ಲೋಕಸಭೆ ಸಮರ ೨೪- ಚುನಾವಣಾ ಗಾಸಿಪ್!‌ ಅನಂತಕುಮಾರ ಹೆಗಡೆ ಸಿಟ್ಟು ಮಾಡಿಕೊಳ್ಳುತ್ತಿರುವುದೇಕೆ?

ಘಟನೆ-೧-

ಲೋಕಸಭೆ ಚುನಾವಣೆಯ ಉತ್ತರ ಕನ್ನಡ ಟಿಕೆಟ್‌ ವಂಚಿತ ಅನಂತಕುಮಾರ ಹೆಗಡೆ ತನ್ನ ಲಾಗಾಯ್ತಿನ ಗಿಮಿಕ್‌ ಗಳೆಲ್ಲಾ ಕೈಕೊಡುತಿದ್ದಂತೆ ಪ್ರತಿ ಚುನಾವಣೆ ನಂತರ ಸೇರಿಕೊಳ್ಳುವ ತಮ್ಮ ಮನೆಯ ಅಂಡರ್‌ ಗ್ರೌಂಡ್‌ ಸೇರಿಕೊಂಡರಂತೆ ಎರಡೇ ದಾರಿಗಳಿರುವ ಆ ಅಂಡರ್‌ ವರ್ಲ್ಡ್ ಗೆ ಈ ಹಿಂದೆ ಎರಡು ಜನರಿಗೆ ಮಾತ್ರ ಪ್ರವೇಶ ಅವಕಾಶವಿತ್ತಂತೆ. ಈಗ ಅದು ಒಬ್ಬರಿಗೆ ಮಾತ್ರ ಉಳಿದುಕೊಂಡಿದ್ದು ಈ ಅಂಡರ್‌ ಗ್ರೌಂಡ್‌ ಪ್ರವೇಶ ಕಳೆದುಕೊಂಡ ಇನ್ನೊಬ್ಬ ಯಾರು ಎನ್ನುವ ತನಿಖೆ ಈಗ ಸಂಘದಿಂದ ಪ್ರಾರಂಭವಾಗಿದೆಯಂತೆ!

ಘಟನೆ-೨-

ತನಗೆ ಚುನಾವಣೆ ಬೇಡ ಬೇನಾಮಿ, ಡುಪ್ಲಿಕೇಟ್‌ ಖಾತೆಗಳಲ್ಲಿ ಸಂಘಿಗಳು ಇಟ್ಟಿರುವ ಹಣ-ಸಂಪತ್ತು ಉಳಿಸಿಕೊಟ್ಟರೆ ಸಾಕು. ಅವರು ನನ್ನನ್ನು ರಕ್ಷಿಸಿದರು, ಅವರನ್ನು ನಾನು ರಕ್ಷಿಸುತ್ತೇನೆ ಎಂದು ಕದಂಬ ವೃಕ್ಷದ ಕೆಳಗೆ ಕುಳಿತಿದ್ದ ಅನಂತಮಾಣಿ ಅಲಿಯಾಸ್‌ ಅನಂತಕುಮಾರ ಹೆಗಡೆಯವರನ್ನು ಮಾತನಾಡಿಸಲು ಹೋದ ಕುಲಬಾಂಧವರ ಮೇಲೆ ಎಗರಿಬಿದ್ದ ಮಾಜಿ ಸಂಸದ ʼನಿಂಗ ಎಲ್ಲಾ ಆ ನಾಟ್ಕದವನ ಹಿಂದೆ ಹೋಗಿ ನನ್ನೂ ಬೀದಿಗೆ ತಂದ್ರಿ, ಆಗ ಆನೆ ಚುನಾವಣೆ ಬ್ಯಾಡ ಅಂದ್ರೆ ಇನ್ನೊಂದಸರಿ ಹೆಗಡೆರೆ ಅಂದ್ರಿ ಈಗ ಟಿಕೆಟ್‌ ಇಲ್ಲ, ಸಾಂತ್ವನ ಹೇಳಿ ಹೋಪನ ಅಂತ ಬಂದಗಿದ್ದ ನಿಂಗಕ್ಕೆಲ್ಲಾ ಈ ಸುಟ್ಟವನ ಮನೆ ಕಾಣ್ತಿಲ್ಲನ ಎಂದು ಗದರಿಸಿ ಕಳಿಸಿದರಂತೆ!

ಘಟನೆ ಮೂರು-

ಉತ್ತರ ಕನ್ನಡದ ಉಸ್ತುವಾರಿ ಬ್ರಾಹ್ಮಣರ ಸಂಧಾನಕಾರ್ಯಕ್ಕೆ ನಿಯೋಜಿತರಾಗಿರುವ ಹೊಳೆಕೊಪ್ಪದ ಹಾಲಪ್ಪ ಯಡಿಯೂರಪ್ಪ ಆದೇಶಾನುಸಾರ ಶಿರಸಿಗೆ ಬರಲಾಗಿ ಒಂದು ಬೆಳಿಗ್ಗೆಯಿಂದ ಶಿರಸಿ- ಮತ್ತಿಕಟ್ಟಾ ಎಂದು ಕಾಯಿಸಿ ಕೊನೆಗೂ ಹುಬ್ಬಳ್ಳಿ ರಸ್ತೆ ಕೆ.ಎಚ್.ಪಿ. ಕಾಲೊನಿಗೆ ಬರಬೇಕೆಂದು ಕರೆಸಿಕೊಂಡ ಅನಂತಕುಮಾರ ಹೆಗಡೆ ʼಹಾಲಪ್ಪ ಏನು ಬಂದದ್ದುʼ ಅಂದರಂತೆ, ತಕ್ಷಣ ಟಿ.ಎಸ್.ಎಸ್.‌ ಘಟನೆ ನೆನಪಿಸಿಕೊಂಡ ಹಾಲಪ್ಪ ಏನಿಲ್ಲಾ ನಿಮನೆ ನೋಡಿ ಬರನ ಅಂತ ಬಂದವಪ್ಪಾ ಎಂದು ನಿಟ್ಟುಸಿರು ಬಿಟ್ಟರಂತೆ.

ಸರಿ ಹಾಗಾದ್ರೆ ನೋಡಾಯ್ತಲ್ಲ ಏನಾದರೂ ಆಸರಿಗೆ ತಗಂಡು ಹೋಗಬಹುದು ಎಂದು ಮಾತುಕತೆಯನ್ನೇ ಮುಗಿಸಿದ ಅನಂತಕುಮಾರ ವರ್ತನೆ ಕಂಡ ಹಾಲಪ್ಪ ನಾವೆ ಯಡವಟ್ಟು ಅಂದಕುಂದ್ರೆ ಈ ಮಾಣಿ ನಮಕ್ಕಿಂತ ಎಡವಟ್‌ ಐದನಲ್ರೋ ಎಂದು ಮುಖ ಒರೆಸಿಕೊಂಡರಂತೆ ಛೆ.

ಘಟನೆ ನಾಲ್ಕು-

ಶತಾನು ಗತಾಯ ಉತ್ತರ ಕನ್ನಡ ಲೋಕಸಭೆ ಟಿಕೇಟ್‌ ಗಿಟ್ಟಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ನಾನು ಅನಂತಕುಮಾರ ಅಣ್ಣ ತಮ್ಮಂದಿರಿದ್ದಂತೆ ಅವರ ಮನ ಒಲಿಸಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿ ಮಾರಿಕಾಂಬೆಗೆ ಪರಾಮಸಿಯಾತು ಅಂತನೆ ಕೈ ಮುಗಿದು ಕಾರ್‌ ಹತ್ತಿ ಕೆ.ಎಚ್.ಬಿ. ಅನಂತ ನಿಲಯಕ್ಕೆ ಹೋದರೆ ಅಲ್ಲಿ…… ನೋ ಎಂಟ್ರಿ, ನಾಯಿ ಇದೆ ಎಚ್ಚರಿಕೆ

ಎನ್ನುವ ಬೋರ್ಡ್‌ ಕಾಣಬೇಕೆ! ಇದೆಲ್ಲಾ ಇದ್ದಿದೆಯಾ ಒಳಗೆ ಅನಂತ್‌ ಹೆಗಡೇರು ಇದ್ರನೋ ಎಂದು ಮಾಜಿ ಸ್ಫೀಕರ್‌ ತಮ್ಮ ನೀಳಕಾಯ ಬಗ್ಗಿಸಿ ಕಿಟಕಿ ಹಣಕಿ ಕೇಳಿದರಂತೆ!

ಏ ಮುಂದೆ ಹೋಗಲ್‌ ಹೇಳಭಾವ ಬಾಳ ಬಿಜಿ ಇದ್ದಿ ಎನ್ನುವ ಗಡಸು ಸ್ವರ ಪ್ರತಿಧ್ವನಿಸಿದ್ದೇ…

ಆಯ್ತರ ಹಂಗರೆ ಕಡಿಗೇ ಫ್ರೀ….. ಇದ್ದಾಗ ಬತ್ತಿ ಅಂತ ಹೇಳ ಎಂದು ಕಾಲುಕಿತ್ತರಂತೆ.

( ಇವೆಲ್ಲಾ ಮಾಜಿ ಸಚಿವರ ಮನೆಯ ಸಿ.ಸಿ.ಕೆಮರಾಗಳಲ್ಲಿ ಸೆರೆಯಾಗಿದ್ದು ಈ ಧಾರವಾಹಿ ಆಧರಿಸಿ ʼಟಿಕೇಟ್‌ ಸಿಕ್ಕರೂ ಬಿಡದೀ ಮಾಯೆ, ಎನ್ನುವ ಚಿತ್ರ ತಯಾರಾಗುತ್ತಿದೆ. ಈ ಚಿತ್ರ ನಿರ್ಮಾಣ ಕ್ರೌಡ್‌ ಫಂಡಿಂಗ್‌ ನಲ್ಲಿ ನಡೆಯುತಿದ್ದು ಹರೀಶ್‌ ಗೌಡರ್‌ ನಿರ್ಧೇಶನದ ಹೊಣೆ ಹೊತ್ತಿದ್ದಾರಂತೆ!)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *