
ಅಮ್ಮ ಮಾಡಿದ “ಉಪ್ಪಿನಕಾಯಿ” ನಮ್ದು ಪಕ್ಕಾ ಮಲ್ನಾಡ್ಹ ಹಸಿರುಬಣ್ಣದ ದಿಬ್ಬಣ ಎಲ್ಲಿ ನೋಡಿದರೂ ಕಾನನ.! ಅಲ್ಲಲ್ಲಿ ಜಲಪಾತಗಳ ನರ್ತನ..!ಸೊಯ್ ಎಂದು ಬೀಳೋ ಮಳೆರಾಯ ತನನ..!
ಇವು ನನ್ನೂರ ಸ್ಪೆಷಾಲಿಟಿ …” ನಾನೂಬ್ಬ ಊರು ಸಂಚಾರಿ ಭಾಂದವ್ಯಗಳನ್ನು ಬೆಸೆದಿರುವ ನನ್ನೂರಿಗಿಂತ …! ಪರಊರಿನ ವ್ಯಾಮೋಹಕ್ಕೆ ಸಿಕ್ಕಿ ಜೀತಕ್ಕಾಗಿ ಬದುಕುತ್ತಿರುವ ನಾನು.. ಹೆತ್ತಮ್ಮನ ಕಂಕುಳ ತಬ್ಬಿಗೆ ನೆನೆದು.. ಬಿಕ್ಕಿ ಬಿಕ್ಕಿ ಅಳುವು ಕಂದನ ಹಾಗೆ.
ಹೆತ್ತೂರಿನ ಕಡೆ ಬಗಲಿಗೆ ಬ್ಯಾಗೇರಿಸಿ ಊರಕಡೆ ಪ್ರಯಾಣ ಬೆಳೆಸುವುದು .. ನನ್ನ ಕಾಯಿಲೆ..? ಊರ ಸ್ಸೇರಿ ಕೂತರೆ ಮಲೆನಾಡ ಆಲ್ಹಾದಕರ ಪರಿಸರ . ಕಾಂಕ್ರೀಟ್ ಕಾಡಲ್ಲಿ ಕಳೆದು ಹೋದ ನನ್ನ ಯೌವನ ಮತ್ತೆ ಚಿಗುರಿ ಮನಸ್ಸಿಗೆ ನೆಮ್ಮದಿ ಸಿಕುತ್ತದೆ..
ಊರ್ರು ಸೇರಿದರೆ ಜಂಜಾಟದ ಜೀವನಕ್ಕೆ ಸಲ್ಪ ಮುಕ್ತಿ ಸಿಕ್ಕಂತಾಗುತ್ತದೆ..! ಮನೆಸೇರಿ ಅಡುಗೆ ಮನೆಗೆ ಕಾಲಿಟ್ಟರೆ ಸಾಕು.! ನನ್ನ ಕಣ್ಣಿಗೆ ಮಿಂಚುಳ್ಳಿಯಂತೆ ಪಳ ಪಳ ಹೊಳೆಯುವ ಅಮ್ಮಮಾಡಿದ ಉಪ್ಪಿನಕಾಯಿಡಬ್ಬ…! ಅದನ್ನ ನೋಡಿದ ಕೂಡಲೆ ಬಾಯಲ್ಲಿ ನೀರೂರುತ್ತದೆ..!
ಮಲೆನಾಡಲ್ಲಿ ಮಾವಿನ ಕಾಯಿಗಳು ಮಾರ್ಚ್. ಏಪ್ರಿಲ್ ತಿಂಗಳ ಆಸುಪಾಸಿ ನಲ್ಲಿ ಬಲು ಜೋರು… ಮರಗಳನ್ನೇರಿ ಮಿಡಿ ಗಳನ್ನು ಕೊಯ್ದು ಉಪ್ಪು ಹಾಕಿ .. ಉಪ್ಪಿನ ಕಾಯಿ ಮಿಡಿ ಚಟ್ಟಿದ ಮೇಲೆ ಉಪ್ಪುಖಾರ ಮಸಾಲಾ ಹಾಕಿ ಹದ ಗೊಳಿಸಿದರೆ ರೆಡಿ…
.ಅದ್ರಲ್ಲೂ ನಮ್ಮ ಅಮ್ಮ ಹಾಕೋ ಉಪ್ಪಿನ ಕಾಯಿ ಮಸಾಲ ಅಹಾಹ.!! ಎಷ್ಟು ರುಚಿ ಅಂದ್ರೆ ..
ಉಪ್ಪಿನ ಕಾಯಿ ಮಸಾಲ ಮಾಡೋ ರೀತಿನೆ ಚಂದ ಗಮ್ ಅಂತಿರುತ್ತೆ..”
ಉಪ್ಪಿನಕಾಯಿ ಬರಣಿ (ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿನ ಶರತ್ ಲೋಹಿತಾಶ್ವ ಅವ್ರು ಹಿಟ್ಕಂಡ್ ಇರ್ತಾರಲ್ಲ) ಅದೇ ತರಹದ ಬರಣಿ ಅದ್ರಲ್ಲೆ ಉಪ್ಪಿನಕಾಯಿ ಮಸಾಲ ಹಾಕಿ ಮಿಕ್ಸ್ ಮಾಡೋದು… “ಮದ್ವೆ ಮನೆಗಳಲ್ಲಂತೂ ಬೇಮಸ್..? ಹತ್ತಿರದ ನೆಂಟರ ಮದ್ವೆ. ಗೃಹ ಪ್ರವೇಶ. ಎನೆ ಹಬ್ಬ ಆಚರಣೆ ಗಳಿದ್ದರೂ ಅಲ್ಲಿ ಅಮ್ಮನ ಉಪ್ಪಿನ ಕಾಯಿ ಕೈ ಚಳಕ ಇದ್ದೆ ಇರುತ್ತದೆ..?
ಉಪ್ಪಿನ ಕಾಯಿ ಬಡಿಸಲು ಹೋದರೆ….”ಎಂತದ ಇಷ್ಟೆ ಹಾಕ್ತಿ ಇನೊಂದು ಸಲ್ಪ ಹಾಕ ಅನ್ನೋರೆ ಜಾಸ್ತಿ.” ಅದ್ರಲ್ಲೂ ಕುಡುಕರ ಪಾಲಿನ ಚೀಪ್ ಸ್ನಾಕ್ಸ್..! ವರುಷಕ್ಕೆ ಮಾಡಿಟ್ಟ ಉಪ್ಪಿನಕಾಯಿ ಒಂದು ಮದುವೆಗೆ ಸಾಕಾಗುತ್ತದೆ.. ನಾನು ಊರಿಂದ ಬರುವಾಗ ಅಮ್ಮ ಮಿಸ್ಸ್ ಮಾಡದೆ ಉಪ್ಪಿನಕಾಯಿ ನ ಒಂದ್ ಡಬ್ಬಕ್ಕೆ ಹಾಕಿ ಬ್ಯಾಗಿಗೆ ಹಾಕಿಬಿಡುತಾಳೆ… ಕೆ ಲವೊಂದು ಸಾರಿ ಬೆಂಗಳೂರಿನ ರೂಮ್ ನಲ್ಲಿ ಉಪ್ಪಿನ ಕಾಯಿ ಖಾಲಿ ಆದಾಗ ಅಮ್ಮ ಮಾಡಿದ್ ಉಪ್ಪಿನ ಕಾಯಿ ನೆನೆದು ಕಣ್ಣೀರ್ ಇಟ್ಟಿದ್ದೂ ಇದೆ……!
( ಧನು ಕೊಂಡ್ಲಿ)
