

ಪ್ರೀಯ ಗೌರಿ,
ಅದೇಕೊ ಇಂದು, ಅಂದರೆ ಈಗ ನೀನು ಸುಮ್‍ಸುಮ್ಮನೆ ನೆನಪಾಗತೊಡಗಿದ್ದಿ.
ಒಳ್ಳೆ ನಿರ್ದೇಶಕ ಜಯತೀರ್ಥರ ‘ಟೋನಿ’ ಸಿನೆಮಾದ ಗೀತೆಯೊಂದನ್ನು ಕೇಳಿದೆ. ಸೊಗಸಾಗಿದೆಯಾ ಕೇಳಿ ನೋಡು,
ತಂಗಾಳಿಯಲ್ಲೂ ನೀಬಂದ ಸದ್ದಾಗಿದೆ.
ಕಂಗಾಲು ಜೀವ ನಿನಗೆಂದೇ ಸಜ್ಜಾಗಿದೆ
ಮರುಳು ನಾನು ನನ್ನ, ಮಾತೇ ಬೇರೆ…..,
ಮರಳಿ ನೀನು ಸಿಗಲು ಕಥೆಯೇ ಬೇರೆ.
ಗಾಳಿಯಲ್ಲಿ……,
ಗೀಚುತಿರೆ ನಿನ್ನನ್ನೇ…. ಊಹಿಸಿ,
ಕಾಣು ನೀನು, ಸ್ವಪ್ನವನು, ನನ್ನನ್ನೂ …. ಸೇರಿಸಿ,
ಕ್ಷಿತಿಜದಿಂದಲೇ…. ನಡೆದು ಬಂದೆಯಾ
ಆ…ಒಂದೇ ಗುಟ್ಟನ್ನು ಹಂಚಿಕೊಳ್ಳೊ
ಸವಿಯೇ ಬೇರೆ …. .ತಂಗಾಳಿಯಲ್ಲೂ.
ಓ….. ಹೋ…… ಹೋ……
ಬೆಚ್ಚಗೊಂದು, ಬಿಡಾರ ಹೂಡಿ,ಕನಸಿನೂರಲಿ…..,
ಅಂದವಾದ ಉಪಾಯ ಮಾಡಿ ನಿನ್ನ ಕೂಗಲಿ…..
ಎದೆಯ ಒಲುಮೆಯಿಂದ, ಕೊರಳು ಬಿಗಿದು ಬಂದ…. ಕರೆಯೆ ಬೇರೆ,,,,, .ತಂಗಳಿಯಲ್ಲೂ…
ಯಾಕೆ? ಹಿಂಗೆಲ್ಲಾ ಅನ್ನಿಸುತ್ತಿದೆ ಅಂದರೆ,
ನೀನು ಮೊಟ್ಟ ಮೊದಲು ಒಂದ್ನಾಲ್ಕುದಿನ ನನ್ನನ್ನು ಬಿಟ್ಟು ನಿನ್ನ ತೌರಿಗೆ ಹೋಗಿದ್ದಿ. ತೌರೂರು, ತೌರಮನೆಯಲ್ಲಿ ನಿನಗೆ ಉಪಚಾರ, ದೇಖರಿಕೆ ಹ್ಯಾಗಿದೆಯೋ?
ವಿಶೇಷ ಏನು ಗೊತ್ತಾ? ಮುದ್ದು ಗೌರಮ್ಮ, ನಿನ್ನ ಹೆತ್ತ ನಿಮ್ಮಪ್ಪ-ಅಮ್ಮ ಯಾವುದೋ ಸರ್ಕಾರಿ ಗುಲಾಮನಿಗೋ, ಶ್ರೀಮಂತನಾದ ಕಳಪೆ ಕಂಟ್ರಾಕ್ಟರ್‍ಗೋ ದಾರೆ ಎರದು ಕೊಡಬೇಕೆಂದು ಯೋಚಿಸಿ, ಸಿದ್ಧತೆ ಮಾಡಿಕೊಂಡಿದ್ದರೋ ಎನೋ?!
ಆದರೆ ನೀನು ಪ್ರದರ್ಶನದ, ಒಳ ಟೊಳ್ಳುತನದ ಅನಾಚಾರಿ ಶ್ರೀಮಂತಿಕೆ, ನೌಕರಿಯ ಹುಸಿ ಭದ್ರತೆ ದಿಕ್ಕರಿಸಿ, ತಪಸ್ಸನ್ನಾಚರಿಸಿ ನನ್ನನ್ನು ಗೆದ್ದುಕೊಂಡು ಬಿಟ್ಟೆ.
ಬೂದಿ ಬಡುಕ ಜಂಗಮನನ್ನು ಒರಿಸಿದ್ದಕ್ಕೆ ನಿನ್ನಪ್ಪ ನನ್ನನ್ನು ಹೀಗಳೆಯುತ್ತಲೇ ಅವಮಾನ ಮಾಡಿದ. ಪರ್ವತರಾಜ ನಿಮ್ಮಪ್ಪನ ನಿರೀಕ್ಷೆಯಂತೆ ಸುಖ, ಶ್ರೀಮಂತಿಕೆ, ಪ್ರತಿಷ್ಠೆಗೆ ಸಹಕಾರಿಯಾಗಬಹುದು. ಆದರೆ, ಒಲವು, ಆತ್ಮಸಂತೋಷಗಳಿಗೆ ನಿಮ್ಮ ಗ್ರಹಿಕೆಯ ಜಡಸುಖ, ಸಂಪತ್ತು, ಶ್ರೀಮಂತಿಕೆ ಯಾವತ್ತೂ ಪೂರಕವಲ್ಲ. ನನ್ನಂಥ ಸಾದಾ-ಸರಳ ಜಂಗಮನನ್ನು
ಒಪ್ಪಿದ ನಿನಗೆ ನನ್ನ ವಿಶೇಷತೆ
ಹೇಳಬೇಕೆಂದಿಲ್ಲ. ಆದರೆ, ರಾಜ
ಪರ್ವತನಿಗೆ ನಾನೇನು?
ಯಾರೆಂದು ಈ ಹಾಡಿನ ಮೂಲಕ ತಿಳಿಸು,
ಪಕ್ಕಾ ಪಾಪಿ ನಾನು,
ಪಾಪ ಮಾಡುವೆನು.
ಸ್ವರ್ಗ ನನ್ನದು, ನರಕ ನನ್ನದು.
ನನ್ನ ಪೀಪಿಯನು ನಾನೇ ಊದುವೆನು ಸೌಂಡು ನನ್ನದು, ಬ್ಯಾಂಡು ನನ್ನದು.
ಪ್ರಳಯ ಆದರು ದೋಣಿ ಬಿಡೋನೆ ಇಲ್ಲಿ ಏಕ್‍ದಿನಕಾ ಸುಲ್ತಾನ….!
ಶಿವ… ಶಿವ,… ಟೋನಿ.
ಲಾಂಗ್‍ಒಂದು ಸಿಕ್ಕರೆ,
ನನ್ನನ್ನೇ ನಾನು ಕೊಲ್ತೀನಿ.
ಬೆಳಿಗ್ಗೆ ಸತ್ರೆ, ಮಧ್ಯಾಹ್ನ ಹುಟ್ಟಿ ಬರ್ತೇನೆ.
ಏ… ಬಾಳೊಂದು ಸಂತೆ, ನಾ
ಹಾಗಲಕಾಯಿ ಮಾರ್ತೇನಿ.
ಕಹಿಯಾದ ಸತ್ಯ ನಾ ಹೆಂಗಂದ್ರೆ ಹಂಗೆ
ಹೇಳ್ತೇನಿ.
ಎ.ಟಿ ಎಂ. ಕಾರ್ಡ್‍ನಲ್ಲಿ ನಯಾಪೈಸೆ
ಬ್ಯಾಲೆನ್ಸಿಲ್ಲ.
ಬಾಳೆಂಬ ಮೋಟರ್ ಸೈಕಲ್
ಗಾಲಿಯಲ್ಲಿ ಗಾಳಿಇಲ್ಲ. ಹೇಳೋಕೆ
ಆಗದ..ಕನಸೊಂದು ಉಂಟುನಂಗೆ.
ಮಾಡೋಕೆ ಆಗದ, ಕೆಲಸಾನೇ ಬೇಕು
ನಂಗೆ
ನಾನು ಏಕ್‍ದಿನ್‍ಕಾ ಸುಲ್ತಾನಾ.
ಕೇಳಪ್ಪ ದೇವ್ರೆ, ನಿನ್ ಕೈಲಿ ಏನೂ ಆಗಲ್ಲ.
ನೀನಂಗೆ ಸಿಕ್ರೆ,
ನಾನಂತೂ ಮಾತೇ ಆಡಲ್ಲ…..
ಸೂಪರ್.. .. ಹುಡ್ಗೀನ ಕೊಟ್ಟೆ, ಕಲುಂಗರಕ್ಕೂನೂಕಾಸಿಲ್ಲ.
ಕಾಸಿಲ್ಲದಿದ್ರೆ, ನಮ್‍ಹುಡ್ಗಿ ಪೋನೇ ಎತ್ತಲ್ಲ.
ಹಲ್ಲಿದ್ರೆಕಡ್ಲೆ ಇಲ್ಲ, ಕೆಲವೊಬ್ರಿಗೆ ಹಲ್ಲೇ ಇಲ್ಲ. ದೇವರಾಣೆ ಹೇಳ್ತೀನಿ ಕೇಳಿ ದೇವರ
ತಲೆ ಸರಿ ಇಲ್ಲ.
ವಾಚಿನ ಮುಳ್ಳಿಗೆ ಮಾಡೋಕೆ ಕೆಲಸಇಲ್ಲ.
ನವಯುವಕ ನಮಗೆ ಅಂಕಲ್ಲುಅಂತಾನಲ್ಲ. ಹೇಳಪ್ಪಾ ಏನು ಮಾಡೋದು?
ಗೌರಿದೇವಿ,
ನಿನ್ನಂತೆ ಅಂದ್ರೆ, ನಮ್ಮಂತೆ ಅದೆಷ್ಟೊ ಜನರು ಮನೆಯವರು, ಮನೆಯವರ ಪ್ರತಿಷ್ಠೆ, ಜಾತಿ, ಧರ್ಮಗಳ ಬುಡಕ್ಕೆ ಉಗಿದು, ನವಜೋಡಿಗಳಾಗಿದ್ದಾರೆ. ಅವರಲ್ಲಿ ಅನೇಕರು ನಿನ್ನಂತೆ ಮೊಟ್ಟಮೊದಲು ನವವಧುಗಳಾಗಿ ಅಪ್ಪ, ಮನೆ ಊರವರನ್ನು ಎದುರುಗೊಳ್ಳಲಿದ್ದಾರೆ.
ನಮ್ಮಂಥ ನವಪ್ರೇಮಿಗಳು, ಅವರು ಕುಟುಂಬದ ಸ್ನೇಹ, ಸೌಹಾರ್ದತೆ, ಸಂಬಂಧ ಸುಧಾರಿಸಲೆಂದೇ ಈ ಗೌರಿ, ಗಣೇಶ ಹಬ್ಬಗಳನ್ನು ರೂಢಿಮಾಡಿದ್ದು, ಈ ಹಬ್ಬದಲ್ಲಿ ಮಾಡುವ ತಿಂಡಿ ಪದಾರ್ಥಗಳೆಲ್ಲ ಆ ಗೌರಿ-ಗಣಪತಿಗೆ ತಲುಪುತ್ತವಂತಾ ತಿಳಿದಿದ್ದಿಯಾ? ಅವುಗಳನ್ನೆಲ್ಲಾ ತಿನ್ನುವವರು ಮಾವ, ಅಳಿಯ, ಮಗಳು, ಮೊಮ್ಮಕ್ಕಳೇ. ಮುನಿಸಿಕೊಂಡ ಅಪ್ಪ-ಅಮ್ಮ ಕೂಡಾ ಗೌರಿ-ಗೌರಿ ಪುತ್ರ ಗಣೇಶನ ನೆಪದಲ್ಲಿ ತಿಂದುಂಡು ಸಂಭ್ರಮಿಸಿ, ಒಂದಾಗಲಿ ಎಂದೇ ಈ ಹಬ್ಬ ಮಾಡುವುದು.
ನಾನಂತೂ ಬೈರಾಗಿ ಜಂಗಮ, ನಿಮ್ಮ ಮನೆಗೆ ಬಂದರೂ ಬಂದೆ, ಇಲ್ಲಾದ್ರೆ ಇಲ್ಲ. ತೌವರುಮನೆಯವರು ಮಾಡುವ ಅಳಿಯ-ಮಗಳ ಸತ್ಕಾರಗಳನ್ನೆಲ್ಲಾ ನೀನೇ ಅನುಭವಿಸು. ನೀನು ತೌರಿಗೆ ಹೋದಾಗ ಸುಭಿಕ್ಷೆ ನೆಲೆಸಿರಲಿ ಎಂದು ಉತ್ತಮ ಮಳೆ ಬೀಳಿಸಿ, ಬೆಳೆ ಬೆಳೆಸಿದ್ದೇನೆ. ಹಸಿರು, ಎಲೆ, ಹೂವು ಹಣ್ಣು ಎಲ್ಲಾ ನಿನ್ನ ಸಂತೋಷ ಸಂಭ್ರಮಕ್ಕೇ ಮೀಸಲು. ಮತ್ತೆ ಒಂದು ವರ್ಷ ಹೀಗೆ ನನ್ನನ್ನು ಅಬ್ಬೆಪಾರಿ ಮಾಡಿ ನೀನು ತೌರಿಗೆ ಹೋಗುವುದಿಲ್ಲ ಎಂಬ ಭರವಸೆ ನನಗಿದೆ.
ಗೌರಿ,
ಸ್ತ್ರೀ, ಪುರುಷರಲ್ಲಿ ಅದೆಂಥಾ ತಾರತಮ್ಯನೋಡು,
ಸಕಲಶುಭ್ರಾಲಂಕೃತ ನಿನ್ನನ್ನು ಮನೆಯೊಳಗಿಟ್ಟು ಪೂಜಿಸುತ್ತಾರೆ. ಗಣೇಶನನ್ನು ಬೀದಿ-ಬಯಲಲ್ಲಿಟ್ಟು ಕು(ಡಿ)ಣಿದು ಸಂಭ್ರಮಿಸುತ್ತಾರೆ.
ವಾಸ್ತವದಲ್ಲಿ ನೀನು ಮೊಟ್ಟಮೊದಲಿಗೆ ತವರಿಗೆ ಹೋದವಳು. ನಮ್ಮ ಕನಸು ಭವಿಷ್ಯದ ಪ್ರತೀಕ ಗಣಪತಿಯಂಥ ಮಗು ಎಂದು ನಾವು ಕನಸಿಗೆ ರೆಕ್ಕೆ ಕಟ್ಟಬಹುದು, ಆದರೆ, ಮದುವೆಯ ಮೊದಲ ಮುನಿಸು ಮುಗಿಯುವ ಮೊದಲೇ ವಿಕಾರಿ ವಿಘ್ನವಿನಾಶಕ ನಮ್ಮ ಸೃಷ್ಠಿ, ಎಂದು ಕಥೆಕಟ್ಟಿದ ಸುಳ್ಳು ಪುರಾಣಗಳಿಗೆ ಏನನ್ನೋಣೆ?
ಇರಲಿ,
ನಿನಗೆ ತೌರುಮನೆಯಲ್ಲಿ ಆದರಾದಿತ್ಯದ ಜಾತ್ರೆ, ನನಗಿಲ್ಲಿ ನೋವಿನ ವಿರಹಯಾತ್ರೆ. ಹೆಂಡತಿ, ಮಕ್ಕಳು, ಸಂಸಾರದ ಜಂಜಡದಿಂದ ಸುಸ್ತಾದವರು ಈ ವಾರ ಒಂಥರಾ ಸ್ವಾತಂತ್ರ್ಯದ ನವೋತ್ಸಾಹದಲ್ಲಿರುತ್ತಾರೆ. ಒಟ್ಟಾರೆ ಹಬ್ಬ ನನ್ನಂಥ ಜಂಗಮನಾಸ್ತಿಕರಿಗೂ ಮುಗ್ಧ-ಮಬ್ಬು-ವ್ಯಾಪಾರಿ ಆಸ್ತಿಕರಿಗೂ ಖುಷಿ ಕೊಡುವಂಥದ್ದೇ.
ಈ ಸಮಾಜ ನನ್ನ ಆಸ್ತಿಯಾದ ನಿನ್ನನ್ನು ನಮ್ಮ ಮಗು
ವಿಘ್ನ ವಿನಾಯಕನನ್ನು ಸ್ಮರಿಸುತ್ತೆ. ಆದರೆ, ನಾನೊಂಥರಾ ನೀನು ಮುನಿಸಿಕೊಂಡಾಗ ಇರುವಂಥ ಮೌನಿ, ಈ ಹಬ್ಬದ ನಂತರ ನಾವು ಕುಟುಂಬ ಸಮೇತ ನೀರು, ಹಸಿರಿನ ಮೋಜಿನ ಪ್ರದೇಶ ದೂದ್ ಸಾಗರ, ಜೋಗ, ಕೆಪ್ಪಜೋಗಕ್ಕೆಲ್ಲಾ ಜಾಲಿಟ್ರಿಪ್ ಹೋಗೋಣ. ಅಲ್ಲಿವರೆಗೆ ವಿರಹ…ನೂರು ನೂರು ತರಹ ……..
-ಇಂತಿ ನಿನ್ನ ಮಹೇಶ್ವರ
