
ರೈತ ದೇಶದ ಬೆನ್ನೆಲುಬು ಎಂದು ಭಾಷಣ ಬೀಗಿದರೆ ಸಾಕೆ| ನೋವುಗಳೇ ಗುಡುಗಿ ರೈತನ ಕಣ್ಣೀರು ಮಳೆಯಾಗಿ ಹರಿಯುವುದು ಯಾಕೆ|| ಮೂರು ಹೊತ್ತು ಅನ್ನವೇ ಬೇಕು ಪ್ರತಿಯೊಬ್ಬರ ಬದುಕಿನ ನಾಳೆಗೆ| ಧಾವಿಸಿ ಬನ್ನಿರಿ ಎಲ್ಲರೂ ಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ|| ಮುಗಿಲು ಮುಟ್ಟುವವರೆಗೂ ಕಾವು ಹೋರಾಡಿ ಶ್ರಮದ ಗೆಲುವಿಗೆ| ಅನ್ಯಾಯ ದೌರ್ಜನ್ಯಗಳ ತಡೆಗೆ ನಿಲ್ಲಿ ನೇಗಿಲ ಯೋಗಿಯ ನೆರವಿಗೆ…ಒಪ್ಪತ್ತು ಗಂಜಿಗೆ ದಿನವಿಡೀ ದುಡಿದು ಬೆವರಲ್ಲಿ ಮೈ ಬಸಿಯುತ್ತಿರುವನು| ಕೇಳುವವರಿಲ್ಲದೆ ಇವನ ಪಾಡು ಹಾಡುಹಗಲೇ ಕುಸಿದು ಕುಳಿತಾನು|| ಕೀಟನಾಶಕ ರಸಗೊಬ್ಬರ ವಿದ್ಯುತ್ ನೀರು ದುಬಾರಿ ಪರಿಕರ| ಭರವಸೆ ನೀಡಿದ ಸರಕಾರ ಸಹಾಯಧನ ಕಡಿತಗೊಳಿಸಿ ಹರೋಹರ|| ಕಷ್ಟ ನಷ್ಟಗಳ ಆಗರ ಜೀವನವೇ ಇಲ್ಲಿ ಅತಿ ಭಾರ| ಪ್ರತಿಭಟಿಸಿ ಸಿಡಿದೆದ್ದು ನಿಂತರೆ ರೈತ ನಾಡಿಗೆ ನಾಡೇ ಹಾಹಾಕಾರ…ಅತಿವೃಷ್ಟಿ ಅನಾವೃಷ್ಟಿ| ಬಡತನವೇ ಇಲ್ಲಿ ಪಿತ್ರಾರ್ಜಿತ ಆಸ್ತಿ || ಅಸ್ಥಿರ ಮಾರುಕಟ್ಟೆಯ ವಸತಿ ವೈಜ್ಞಾನಿಕ ಸಂಸ್ಕರಣೆಯು ನಾಸ್ತಿ|| ಖರ್ಚು ವೆಚ್ಚವಾಗಿ ಅಗಣಿತ ಬೆಂಬಲ ಬೆಲೆಯಿಲ್ಲದೆ ಅತ್ತಿತ್ತ| ಮಧ್ಯವರ್ತಿಯ ಹಾವಳಿ ವಿಪರೀತ ರಾಜಕೀಯ ಇಚ್ಛಾಶಕ್ತಿಗಿದೆ ಕೊರೆತ|| ಬರಗಾಲದ ಬರೆ ತಾಳದ ಭಾದೆ ಸಾಲದ ಮೊರೆ| ದೀರ್ಘಕಾಲ ಕಿರುಕುಳದ ಹೊರೆ ಕೃಷಿ ಪ್ರಗತಿಗೆ ಓಗೊಡಲಿ ಈ ಕರೆ….*ಬಸವರಾಜ ಕಾಸೆ* ಮು| ಪೋ| ದೇವಾಪೂರ ತಾ| ಜಿ| ವಿಜಯಪುರ ಪಿನ್ ಕೋಡ್ 586125 ಮೊಬೈಲ್ ಸಂಖ್ಯೆ 7829141150 ಮಿಂಚಂಚೆ pradeepbasu40@gmail.comReplyForward |
