ಕೊಂಡ್ಲಿ,ಬೇಡ್ಕಣಿಯಲ್ಲಿ ಕೆರೆಬೇಟೆ, ಮೀನುರಾಶಿ
ಹತ್ತುಮೀನು ಮತ್ತು ಕೆರೆಬೇಟೆ ಆಡಲು ಮಲೆನಾಡಿಗರಿಗೆ ಈಗ ಸುಗ್ಗಿ
ಗ್ರಾಮೀಣ ಜನರ ಹವ್ಯಾಸ ಮತ್ತು ಕ್ರೀಡೆಯಾದ ಕೆರೆಬೇಟೆ ತಾಲೂಕಿನ ಕೊಂಡ್ಲಿ ಮತ್ತು ಬೇಡ್ಕಣಿಯಲ್ಲಿ ನಡೆದವು.
ಕೊಂಡ್ಲಿಯಲ್ಲಿ ಸಾಮೂಹಿಕವಾಗಿ ಮೀನು ಹಿಡಿಯುವ ಮೂಲಕ ಕೆರೆಬೇಟೆ ನಡೆಯಿತು.
ಬೇಡ್ಕಣಿಯಲ್ಲಿ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳು ಮೂರುವರ್ಷದ ನಂತರ ಮೀನು ಹಿಡಿಯುವ ಕೆರೆಬೇಟೆ ನಡೆಸಿದರು.10,20 ಕೆಜಿ ವರೆಗಿನ ಸುಮಾರು 1.5 ಕ್ವಿಂಟಾಲ್ ಮತ್ತು ಸಣ್ಣ ಗಾತ್ರಗಳ ಮೀನು ಸೇರಿ 3-4 ಕ್ವಿಂಟಾಲ್ ಮೀನು ಹಿಡಿದಿರಬಹುದು ಎಂದು ಸಮಾಜಮುಖಿಗೆ ಕೆರೆಬೇಟೆಯ ಚಿತ್ರ ಕಳುಹಿಸಿರುವ ಚಂದ್ರಶೇಖರ್ ಕುಂಬ್ರಿಗದ್ದೆ ಮಾಹಿತಿ ನೀಡಿದರು. ಹತ್ತುಮೀನು ಮತ್ತು ಕೆರೆಬೇಟೆ ಮಜ, ಚಂದ ನೋಡುವುದು ಪ್ರತಿಮುಂಗಾರಿನ ಮಲೆನಾಡಿನ ವಿಶೇಶ.