

ಇಂಥದೊಂದು ಪ್ರಶ್ನೆ ಈಗ ಮತ್ತೆ ಧುತ್ತನೆ ಎದ್ದಿದೆ. ರಾಜ್ಯ ಸರ್ಕಾರ ಜಾತಿವಾರು ಜನಗಣತಿ ಪ್ರಾರಂಭಿಸಿರುವುದರಿಂದ ಕರಾವಳಿ ಮಲೆನಾಡಿನ ಜನತೆ ಅದರಲ್ಲೂ ವಿಶೇಷವಾಗಿ ಅನಾದಿಕಾಲದಿಂದ ದೀವರು-ದೇವರ ಮಕ್ಕಳೆಂದು ಹಿನ್ನೆಲೆ ಉಳಿಸಿಕೊಂಡು ಕೆಲವು ಭಾಗದಲ್ಲಿ ಕಾಲಾನಂತರದಲ್ಲಿ ಹಳೆಪೈಕ, ನಾಮಧಾರಿ, ಹಾಲಕ್ಷತ್ರಿಯ ಎಂದೆಲ್ಲಾ ಬರೆಯಿಸಿಕೊಂಡ ಮಲೆನಾಡಿನ ವಿಶಿಷ್ಟ ಪಂಗಡಕ್ಕೆ ಈಗ ಮತ್ತೊಮ್ಮೆಅಸ್ಮಿತತೆ,ಅನನ್ಯತೆಯ ಪ್ರಶ್ನೆ ತಲೆದೋರಿದೆ.
ವಾಸ್ತವದಲ್ಲಿ ದೀವರು ದೇವರ ಮಕ್ಕಳೆಂದು ಅನಾದಿಕಾಲದಿಂದ ಕರೆಯಿಸಿಕೊಂಡ ಕೃಷಿ ಪ್ರಧಾನಸಮುದಾಯವೊಂದಕ್ಕೆ ಕಾಲನ ಹೊಡೆತ ಬಲವಾಗಿಯೇ ಬಿದ್ದಿದೆ.


1800 ರ ಕಾಲದಲ್ಲಿ ಜಾತಿವಾರು ಜನಗಣತಿಯಾದಾಗ ಮಹಾರಾಷ್ಟ್ರ, ಮದ್ರಾಸ್, ಮೈಸೂರು ಪ್ರಾಂತಗಳಲ್ಲಿ ಮಲೆನಾಡು ಕರಾವಳಿಯ ದೀವರನ್ನು ಮಹಾರಾಷ್ಟ್ರ ಪ್ರಾಂತದಲ್ಲಿ ಹಳೇಪೈಕ-ನಾಮಧಾರಿಗಳೆಂದು, ಮದ್ರಾಸ್ ಪ್ರಾಂತದಲ್ಲಿ ಪೂಜಾರಿ, ಬಿಲ್ಲವ ಈಳಿಗರ್
ಎಂದು ಹಳೆ ಮೈಸೂರು ಪ್ರಾಂತದಲ್ಲಿ
ಈಡಿಗರು, ದೀವರೆಂದು ವಿಭಿನ್ನವಾಗೇ ಗುರುತಿಸಲಾಗಿತ್ತು.
ಇದರ ಪರಿಣಾಮವಾಗಿ ಉತ್ತರಕನ್ನಡ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹಿಂದೂ(!) ನಾಮಧಾರಿ ಎಂದು ಗುರುತಿಸಲಾಗಿತ್ತು. ಹಳೇ ಮೈಸೂರು ಭಾಗದಲ್ಲಿ ಈಡಿಗರು ದೀವರೆಂದು ಗುರುತಿಸಲಾಗಿತ್ತು. ವಾಸ್ತವದಲ್ಲಿ ಯಲ್ಲಾಪುರ, ಶಿರಸಿ, ಸಿದ್ಧಾಪುರ,ಸಾಗರ ಸೊರಬ, ಹೊಸನಗರ ತೀರ್ಥಳ್ಳಿ ಶೃಂಗೇರಿ ಭಾಗದ ಕೃಷಿ ಪ್ರಧಾನ ಸಮುದಾಯವೊಂದು ದೀವರು ಎಂದು ಗುರುತಿಸಿಕೊಂಡಿತ್ತು.
ಅನೇಕ ವೈಶಿಷ್ಟ್ಯ, ಸಾಮ್ಯತೆಗಳ ಹಿನ್ನೆಲೆಯಲ್ಲಿ ಈ ಭಾಗದ ದೀವರು ದೀವರು, ಅಥವಾ ದೀವರ ಮಕ್ಕಳು/ದೇವರ ಮಕ್ಕಳೆಂದು ಗುರುತಿಸಿಕೊಳ್ಳುವುದೇ ಸರಿ. ಆದರೆ ಪ್ರಾಂತ, ಪ್ರಾದೇಶಿಕ ವಿಭಾಗಗಳ ಹಿನ್ನೆಲೆಯಲ್ಲಿ ದೀವರು ನಾಮಧಾರಿಗಳಾಗಿ, ಈಡಿಗರಾಗಿ ತಮ್ಮ ಕುಲದ ಅನನ್ಯತೆ, ಅಸ್ಮಿತೆಯನ್ನೇ ಮರೆತಿದ್ದಾರೆ ಎನ್ನುವುದೇ ವಾಸ್ತವ.

ಆದರೆ ಈ ಬಗ್ಗೆ ಚಿಂತನೆ ಮಾಡದ, ಯೋಚಿಸದ ಸಮುದಾಯದ ಮುಖಂಡರು ಆಯಾಕಾಲದ ಅಗತ್ಯ ಅನುಕೂಲತೆಗೆ ತಕ್ಕಂತೆನಾಮಧಾರಿಗಳು ಈಡಿಗರು ಬಿಲ್ಲವರು ಎಂದೆಲ್ಲಾ ಗುರುತಿಸಿಕೊಂಡಿದ್ದಾರೆ. ಆದರೆ ಈ ಶತಮಾನದ ಅವಕಾಶವೆನ್ನುವಂತೆ ದೀವರು ಈಗಿನ ಜಾತಿ ಜನಗಣತಿಯಲ್ಲಿ ‘ದೀವರು’ ಎಂದು ನಮೂದಿಸಿಕೊಳ್ಳುವ ಒಂದು ಸುವರ್ಣ ಅವಕಾಶವಿದೆ. ಆದರೆ, ಆಯಾ ಸಂದರ್ಭಗಳ ಅನುಕೂಲತೆ ಹಿನ್ನೆಲೆಯಲ್ಲಿ ಅನೇಕರು ಈ ಬಾರಿ ನಾವೆಲ್ಲಾ ‘ಈಡಿಗ’ ಎಂದು ಬರೆಸಿಕೊಳ್ಳಬೇಕು. ಈಡಿಗ ನಾಮಧಾರಿ
ಎಂದು ಬರೆಸಬೇಕು. ಎಂದೆಲ್ಲಾ ಚರ್ಚಿಸುತ್ತಿರುವ ವಿದ್ಯಮಾನ
ಪ್ರಸ್ತುತದಲ್ಲಿದೆ.

https://www.youtube.com/watch?v=fDMljh0LIAg
ವಾಸ್ತವವೆಂದರೆ ಜಾತಿ ಜನಗಣತಿ ಅರ್ಜಿ ನಮೂನೆಯಲ್ಲಿ ನಾಮಧಾರಿ, ಈಡಿಗ, ದೀವರ ಎಂದು ಪ್ರತ್ಯೇಕವಾಗಿ ನಮೂದಿಸಲು ಅವಕಾಶವಿದೆಯೇ ಹೊರತು, ಈಡಿಗ ನಾಮಧಾರಿ, ಈಡಿಗರ ದೀವರು ಅಥವಾ ಈಡಿಗ ಬಿಲ್ಲವ ಎಂದು ನಮೂದಿಸಲು ಅವಕಾಶವೇ ಇಲ್ಲ.
ಹಾಗಾಗಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ದೀವರು, ‘ದೀವರು’(ದೀವರ) ಎಂದು ಉಪಜಾತಿ ಬಗನೇ ದೀವರೋ, ತೆಂಗಿನ ದೀವರೋ ಎಂದುಬರೆಯಿಸಿಕೊಳ್ಳಬಹುದು. ಆದರೆ, ಈಡಿಗ ನಾಮಧಾರಿ, ಈಡಿಗ ಹಳೆಪೈಕ! ಈಡಿಗ ದೀವರೆಂದುನಮೂದಿಸಿಕೊಳ್ಳಲು ಅವಕಾಶವಿದೆಯೇ ಎನ್ನುವುದನ್ನು ಆಯಾ ಜಿಲ್ಲಾಧಿಕಾರಿಗಳೇ ಸ್ಪಷ್ಟಪಡಿಸಬೇಕು. ಈ ನಡುವೆ ದೀವರು ಜಾತಿ ಜನಗಣತಿ ಅರ್ಜಿಯಲ್ಲಿ ಎನೆಂದು ಬರೆಯಿಸಿಕೊಳ್ಳಬೇಕೆಂಬ ಬಗ್ಗೆ ಕೆಲವು ಪ್ರಮುಖರು ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ.

ತೆಂಗಿನದೀವರು/ ಕಾನದೀವರು
ನಮ್ಮ ಸಮುದಾಯದ ಅನೇಕ ಪ್ರಮುಖರು ಈಡಿಗರೊಂದಿಗೆ ಸಂಪರ್ಕ, ಸಂಬಂಧಹೊಂದಿ ಈಡಿಗರೇ ಆಗಿಹೋಗಿದ್ದಾರೆ. ಹಾಗಾಗಿ ನಾವು ಈಡಿಗ, ದೀವರು, ಕಾನದೀವರು/ತೆಂಗಿನದೀವರು ಎಂದು ನಮೂದಿಸಿಕೊಳ್ಳುವುದೇ ಸೂಕ್ತ
-ಚಂದ್ರಶೇಖರ್ ಶಿರವಂತೆ
ಚಿತ್ರಸಿರಿ,ಸಿರವಂತೆ ಸಾಗರ
(ಮೊ-9449698979)
ಈಡಿಗ ದೀವರು
ರಾಜ್ಯಮಟ್ಟದಲ್ಲಿ ಈಡಿಗ ಹೆಸರಿನಡಿ ನಾವೆಲ್ಲಾಸಂಘಟಿತರಾಗಿರುವುದರಿಂದ ಈಡಿಗ,(ನಾಮಧಾರಿ) ದೀವರು ಕಾನದೀವರು/ತೆಂಗಿನದೀವರು ಎಂದು ನಮೂದಿಸುವುದು ಸೂಕ್ತ ಎನ್ನುವುದು ನನ್ನ ಭಾವನೆ.
ಭೀಮಣ್ಣ ನಾಯ್ಕ ಅಧ್ಯಕ್ಷರು ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್(ಶಿರಸಿ.)

ಗೊಂದಲ ಬೇಡ.
ಹಿಂದಿನ ದಾಖಲಾತಿ, ಈಗಿನ ದಾಖಲಾತಿಗಳ ನಡುವೆ ವ್ಯತ್ಯಾಸ ಗೊಂದಲಗಳು ಉಂಟಾಗಿ ತೊಂದರೆಯಾಗದಂತೆ ಉತ್ತರ ಕನ್ನಡದ ದೀವರು ನಾಮಧಾರಿ, ದೀವರು ಎಂದು ದಾಖಲಿಸುವುದೇ ಉತ್ತಮ, ಸೂಕ್ತ ಎನಿಸುತ್ತಿದೆ.-ಮಂಜುನಾಥ ಹೊಸಳ್ಳಿ,ಸಿದ್ಧಾಪುರ.
ಈಡಿಗ-ನಾಮಧಾರಿ
ಈಡಿಗರಲ್ಲಿ 25ಉಪಜಾತಿಗಳಿವೆ.ಹಾಗಾಗಿ ಕಾಲಂನಂ 6ರಲ್ಲಿ ಈಡಿಗ, ಕಾಲಂ ನಂ 7ರಲ್ಲಿ ನಾಮಧಾರಿ, ಕಾಲನಂ 8ರಲ್ಲಿ ಉಪಜಾತಿ ತೆಂಗಿನದೀವರು/ಕಾನದೀವರು ಬರೆದುಕೊಳ್ಳಬಹುದು
-ಡಾ.ನಾಗೇಶ್ ನಾಯ್ಕ (ಮೊ-9481464149) (ಅಧ್ಯಕ್ಷರು ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ)
ಈಡಿಗ-ದೀವರು
ಜಾತಿವಾರು ಜನಗಣತಿಯ ದಾಖಲೆ ಮುಂದೆ ಶಾಶ್ವತದಾಖಲೆಯಾಗುತ್ತದೆ. ಹಾಗಾಗಿ ದೀವರು, ಈಡಿಗ ದೀವರು, ಬೈನೇದೀವರು ಎಂದು ದಾಖಲಿಸುವುದೇ ಸರಿ.
-ಭಾಸ್ಕರ್ ನಾಯ್ಕ ಹಳ್ಳಿಬೈಲು,(ಬೆಂಗಳೂರು)
(ಮೊ-9902588176 )

ಈಡಿಗ-ದೀವರು ಅಥವಾ ನಾಮಧಾರಿ.
ರಾಜ್ಯ-ರಾಷ್ಟ್ರಮಟ್ಟದಲ್ಲಿ ನಮ್ಮ ಸಮುದಾಯವನ್ನು ಈಡಿಗರೆಂದೇ ಪರಿಗಣಿಸುತ್ತಾರೆ. ಹಾಗಾಗಿ ನಾವೆಲ್ಲಾ ಈಡಿಗ/ದೀವರು/ ನಾಮಧಾರಿ/ಹಳೆಪೈಕ/ಬಿಲ್ಲವ ಪೂಜಾರಿಗಳೆಂದು ನಮೂದಿಸುವುದು ಸೂಕ್ತ.
-ರೋಹಿದಾಸ
ನಾಯಕ ಕುಮಟಾ
ಅಧ್ಯಕ್ಷರು ಜಿಲ್ಲಾ ಸಾ.ಪ.(ಉ.ಕ)(ಮೊ-
9448343127)
ಹಳೆಪೈಕ-ದೀವರು
ಉತ್ತರ ಕನ್ನಡ ಮತ್ತು ಶಿವಮೊಗ್ಗ ದೀವರಿಗೆ ದೀವರು,ಹಳೆಪೈಕ ಎನ್ನುವುದಕ್ಕೆ ವಿಶಿಷ್ಟಚರಿತ್ರೆ,ಇತಿಹಾಸಗಳೆಲ್ಲಾ ಇವೆ.ಈ ನಾಮಧಾರಿ ಎನ್ನುವುದಕ್ಕೆ ಯಾವ ಅರ್ಥಗಳೂ ಇಲ್ಲ. ದೀವರು ಆರ್ಯರಲ್ಲ ಹಾಗಾಗಿ ಆರ್ಯ ಈಡಿಗ, ದೀವರು,ನಾಮಧಾರಿ ಗಳೆಂದು ಬರೆದುಕೊಳ್ಳುವುದು ಸರಿಯಲ್ಲ.ಹಾಗಾಗಿ ದೀವರುನಾಮಧಾರಿಗಳೆಂದುಕೊಳ್ಳುವವರೆಲ್ಲಾ ಹಳೆಪೈಕ ದೀವರು ಎಂದು ನಮೂದಿಸುವುದೇಸರಿ.ಈಡಿಗ, ನಾಮಧಾರಿಗಳೆಲ್ಲಾ ಸಾಂದರ್ಭಿಕವಾಗಿ ದಾಖಲಾದವುಗಳು.
-ಡಾ.ವಿಷ್ಣು ನಾಯಕ,ಸಾಹಿತಿಗಳು ಅಂಕೋಲಾ.

ದೀವರ- ದೀವರು ಆದಿಯೋಧರು. ಹಾಗಾಗಿ ಜಾತಿ ಜನಗಣತಿಯಲ್ಲಿ ‘ದೀವರ” ಎಂದು ಬರೆಸುವುದೇ ಸೂಕ್ತ.ದೀವರು ಹೆಂಡ ತೆಗೆಯುವ ಈಡಗರಲ್ಲ
-ಮಧುರಾವ್ ಮಡೇನೂರು (ಶಿವಮೊಗ್ಗ)
(4 ವರ್ಷಗಳ ಹಿಂದಿನ ಸಮಾಜಮುಖಿಯ ಈ ಲೇಖನ, ಚರ್ಚಿತ ವಿಷಯ. ಮಾಹಿತಿಗಾಗಿ ಇದನ್ನು ಇಲ್ಲಿ ಪ್ರಕಟಿಸಲಾಗಿದೆ.)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
