಛ ಮಾಡುತ್ತಾಳೆ. ಅವಶ್ಯಕತೆ ಬಿದ್ದರೆ ಮೀನನ್ನು ಕೊಯ್ದು ಕೊಡುತ್ತಾಳೆ, ಅಂತಹ ಅನಿವಾರ್ಯತೆ ಇದ್ದರೆ ಪಾತ್ರೆಗಳನ್ನೂ ತೊಳೆದಿಡುತ್ತಾಳೆ. ‘ಪ್ರೇಮಾಮಳ್ಳಿ ಪಾತ್ರೆ ತೊಳೆದರೆ ಅದು ಹೊಸದರಂತೆ ಕಾಣುತ್ತದೆ’ ಎಂದು ಹೋಟೆಲ್ ಮಾಲಿಕರುಗಳೆ ಅಭಿಪ್ರಾಯ ಪಡುತ್ತಾರೆ. ಒಂದೆರಡು ದಿನ ಆರೋಗ್ಯ ಸರಿ ಇಲ್ಲದೇ ಮಲಗಿದರೂ ‘ಪ್ರೇಮಾ ಮಲ್ಳಿ ಎಲ್ಲೋದ್ಲು? ಕಾಣುದೇ ಇಲ್ಲ’ ಎಂದು ಊರಿನ ಯಾರಾದರೊಬ್ಬರು ಹುಡುಕಿ ಬರುತ್ತಾರೆ.
ಮತ್ಯಾರಾದರೂ ಊಟ ತಂದಿಡುತ್ತಾರೆ. ಹಾಗಂತ ಆಕೆ ಅವರ ಋಣ ಇಟ್ಟುಕೊಳ್ಳುವುದಿಲ್ಲ. ಅವರ ಮನೆಯ ಅಂಗಳವನ್ನು ಸಗಣಿ ಹಾಕಿ ಸಾರಿಸಿಕೊಟ್ಟು ಒಪ್ಪ ಮಾಡಿಕೊಟ್ಟು ಬರುವವಳೇ. ಹೀಗಾಗಿ ಆಕೆ ಯಾರ ಮನೆಗೆ ಹೋದರೂ ಯಾರೂ ಆಕೆಯನ್ನು ‘ಹೋಗು’ ಎನ್ನುವುದಿಲ್ಲ. ಆಕೆ ರಸ್ತೆಯಲ್ಲಿ ನಿಂತು ಕೂಗಾಡಿದರೂ ಯಾರೂ ಒಂದು ಮಾತೂ ಹೇಳುವುದಿಲ್ಲ. ಎಲ್ಲೋ ಆಕೆ ಹೆಚ್ಚು ಕೆರಳಿದರೆ ಯಾರಾದರೊಬ್ಬರ ಮನೆಯ ಹೆಂಗಸು ಬಂದು ಮನೆಗೆ ಕರೆದೊಯ್ದು ಸಮಾಧಾನ ಮಾಡುತ್ತಾರೆ. ಆದರೂ ಯೌವನದ ದಿನಗಳಲ್ಲಿ ಹೇಗೆ ಹೇಗೋ ಬಳಸಲ್ಪಟ್ಟು, ಹೆಣ್ಣು ಎಂಬ ಕಾರಣಕ್ಕೆ, ಆಕೆಯೊಳಗಿರುವ ಗರ್ಭದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿ, ಕೊನೆಗೆ ಬೀದಿ ಪಾಲಾದ ಪ್ರೇಮಾ ಮಳ್ಳಿ ಆ ಊರು ಬಿಟ್ಟು ಬಂದರೂ ಎಷ್ಟೋ ಸಲ ನೆನಪಿನಲ್ಲಿ ನುಸುಳಿ ನಿಟ್ಟುಸಿರುಡುವಂತೆ ಮಾಡುತ್ತಾಳೆ. ‘ಶಾಲೆಗೆ ಹೋತಿ’ ಎಂಬ ಆಕೆಯ ಪ್ರಶ್ನೆ ಮತ್ತು ಉತ್ತರಕ್ಕೆ ಕಾಯದೆ ಹೊರಟು ಬಿಡುವ ಆಕೆಯ ದಿವ್ಯ ನಿರ್ಲಕ್ಷ ನನ್ನನ್ನು ಕಾಡುತ್ತಲೇ ಇರುತ್ತದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *