ಪ್ರೀತಿಯ ಕರೆ
ಪ್ರೀತಿಯಲ್ಲಿ ನನ್ನ ಕೂಗುತ್ತಿರೆ ಚಿನ್ನ
ನನ್ನ ಮನಸ್ಸಿನ ಉಯ್ಯಾಲೆಯಲ್ಲಿ
ತೂಗುತಲಿ ನೀನು
ಪ್ರೀತಿಯಲ್ಲಿ ನನ್ನ ಕೂಗುತ್ತಿರೆ
ಗಿರಿ,ಕಾನು,ಭಾನು,
ಮೌನದಲ್ಲೆ ಇರುವಾಗ
ನಿನ್ನ ಪ್ರೀತಿ ತಂಗಾಳಿ
ಚಿನ್ನಾಟವಾಡಿ ಕುಣಿಸುತ್ತಿರೆ ಮೈಮನಸ,
ನಾ…ಕುಣಿದೇ ಮನಸೋತು
ನಲ್ಲೆ ನಿನ್ನ ಕೂಗಿಗೇ.
ಗಲ್ಲ,ಗಲ್ಲ, ಸೋಕಿ
ಚಲ್ಲುತ್ತಿರೆ ಕಿರುನಗೆಯ
ನಿನ್ನ ಪ್ರೀತಿ ರೋಮಾಂಚನಕ್ಕೆ
ನಾ ಸೋತು ಹೋದೆ
ನಲ್ಲೆ ನಿನ್ನ ಕೂಗಿಗೇ
ರತಿ ರಂಬೆ ಎಲ್ಲಾ
ಮತಿಗೆಟ್ಟು ಹೋದರು
ನಿನ್ನ ರೂಪ ರಾಶಿಗೆ
ನಮ್ಮ ಪ್ರೀತಿ ಭಾಷೆಗೆ
ನಿಂತರೆ ನೀನು, ಬೇಲೂರ ಬಾಲೆ
ಕುಂತರೆ ನೀನು ಶಾಂತಲೆಗೆ ಸೋಲು
ಪ್ರೀತಿಯಲಿ ನೀನು ಕೂಗುತ್ತಿರೆ
ನನ್ನ ಮನಸಿನುಯ್ಯಾಲೆಯಲಿ
ತೂಗುತಲಿ ನೀನು.
-ಎಮ್.ವಿಠ್ಠಲ ಅವರಗುಪ್ಪ