ಯಕಶ್ಚಿತ್ ಮನುಷ್ಯನೆ ಸೋಗುಹಾಕಬಲ್ಲ, ಆ ಮತಾಂಧನ ವೇಶ, ಬೂಟಾಟಿಕೆ ಅರಿಯದ ದೇಶ ಪಶ್ಚಾತ್ತಾಪದಿಂದ ಮುಕ್ತವಲ್ಲ

ಯಕಶ್ಚಿತ್ ಮನುಷ್ಯನೆ ಸೋಗುಹಾಕಬಲ್ಲ, ಆ ಮತಾಂಧನ ವೇಶ, ಬೂಟಾಟಿಕೆ ಅರಿಯದ ದೇಶ ಪಶ್ಚಾತ್ತಾಪದಿಂದ ಮುಕ್ತವಲ್ಲ
ಒಬ್ಬ, ‘ನೀವು ಬಹಳ ತಿಳಿದುಕೊಂಡವರಂತೆ ಮಾತಾನಾಡುತ್ತೀರಿ” ಎಂದು ಗೇಲಿಮಾಡುವ ಸೌಜನ್ಯದಲ್ಲಿ ಕೆಣಕಿದ.
ಬಾಳ ಅಂಥಲ್ಲ, ನನ್ನ ಆಸಕ್ತಿಯ ಪತ್ರಿಕೋದ್ಯಮ, ಸಾಹಿತ್ಯ, ರಾಜಕೀಯಗಳ ಬಗ್ಗೆ ಬಹುಶಃ ನಿಮಗಿಂತ ಹೆಚ್ಚು ತಿಳಿದುಕೊಳ್ಳುವ ಪ್ರಯತ್ನದಲ್ಲಂತೂ ಇದ್ದೇನೆ. ಎಂದೆ.
ಹಂಗಲ್ಲ. ನಿಮ್ಮ ಲೆಕ್ಕದಲ್ಲಿ ಓದಿದವರು ಮಾತ್ರ ತಿಳಿದುಕೊಂಡವರು ಎಂಬಂತಿದೆ ಎಂದರು’
ಹೌದು, ಓದಿದವರಿಗೂ ಕೆಲವೊಮ್ಮೆ ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಓದದ, ಓದುವ ಅಭ್ಯಾಸ, ತಿಳಿದುಕೊಳ್ಳುವ ಹವ್ಯಾಸಗಳೇ ಇಲ್ಲದ ಕೆಲವು ಮೂರ್ಖರಂಥವರು ಕೂಡಾ ತಮಗೆ ಗೊತ್ತಿರುವುದೇ ಸತ್ಯ ಎನ್ನುತ್ತಿರುತ್ತಾರಲ್ಲ, ಅವರಿಗಿಂತ ಓದಿದ, ಓದುವ ಉತ್ಸಾಹದ ತಿಳಿದುಕೊಳ್ಳುವ ವ್ಯಸನದ ವ್ಯಕ್ತಿಗಳು ನೂರುಪಾಲು ಶ್ರೇಷ್ಠ ಎಂದೆ.
‘ಅಂದರೆ ಓದಿರದವರು ನಿಷ್ಪ್ರಯೋಜಕರೇ?’ ಆತನ ಪ್ರಶ್ನೆ.
ವಾಸ್ತವವೆಂದರೆ, ಓದು, ಓದಿದ ಮನುಷ್ಯ ಕೂಡಾ ನಿಷ್ಪ್ರಯೋಜಕನಾಗುತ್ತಿರುವ ಅವಧಿಯಿದು.
ಈ ಕಾಲಘಟ್ಟದಲ್ಲಿ ಓದು, ಓದಿನ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಆದರೆ, ಓದದ ವ್ಯಕ್ತಿ ತನ್ನ ಅಕ್ರಮ, ಅನೈತಿಕ ದುಡಿಮೆಯಿಂದ ತಾನೇ ಗ್ರೇಟ್, ಓದಿನ ಅಗತ್ಯ, ಅನಿವಾರ್ಯತೆಯೇನು?! ಎನ್ನುವಂತೆ ವರ್ತಿಸತೊಡಗಿದರೆ….
ಆತ ದುಷ್ಟನಾಗುವ ಜೊತೆಗೆ, ಸಮಾಜವನ್ನು ದಾರಿ ತಪ್ಪಿಸುತ್ತಾನೆ. ಹಾಗಾಗಿ, ಓದು, ಜ್ಞಾನಕ್ಕೆ ದುಡಿಮೆ, ಸಂಪತ್ತಿಗಿಂತ ಹೆಚ್ಚಿನ ಬೆಲೆ, ಮೌಲ್ಯ ಪ್ರಾಪ್ತವಾಗಬೇಕು. ಎಂದೆ.
ಗುತ್ತಿಗೆ, ರಾಜಕಾರಣ, ಅಕ್ರಮ ಅನೈತಿಕ ದುಡಿಮೆಯ ಕೆಲವು ಸಮಾಜ ಕಂಟಕರು ತಮ್ಮ ದಾರಿ ತಪ್ಪಿದ ವರ್ತನೆ, ನಡವಳಿಕೆ ಸಮರ್ಥಿಸಿಕೊಳ್ಳಲಾರದೆ ಶ್ರೀಮಂತಿಕೆ ಪ್ರದರ್ಶನ, ಶಿಕ್ಷಿತರು, ಸಜ್ಜನರ ತೆಗಳಿಕೆ ಮಾಡುತ್ತಾ ತಮ್ಮ ಅವಿವೇಕವನ್ನು ಸಮರ್ಥಿಸುತ್ತಾರೆ. ಅಂಥವರ ಲೆಕ್ಕದಲ್ಲಿ ಶಿಕ್ಷಣ, ಜ್ಞಾನ, ತಿಳಿವಳಿಕೆ ಉಪೇಕ್ಷೆ
ಗೊಳಗಾಗಬಹುದು.
ಆದರೆ…ಯಾವ ಶ್ರೀಮಂತಿಕೆ, ಅಧಿಕಾರ, ಸಂಪತ್ತು ಉಳಿಯುವುದಲ್ಲ.
ಹಾಗಾಗಿ ಅಳಿಯದ ಜ್ಞಾನ, ತಿಳುವಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕು. ಎಂದೆ. ಆತ ವಿತಂಡವಾದಕ್ಕಿಳಿಯುವವನಿದ್ದ ಆತನಿಗೆ ವಿಸ್ತರಿಸಿ ಹೇಳುವ ಪ್ರಯತ್ನ ಮಾಡಿದೆ.
ನೋಡಿ, ನಿಮ್ಮ ಕೆಲಸದ ಬಗ್ಗೆ ನಿಮಗೆ ತಿಳಿದಿರುತ್ತದೆ.
ಆ ವಿಚಾರದಲ್ಲಿ ನಾನು ಅಲ್ಪಜ್ಞಾನಿ, ಹಾಗೇ…. ನನ್ನ ಆಸಕ್ತಿಯ ಪತ್ರಿಕೋದ್ಯಮ, ರಾಜಕಾರಣ, ಸಾಹಿತ್ಯಗಳ ಬಗ್ಗೆ ನನಗೆ ತಿಳುವಳಿಕೆ ಇದೆ. ಈ ಕ್ಷೇತ್ರಗಳ ಅನುಭವಿಗಳು, ಜ್ಞಾನಿಗಳು ನನಗೆ ಹೇಳಿದರೆ ಕೇಳಬಹುದು, ಆದರೆ ಪ್ರಾಥಮಿಕ ಶಾಲಾ ಶಿಕ್ಷಣವನ್ನೂ ಸರಿಯಾಗಿ ಪೂರೈಸದ ಜನಪ್ರತಿನಿಧಿಯೋ, ಮುಖಂಡನೋ, ಅಥವಾ ಮತ್ತ್ಯಾರೋ ತನ್ನ ಅಲ್ಪ ತಿಳುವಳಿಕೆ, ಅನುಭವದ ಆಧಾರದಲ್ಲಿ ಹತ್ತದಿನೈದು ವರ್ಷಗಳ ಸಾಹಿತ್ಯ,ಪತ್ರಿಕೋದ್ಯಮ, ರಾಜಕೀಯ ಅನುಭವ ಪಡೆಯುವ ಮೊದಲೇ ಸಾಹಿತ್ಯ, ರಾಜಕಾರಣಪತ್ರಿಕೋದ್ಯಮಗಳನ್ನು ಓದಿ, ಅನುಭವಿಸಿ, ಅಭ್ಯಸಿಸಿ, ಸ್ನಾತಕೋತ್ತರ ಪದವಿ ಮುಗಿಸಿರುವ ನನಗೆ ಈ ಕ್ಷೇತ್ರಗಳ ಬಗ್ಗೆ ಯಾರೋ ಒಬ್ಬ ಅಕಸ್ಮಾತ್ತಾಗಿ ಅಥವಾ ಅಕ್ರಮಗಳ ಮೂಲಕ ಗೆದ್ದುಮುಖಂಡನೋ ಜನಪ್ರತಿನಿಧಿಯೋ ಮತ್ತೇನೋ ಆದವನು ಉಪದೇಶ, ಮಾರ್ಗದರ್ಶನ ಮಾಡಿದರೆ…
ಅದನ್ನೆಲ್ಲಾ ಕೇಳಿ ಅಂಥ ಅವಿವೇಕಿಗಳನ್ನೆಲ್ಲಾ ಖುಷಿಪಡಿಸುವ ಅನಿವಾರ್ಯತೆ ಯಂತೂ ನನ್ನಂಥವನಿಗಿಲ್ಲ ಎಂದೆ.
ಆತನಿಗೆ ಎಷ್ಟು ಅರ್ಥವಾಯಿತೋ? ಮತ್ತೆ ಆತ ‘ಹಾಗಾದರೆ ಈಗ ಪ್ರಾಮಾಣಿಕತೆ, ನೈತಿಕತೆ, ನೀವು ಹೇಳುವ ಇವುಗಳನ್ನೆಲ್ಲಾ ಇಟ್ಟುಕೊಂಡು ಬದುಕಲು, ಗೆಲ್ಲಲು ಸಾಧ್ಯವೆ? ಎಂದ.
‘ಹೌದು ಎಂದರೆ, ಹೌದು. ಇಲ್ಲ ಎಂದರೆ ಇಲ್ಲ ಎಂದೆ.’
ಆತ ಕೆಲವು ದುಷ್ಟರ ಗೆಲುವು, ಸಜ್ಜನರ ಸೋಲಿನ! ಬಗ್ಗೆ ವಿತಂಡವಾದಕ್ಕಿಳಿಯುವ ಲಕ್ಷಣಗಳಿದ್ದವು! ಆತನ ತಿಳುವಳಿಕೆ, ಹೀನತನಗಳ ಸಮರ್ಥನೆ ಬಗ್ಗೆ ಪಿಚ್ಚೆನಿಸಿತು.
ಹೊಸನಗರದ ಶಾಸಕರಾಗಿದ್ದ ಸ್ವಾಮಿರಾವ್ ಬಹಳ ವರ್ಷಗಳ ಹಿಂದೆ ‘ಸಹಿ ಮಾಡದ ಅಶಿಕ್ಷಿತರಿಗೆ ಸರ್ಕಾರದ ಸೌಲಭ್ಯಗಳಿಲ್ಲ’ ಎಂದು ತಮ್ಮ ಕಛೇರಿಯಲ್ಲಿ ಬರೆದು ತೂ(ಕೂ)ಗು ಹಾಕಿದ್ದರಂತೆ.
ಅವರ ಕಾಳಜಿ ಶಿಕ್ಷಿತರಲ್ಲದವರಿಗೆ ಏನೂಕೊಡಬಾರದೆನ್ನುವುದಕ್ಕಿಂಥ ಸರ್ಕಾರಿ ಸೌಲತ್ತಿನ ಆಸೆಯಿಂದಾದರೂ ಅವರು ಕಲಿಯಲಿ ಎನ್ನುವ ಜನಪರತೆ ಅಂತರ್ಗತವಾಗಿತ್ತು.
ಈ ಚರ್ಚೆಯ ಬಗ್ಗೆ ಮಾತನಾಡುತ್ತಾ ನಂತರ ಯೋಚಿಸಿದಾಗ ಲಂಕೇಶ್ ಅದೆಲ್ಲೋ ದಾಖಲಿಸಿದ ಹೇಳಿಕೆಯೊಂದು ನೆನಪಿಗೆ ಬಂತು.
“ದಣಿ ಕರೆಯುವ ಮುನ್ನ ಕಾಲೊತ್ತಲು ಹೋಗುವ ಜನರ ಸ್ವಾಭಿಮಾನ ಶೂನ್ಯ ದೇಶ ನಮ್ಮದು. ನಮ್ಮಜನರ ನಡವಳಿಕೆ ಎಷ್ಟು ಹದಗೆಟ್ಟಿದೆಯೆಂದರೆ…. ನಾವು ಸಿಪಾಯಿ.ಸೈನಿಕ,ಬಡಮಾಸ್ತರ್! ಗುಮಾಸ್ತನಾಗುವಲ್ಲೇ ಸಾರ್ಥಕತೆ ಅನುಭವಿಸಿ,ರೋಮಾಂಚಿತರಾಗುತ್ತೇವೆ. ಈ ಥರದಯುವಜನಾಂಗವಂತೂ ದೇಶಕಟ್ಟಲು ಸಾಧ್ಯವಿಲ್ಲ’
ಎಂಬರ್ಥದ ಲಂಕೇಶ್ ಹೇಳಿಕೆ ಮತ್ತೆ ಮತ್ತೆ ನೆನಪಾದಂತಾಯಿತು.
ದೇಶ, ಸಮಾಜಕಟ್ಟುವ ಯುವಜನತೆ ಯಕಶ್ಚಿತ್ ಜೀವನ ನಿರ್ವಹಣೆಯ ಸರ್ಕಾರಿ ನೌಕರಿ, ಸುಲಭಗಳಿಕೆಯ ಅಡ್ಡದಾರಿ ಗಿಳಿಯುವಂತೆ ನಮ್ಮ ಯುವ ಭಾರತ ಪ್ರೇರೇಪಿಸುತ್ತಿದೆ. ಹೀಗಾದರೆ ಭವಿಷ್ಯವೇನು? ಎಂದು ಆತಂಕಗೊಂಡೆ. ಆಗ ಮತ್ತೆ ನನ್ನ ಮಾನಸ ಗುರು ಲಂಕೇಶ್ ನೆರವಿಗೆ ಬಂದರು.
….. ಬದುಕು ಸಾಗುವುದೇ ಹಾಗೆ….
ಯಾರಾದರೂ ನನಗೆ ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೀರಿ!’’ ಎಂದರೆ ಆಶ್ಚರ್ಯಪಡುತ್ತೇನೆ.
ನಾನು ಕಷ್ಟಪಟ್ಟೆನೆ? ಹುಡುಗ ಕಾಡಿನಲ್ಲಿ ಅಲೆದು ಚಿಟ್ಟೆಗಳ ಬೆನ್ನುಹತ್ತಿ ಕಷ್ಟಪಟ್ಟನೆ? ಕವಿ ಕಾವ್ಯ ರಚಿಸುತ್ತಾ ಕಷ್ಟಪಟ್ಟೆನೆ? ನಮ್ಮೂರ ಕಮ್ಮಾರ ಕುಲುಮೆಯ ಎದುರು ಕೂತು ಖುಷಿಯಿಂದ ಕೆಲಸಮಾಡುತ್ತಾನಲ್ಲ ಅವನು ಕಷ್ಟಪಟ್ಟನೆ? ಇಲ್ಲ. ಕಷ್ಟಪಟ್ಟವರು ಎಲ್ಲರಿಗೆ ಕಷ್ಟ ಕೊಡುವವರು, ಅವರು ಇಷ್ಟವಿಲ್ಲದೆ ಕೆಲಸ ಮಾಡುವವರು.
ಇಲ್ಲ ಬದುಕು ಹಾಗಿರುವುದಿಲ್ಲ.
ಬದುಕಿನ ಸ್ಪೂರ್ತಿ ಅನೇಕರೀತಿ ಇರುತ್ತದೆ.ರಾಜನೊಬ್ಬನ ಆಸ್ಥಾನದ ಭಟ್ಟಂಗಿಯಾದ ಪಂಡಿತ ಇವತ್ತು ಯಾವ ಹೊಗಳಿಕೆಯಿಂದ ತನ್ನ ದೊರೆ ಪ್ರಸನ್ನನಾಗುತ್ತಾನೆ ಎಂದು ಕೇಳಿಕೊಂಡುಖುಷಿಗೊಂಡಿರುತ್ತಾನೆ.
ಹಾಗೆಯೇ ಆಧುನಿಕ ಪಂಡಿತ ತನ್ನ ಮುಂದಿನ ಸೆಮಿನಾರ್‍ನಲ್ಲಿ ಯಾವ ಮಾತು ಹೇಳಿದರೆ ಎಲ್ಲರೂ ಥ್ರಿಲ್‍ಆಗಿ ವಿಮಾನದಲ್ಲೆಲ್ಲ ಚರ್ಚಿಸುತ್ತಾರೆ. ಎಂದು ಮುಂಜಾನೆಯೇ ಯೋಚಿಸಿ, ಆನಂದಗೊಂಡಿರುತ್ತಾನೆ. ಇದನ್ನೇ ಡಕಾಯಿತ, ಜೇಬುಗಳ್ಳ ಜ್ಯೋತಿಷಿ, ಗೂಂಡಾ-ಎಲ್ಲರಿಗೆ ಅನ್ವಯಿಸಬಹುದು.
…… ಜೀನಿಯಸ್‍ಗಳನ್ನು ಕಂಡು ಅಚ್ಚರಿಪಡುವ ಮನುಷ್ಯರು ಜಿನಿಯಸ್‍ಗಳಿಗೆ ಚಿತ್ರ-ವಿಚಿತ್ರ ಗುಣಗಳನ್ನು ಆರೋಪಿಸಿದ್ದಾರೆ.
ಜೀನಿಯಸ್ ಮುಖ್ಯವಾಗಿ ಕ್ರೀಯಾಶೀಲ ವ್ಯಕ್ತಿ, ತನ್ನೊಳಗೆ ಹುದುಗಿರುವ ತನ್ನತನವನ್ನು ಪರಿಭಾವಿಸುತ್ತಲೇ ಲೋಕದೊಂದಿಗೆ ಪ್ರತಿಕ್ರಿಯೆ ನಡೆಸುತ್ತಿರುವವನು. ಸಾಮಾನ್ಯತ್ವ, ಹೊಂದಾಣಿಕೆ ಮತ್ತು ಬುದ್ಧಿವಂತಿಕೆಯನ್ನು ಮೆಚ್ಚುವವರನ್ನು ತನ್ನ ಕ್ರಿಯಾಶೀಲ ಗುಣದಿಂದಾಗಿಯೇ ಜೀನಿಯಸ್ ಬೆಚ್ಚಿಬೀಳಿಸುತ್ತಾನೆ. ಇದರಿಂದಾಗಿಯೇ ಪ್ಲೇಟೋ ಕವಿಗಳನ್ನು ತನ್ನ ಕನಸಿನ ರಾಜ್ಯದಿಂದ ಹೊರಗಿಟ್ಟ. ಅವರು ಅಪಾಯಕಾರಿಗಳು ಎಂದು ಹುಚ್ಚರು ಎಂಬಂತೆನೋಡುತ್ತಾರೆ. ಆದರೆ ಒಂದು ವಿಚಿತ್ರವೆಂದರೆ, ಈ ಜಿನಿಯಸ್‍ಗಳು ಎಂದೂ ಹುಚ್ಚರಾಗಿಲ.್ಲ ಲೋಕಕ್ಕೆ ಹುಚ್ಚಾಗಿ ಕಾಣುವ ವೈಚಿತ್ರ್ಯದೊಳಗೇ ಈ ಜೀನಿಯಸ್‍ಗಳು ತುಂಬ
ಒಪ್ಪ-ಒರಣದವರು, ಅಂತಮುರ್ಖಿಗಳಾಗುವ ಇವರು ಹೊಸ ಸಂಬಂಧಗಳನ್ನು ಹೊಸ ಸಮತೋಲನಗಳನ್ನುಕಾಣುವವರು. ಜೀನಿಯಸ್‍ಗಳ ಇನ್ನೊಂದು ಮುಖ್ಯ ಗುಣವೆಂದರೆ, ಅತ್ಯಂತನಿಷ್ಠುರರಂತೆ, ಅಸಹಜರಂತೆ ಕಾಣುವ ಇವರು ಸಮಾಜಕ್ಕೆ ಅಂತಿಮವಾಗಿ ನೀಡುವ ವಸ್ತು ತುಂಬ ಉಪಯುಕ್ತವಾದದ್ದು’ (ಲಂಕೇಶ್)
ಬಹುಶಃ ಈ ಬರಹದ ಆಂತರ್ಯ, ಕಾಳಜಿ ಅರ್ಥವಾದರೆ ಕನಿಷ್ಠ ಅಂಥವರನ್ನು ತಿದ್ದಬಹುದೇನೋ,
ವಿಚಿತ್ರವೆಂದರೆ ಡ್ರೈವಿಂಗ್ ಲೈಸನ್ಸ್‍ಗೆ ನಿಗದಿತ ವಿದ್ಯಾರ್ಹತೆ ಅಪೇಕ್ಷಿಸುವ ದೇಶದ ಆಡಳಿತ ಯಂತ್ರ, ತನ್ನನ್ನು ನಿರ್ದೇಶಿಸುವ ಜನಪ್ರತಿನಿಧಿಗಳು ಕನಿಷ್ಠ ಕಡ್ಡಾಯಪದವಿಧರರಿರಬೇಕೆಂದು ಕಠಿಣ ನಿಯಮವನ್ನೂ ರೂಪಿಸಿಲ್ಲ. ಪ್ರಧಾನಮಂತ್ರಿ, ಆತನ ಸಂಪುಟ ಸಹೋದ್ಯೋಗಿಗಳು, ಸಹಚರರೆ, ನಕಲಿ ಅಂಕಪಟ್ಟಿಗಳ ಪದವಿಧರರಾದರೆ? ಅಂಥವರು ದೇಶಭಕ್ತಿಯ ಕಪಟತನದ ಮುಖವಾಡ ಹಾಕಿದರೆ?
ಅನಾಚಾರ, ಕೊಳ್ಳುಬಾಕತನಗಳ ಸೃಷ್ಟಿಯಾಗಿರುವ ರಾಜಕೀಯ ವ್ಯಭಿಚಾರ, ಬ್ರಷ್ಟಾಚಾರಗಳ ನಿಯಂತ್ರಣಕ್ಕೂ ಅನಕ್ಷರತೆ, ವೈಚಾರಿಕ ಕೊರತೆಗಳಿಗೂ ಹೊಕ್ಕಳು ಬಳ್ಳಿಸಂಬಂಧವಿರುವುದನ್ನು ತೀಕ್ಷ್ಣವಾಗಿ ಪರಿಶೀಲಿಸುವ ಅಗತ್ಯವಂತೂ ಈಗಿದೆ.
ಸುಳ್ಳುಗಳ ನಕಲಿ ದೇಶಭಕ್ತರು ದೇಶ ಆಳುವ ಕಾಲವಿದು, ಇವರನ್ನು ಒದೆಯದ ಮೂರ್ಖ, ನಿರ್ಲಿಪ್ತ ಜನತೆ ಅಂಥವರ ಸನ್ಮಾನ ಸಮಾರಂಭದಲ್ಲಿ ಚಪ್ಪಾಳೆ ಹೊಡೆಯುವ ವಿದೂಷಕರಾಗುತಿದ್ದಾರೆ. ದೇಶ ಬಡವರು, ಬಡವರ ಪರವಿರುವ ಸಮತಾವಾದಿಗಳಿಂದ ಹಾಳಾಗಿಲ್ಲ. ದೇಶಭಕ್ತಿಯ ಬೂಟಾಟಿಕೆಯ ಸೋಗಲಾಡಿ ನಯವಂಚಕರಿಂದ ದೇಶ ಹಾಳಾಗುತ್ತಿದೆ. ಹಿಂದೆ ಕೂಡಾ ಇದೇ ಆಗಿದೆ. ಮತೀಯವಾದಿಗಳು ದೇಶಪ್ರೇಮದ ಸೋಗಿನಲ್ಲಿ ಜರ್ಮನಿ, ರಷ್ಯಾ ಹಾಳುಗೆಡವಿದ್ದನ್ನು ಭಾರತೀಯರಿಗೆ ಪರಿಚಯಿಸುವವರು ಯಾರು? -ನಿಮ್ಮ ಕನ್ನೇಶ್ (ಸಂ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *