ದೇವರು ಸತ್ತ ಸುದ್ದಿ ತಂದ ನೀಷೆ ಪವಿತ್ರಾತ್ಮನಾದ!

ಮನುಷ್ಯನ ಬಹಳಷ್ಟು ಆಚರಣೆಗಳು ನನಗಂತೂ ನಿಷ್ಪ್ರಯೋಜಕ, ವ್ಯರ್ಥ ಎನಿಸುತ್ತವೆ.
ಮಾಸ್ತಿಕಲ್ಲು, ವೀರಗಲ್ಲುಗಳನ್ನು ಭಕ್ತಿಯಿಂದ ಪೂಜಿಸುವವರು ಅದರ ಹಿಂದಿನ ತ್ಯಾಗ, ಧೀರತನ, ಶೂರತ್ವವನ್ನು ಪ್ರೀತಿಸಿ, ಆರಾಧಿಸಿದರೆ ತಪ್ಪಿಲ್ಲ. ಆದರೆ, ಅದನ್ನು ಕೇವಲ ಆಚರಣೆ, ಸಂಪ್ರದಾಯ, ರೂಢಿಗಳೆಂದುಕೊಂಡು ಕುರುಡಾಗಿ ಅನುಕರಿಸತೊಡಗಿದರೆ ಮೂರ್ಖತನ ಎನಿಸಿಕೊಳ್ಳುತ್ತದೆ.
ಮೊನ್ನೆ ನಮ್ಮ ಕಛೇರಿಗೆ ಬಂದಿದ್ದ ಗೌರವಾನ್ವಿತ ಹಿರಿಯರೊಬ್ಬರು ಮೊದಲು ನಮ್ಮಲ್ಲೆಲ್ಲಾ ಸಂಪ್ರದಾಯ, ರೂಢಿ- ಪದ್ಧತಿ ಎಂದು ಆಚರಿಸುತ್ತಾ, ಅನುಕರಿಸುತ್ತಾ ಬಂದವರು ಈಗ ಬಿಟ್ಟಿದ್ದೇವೆ.(ಅವರು ಬ್ರಾಹ್ಮಣರು) ಈಗ ನಿಮ್ಮಲ್ಲಿ(ಬ್ರಾಹ್ಮಣೇತರರು) ವಿಪರೀತವಾಗುತ್ತಿದೆ. ಅವರೂ ಕ್ರಮೇಣ ಬಿಡುತ್ತಾರೆ ಎಂದರು.
ಇವರು ಇಂಥ ಅಪದ್ಧಗಳನ್ನು ಬಿಡುತ್ತಾರೆ. ಅಥವಾ ಬಿಡಿಸಬೇಕೆಂದೆಲ್ಲಾ ಯೋಚಿಸುತ್ತಾ ಈ ತಿಂಗಳು ಮುಗ್ಧ ಮೂಢರ ಧ್ಯಾನದಲ್ಲೇ ಕಳೆದುಹೋದಂತಾಯಿತು.
ಈ ರೂಢಿ, ಸಂಪ್ರದಾಯ, ಆಚರಣೆ ರೂಢಿ, ಅಭ್ಯಾಸಗಳಿಂದ ಪುರೋಹಿತವರ್ಗಕ್ಕೆ ಲಾಭವಿದೆ. ಆದರೆ ಇದನ್ನು ಅನುಸರಿಸುವವರು ದೇವರು, ಧರ್ಮ, ಸಂಪ್ರದಾಯದ ಹೆಸರಲ್ಲೇ ಮೂರ್ಖರಾಗುತ್ತಾ ಒಂದು ದಿನ ಕಳೆದುಹೋಗುತ್ತಾರೆ. ಈ ಬಗ್ಗೆ ಜಾಗೃತಿ ಮಾಡಬೇಕೆನ್ನುತ್ತಲೇ ನಿರಂತರ ಪ್ರಯತ್ನದ ನಡುವೆಯೂ ನಾವೂ ಬಸವಳಿಯುತಿದ್ದೇವೆ.

ಇದು ಭಾರತದಂಥ ಸಾಂಪ್ರದಾಯಿಕ ದೇಶದ ಚೈತನ್ಯ, ಕ್ರೀಯಾಶೀಲತೆ ಸೃಜನಶೀಲತೆಯನ್ನೇ ನಾಶಮಾಡುತ್ತದೆ. ಈ ಬಗ್ಗೆ ಐವತ್ತು ವರ್ಷಗಳಿಗೂ ಹಿಂದಿನಿಂದ ಕುವೆಂಪು,ಕಾರ್ನಾಡ್, ಅನಂತಮೂರ್ತಿ, ಲಂಕೇಶ್ ಸೇರಿದಂತೆ ಅನೇಕರು ವಿಮರ್ಶಿಸುತ್ತಾ, ವಿಶ್ಲೇಷಿಸುತ್ತಾ ತಿಳುವಳಿಕೆ ಕೊಡುತ್ತಾ ಬಂದರು.
ಇದು ನಮ್ಮ ಪ್ರಾದೇಶಿಕತೆ, ನಮ್ಮದೇಶದೊಳಗಿನ ವೈಚಾರಿಕ ಸಂಘರ್ಷದ ವಿಷಯವಾಯಿತು ಆದರೆ, ಸರಿಸುಮಾರು ಒಂದು ಶತಮಾನಕ್ಕಿಂತ ಹಿಂದೆ-ಜರ್ಮನಿಯ ನೀಷೆ ಇಂಥದ್ದೆ ವೈಚಾರಿಕ, ಪರಿವರ್ತನಾಕಾಂಕ್ಷಿ ಸಂಘರ್ಷ ಪ್ರಾರಂಭಿಸಿದ್ದರು ಎಂದರೆ ನಂಬುವುದು ಕಷ್ಟ, ಆದರೆ ನೀವದನ್ನು ನಂಬಲೇಬೇಕು.


1844ರ ಅಕ್ಬೋಬರ್15 ರಂದು ಜರ್ಮನಿಯ ರೋಕೆನ್ ಎಂಬ ಒಂದು ಪುಟ್ಟ ಊರಿನಲ್ಲಿ ಕ್ರಿಶ್ಚನ್ ಪಾದ್ರಿಗಳ ವಂಶೋದ್ಧಾರಕನಾಗಿ ಹುಟ್ಟಿದ ನೀಷೆ ಗ್ರೀಕ್-ರೋಮನ್ ಸಾಹಿತ್ಯವನ್ನು ಅಭ್ಯಸಿಸಿದ. 1864ರಲ್ಲಿ ಕ್ರೈಸ್ತಧರ್ಮಶಾಸ್ತ್ರ(ಥಿಯಾಲಜಿ)ಓದುತ್ತಾ ಭಾಷಾತತ್ವ (ಫಿಲಾಲಜಿ)ಅಧ್ಯಯನ ನಡೆಸಿದ.
ನಂತರ ತತ್ವಶಾಸ್ತ್ರದ ಅಧ್ಯಯನ ‘ಹಿಸ್ಟರಿ ಆಫ್ ಮೆಟಿರಿಯಲಿಸಂ’ ನಿಂದ ಪ್ರಭಾವ, ಹೀಗೆ ನೀಷೆ ಅಧ್ಯಯನಾರ್ಥಿಯಾಗಿ, ಅಲ್ಲಿಂದ ಸೇನೆ ಸೇರಿ, ನಂತರ ವೈಧ್ಯಕೀಯ ರಂಗದಲ್ಲೂ ದುಡಿದು, ಪ್ರಸಿದ್ಧ ಸಾಹಿತಿಯಾದ. ಅನೇಕ ಅವಸ್ತಾಂತರಗಳ ನಂತರ 1890 ಅಗಷ್ಟ್ 24 ರಂದುಕೊನೆಯುಸಿರೆಳೆದ

ನೀಷೆಹುಚ್ಚತನವನ್ನೇ ಅನುಗ್ರಹವೆಂದು ಕೊಂಡಿದ್ದ. ಮುಂದಿನ ಪೀಳಿಗೆ ತನ್ನನ್ನು ‘ಪವಿತ್ರಾತ್ಮ’ ಎಂದು ತೀರ್ಮಾನ ಮಾಡಿಬಿಡಬಹುದೆಂದು ತನ್ನ ಆತ್ಮಕಥೆಯಲ್ಲೇ ಆತಂಕ ವ್ಯಕ್ತಪಡಿಸಿದಂತೆಯೇ ನೀಷೆಯನ್ನು ಮುಂದಿನ ತಲೆಮಾರು ಪರಿಭಾವಿಸಿದ್ದು ವಿಪರ್ಯಾಸವೋ?ಹೆಚ್ಚುಗಾರಿಕೆಯೋ? ಎನ್ನುವುದೇ ಪ್ರಶ್ನೆ.

ವಿಶಿಷ್ಟ ಬರಹಗಾರನಾಗಿದ್ದ ನೀಷೆ ‘ಗೇ ಸೈನ್ಸ್’ ಆಂಟಿಕ್ರೈಸ್ಟ್, ಡೆ ಬ್ರೇಕ್, ‘ಹ್ಯೂಮನ್ ಆರ್ ಟೂಹ್ಯೂಮನ್’ ಸೇರಿದಂತೆ ಅನೇಕ ಕೃತಿಗಳಿಂದವಿಶ್ವವಿಖ್ಯಾತನಾದ. ಚಿಂತನೆ, ಬರಹ, ಬದುಕು, ಹೋರಾಟ, ಅಧ್ಯಯನ ಪ್ರೀತಿ ಎಲ್ಲಾ ವಿಚಾರಗಳಲ್ಲಿ ವಿಶಿಷ್ಟ ಎನಿಸುವ ನೀಷೆ ಚಿಂತನೆ ನಿಮಗೂ ನನ್ನಂತೇ ದಕ್ಕಲಿ ಎನ್ನುವ ಸಾಹಿತ್ಯ ಪ್ರೇಮದ ಪ್ರೀತಿ ಸಾಂಕ್ರಾಮಿಕವಾಗಲಿ ಎಂದು ಹಾರೈಸುತ್ತಾ

  • ನಿಮ್ಮ ಕೋಲಶಿರ್ಸಿ ಕನ್ನೇಶ್.
  • …….ನೀಷೆ ಬಗೆಗಿನ ಪುಸ್ತಕಕ್ಕೆ ದಿ.ಡಾ. ಅನಂತಮೂರ್ತಿ ಬರೆದ ಬೆನ್ನುಡಿ ಹೀಗಿದೆ. ……
    ……………ಕನ್ನಡ ಸಾಹಿತ್ಯ ಲೋಕಕ್ಕೂ, ವೈಚಾರಿಕ ಲೋಕಕ್ಕೂ ಅತ್ಯಂತ ಅಗತ್ಯವಾಗಿದ್ದ ನೀಷೆಯ ಬಗೆಗಿನ ಒಂದು ಒಳ್ಳೆಯ ಕೃತಿಯನ್ನು ವಾಸುದೇವಮೂರ್ತಿಕೊಟ್ಟಿದ್ದಾರೆ.
    ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಿಸುವಂತೆ ನೀಷೆಯ ಮೊದಲಓದು ಇಲ್ಲಿದೆ.
    ಕ್ರೈಸ್ತಧರ್ಮಕ್ಕೆ ವಿರೋಧವಾಗಿ ನಿಂತ
    ನಿಷ್ಠುರನಾದ ಈ ನೀಷೆ, ಪಾಶ್ಚಾತ್ಯ
    ಪ್ರಪಂಚದಲ್ಲಿ ಒಂದು ಹೊಸ
    ವೈಚಾರಿಕತೆಯನ್ನೆ ಹುಟ್ಟಿಸಿದವನು.
    ನಮ್ಮ ಎಲ್ಲ ಭಾವುಕ ಸುಳ್ಳುಗಳಿಂದ,
    ಅನುಭಾವದ ವಂಚನೆಗಳಿಂದ, ಆಧ್ಯಾತ್ಮಿಕ ಕಲ್ಪನೆಗಳಿಂದ ಹೊರಬಂದವನು ಈ
    ನೀಷೆ. ನಮ್ಮನ್ನು ಬೆಚ್ಚಿಸಿ ನಮ್ಮ ಒಳಗನ್ನು ಕನಿಕರವಿಲ್ಲದಂತೆ ಕಾಣಿಸುವ ಈ ದೃಷ್ಟಾರ ನಮ್ಮನ್ನು ಬಿಡುಗಡೆಗೆ ಹುಡುಕುವಂತೆ
    ಎಲ್ಲ ಧರ್ಮಗಳನ್ನು ಪರೀಕ್ಷಿಸಬಲ್ಲವನು.
    ಕೆಲವೊಮ್ಮೆ ಇವನನ್ನು ಓದಿದವರುತಮ್ಮ
    ಮನಸಿನಲ್ಲೇ ನಿಜವೆಂದುಕೊಂಡರೂ
    ಹೊರಗೆ ಅದನ್ನು
    ಒಪ್ಪಿಕೊಳ್ಳದವರಾಗಿರುತ್ತಾರೆ.
    ಹೀಗೆ ನಮಗೆ ನಮ್ಮಿಂದಲೇ ಗುಪ್ತವಾದ
    ಲೋಕಕ್ಕೆ ಪ್ರವೇಶ ಕೊಡಬಲ್ಲ ದಾನವ ಗುರು ಈ ನೀಷೆ.
    -ಯು. ಆರ್. ಅನಂತಮೂರ್ತಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *