

ಕೊಂಡ್ಲಿ ಕೇಶವನಾಯ್ಕ ಗಾನಗಂಧರ್ವ
ಸಿದ್ದಾಪುರದಕೊಂಡ್ಲಿಯ ಯುವ ಗಾಯಕ ಕೇಶವ ಗೋವಿಂದ ನಾಯ್ಕರಿಗೆ ಅಖಿಲ ಕರ್ನಾಟಕ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ (ರಿ) ಬೆಂಗಳೂರು ನಿಂದ ರಾಜ್ಯಮಟ್ಟದ ಗಾನಗಂಧರ್ವ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿದೆ.
ಕೇಶವ ನಾಯ್ಕ ಕಳೆದ 13 ವರ್ಷಗಳಿಂದ ಸಾಮಾಜಿಕ ನಾಟಕಗಳಲ್ಲಿ ಹೆಣ್ಣು ಹಾಗೂ ಗಂಡು ಎರಡೂ ಧ್ವನಿಗಳಲ್ಲಿ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲದೆ ಹಾವೇರಿ, ದಾವಣಗೆರೆ, ಗದಗ ಈ ಮುಂತಾದ ಕಡೆಗಳಲ್ಲೂ 600 ಕ್ಕೂ ಹೆಚ್ಚು ಬಾರಿ ತಮ್ಮ ಹಿನ್ನೆಲೆ ಗಾಯನವನ್ನು ಪ್ರಸ್ತುತಪಡಿಸಿದ್ದಾರೆ.
ಆರ್ಕೆಸ್ಟ್ರಾ ಹಾಗೂ ಡ್ರಂ ಸೆಟ್‍ಗಳ ಜೊತೆಯೂ ಹಾಡುವ ಇವರು ಯುಗಳಗೀತೆಗಳನ್ನು ಹಾಡಿ ಜನಮನಗೆದ್ದಿದ್ದಾರೆ. ಇವರ ಧ್ವನಿ, ಕಲಾಪ್ರತಿಭೆ ನೋಡಿ ಗಾನಗಂಧರ್ವ ಬಿರುದು ನೀಡಿ ಗೌರವಿಸಲಾಗಿದೆ.

