kovid-19 katarr-to-sirsi-karwar!ಕಾರವಾರದ ಕೋವಿಡ್ ಸೋಂಕಿತೆ ಶಿರಸಿಗೂ ಬಂದಿದ್ದರು!

ಇಂದು ಉತ್ತರಕನ್ನಡ ಜಿಲ್ಲೆಯ ಕರೋನಾ ಸೋಂಕಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಕಾರವಾರದ ಕೋವಿಡ್ -19
ಸೋಂಕಿತ ಇಬ್ಬರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ ಇನ್ನೊಬ್ಬರು ಕತಾರ್ ದೇಶದಿಂದ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ ಬಂದವರು.

ಮಹಾರಾಷ್ಟ್ರದಿಂದ ಬಂದ ಮಹಿಳೆ ರೈಲುಪ್ರಯಾಣದಿಂದ ಕಾರವಾರಕ್ಕೆ ಬಂದವರು. ಇನ್ನೊಬ್ಬರು ಕತಾರ್ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಖಾಸಗಿ ಬಸ್ ನಲ್ಲಿ ಹುಬ್ಬಳ್ಳಿ ಅಲ್ಲಿಂದ ಶಿರಸಿ ಮಾರ್ಗವಾಗಿ ಕಾರವಾರಕ್ಕೆ ತೆರಳಿದ್ದವರು. ಈ ಇಬ್ಬರ ಗಂಟಲುದ್ರವ ಪರೀಕ್ಷೆಯ ವರದಿ ಇಂದು ಬಂದಿದ್ದು ಈ ಇಬ್ಬರಲ್ಲೂ ಕರೋನಾ ದೃಢಪಟ್ಟಿದೆ. ವಿದೇಶದಿಂದ ಬಂದ ಮಹಿಳೆ ಹುಬ್ಬಳ್ಳಿ-ಶಿರಸಿಗಳಲ್ಲೆಲ್ಲಾ ಸುತ್ತಾಡಿ ಕಾರವಾರ ಸೇರಿದ್ದು ಫಜೀತಿಗೆ ಕಾರಣವಾಗಿದೆ.

ಈ ಮಧ್ಯೆ ಇದೇ ವಾರ ಕಾರವಾರ ಮೂಲದ ಒಬ್ಬರು ವೃದ್ಧೆ ಮತ್ತು ಒಬ್ಬ ಯುವಕ ಕರೋನಾದಿಂದ ಮೃತರಾಗಿದ್ದಾರೆ.

(related)
ಸಿದ್ಧಾಪುರದ ಒಬ್ಬ ವ್ಯಕ್ತಿ ಸೇರಿ ಉ.ಕ.ದ 18 ಕರೋನಾ ಸೋಂಕಿತರಿಗೆ ಇಂದು ಬಿಡುಗಡೆ ಭಾಗ್ಯ
86 ಜನರಲ್ಲಿ ಉಳಿದವರು ಕೇವಲ21

ಮೊದಮೊದಲು ಹೆಚ್ಚು ಕೋವಿಡ್ ಪ್ರಕರಣಗಳಿಂದ ಕುಖ್ಯಾತವಾದ ಉತ್ತರ ಕನ್ನಡ ಜಿಲ್ಲೆ ಈಗ ಕರೋನಾ ಗೆದ್ದ ಖುಷಿಯಲ್ಲಿ ಬೀಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಒಟ್ಟೂ 86 ಜನ ಕೋವಿಡ್ ಸೋಂಕಿತರಲ್ಲಿ 99% ವಿದೇಶಗಳಿಂದ ಪರರಾಜ್ಯಗಳಿಂದ ಬಂದವರು. ಮೂಲತ: ಉತ್ತರಕನ್ನಡ ಜಿಲ್ಲೆಯವರಾದರೂ ಇವರಲ್ಲಿ ಬಹುತೇಕ ಮಂದಿ ಹೊರ ದೇಶ, ರಾಜ್ಯಗಳಿಂದ ಬಂದವರಾಗಿದ್ದರು.

ಹೀಗೆ ವಿದೇಶ, ಹೊರ ರಾಜ್ಯಗಳಿಂದ ಬಂದು ಕರೋನಾ ಸೋಕಿತರಾಗಿದ್ದ ಜಿಲ್ಲೆಯ ಒಟ್ಟೂ86 ಜನರಲ್ಲಿ ಇಂದು ಗುಣಮುಖರಾಗಿ ಹೊರ ನಡೆದ 18 ಜನರು ಸೇರಿ ಈವರೆಗೆ ಒಟ್ಟೂ65 ಜನರು ಕೋವಿಡ್ 19 ಗೆದ್ದ ಅದೃಷ್ಟವಂತರಾಗಿದ್ದಾರೆ. ಉಳಿದ 21 ಜನರ ಆರೋಗ್ಯ ಸ್ಥಿರವಾಗಿದ್ದು ಇವರೆಲ್ಲರೂ ಗುಣಮುಖರಾಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ ತಿಂಗಳ ಕೊನೆಯಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ನಿಯಂತ್ರಣ,ನಿರ್ವಹಣೆ ವಿಷಯದಲ್ಲಿ ಜಿಲ್ಲಾಡಳಿತ ಗೆದ್ದಿದೆ. ಹೊರ ರಾಜ್ಯಗಳಿಂದ ಬಂದು ಸಿದ್ಧಾಪುರದಲ್ಲಿ ಕ್ವಾರಂಟೈನ್ ಆಗಿದ್ದ ಒಟ್ಟೂ 5 ಜನರಲ್ಲಿ ಈವರೆಗೆ ಕರೋನಾ ದೃಢಪಟ್ಟಿತ್ತು. ಇಂದು ಗುಣಮುಖರಾಗಿ ಮನೆಗೆ ತೆರಳಿದ 52 ವರ್ಷದ ವ್ಯಕ್ತಿ ತಾಲೂಕಿನ ಮೊದಲ ಸೋಕಿತರಾಗಿದ್ದು ಇನ್ನುಳಿದ ನಾಲ್ಕೂ ಜನರು ಈ ಕರೋನಾ ವಿರುದ್ಧದ ಸಮರದಲ್ಲಿ ಗೆದ್ದು ಮನೆ ಸೇರುವ ವಿಶ್ವಾಸವಿದೆ ಎನ್ನಲಾಗಿದೆ. ಕರೋನಾದಿಂದ ಭಯ-ಭೀತಿಗೊಳಗಾಗಿದ್ದ ಜಿಲ್ಲೆಯ ಜನರಿಗೆ ಮುಕ್ಕಾಲು ಭಾಗದಷ್ಟು ಜನರು ಈಗಾಗಲೇ ಗುಣಮುಖರಾಗಿರುವುದು ಹೊಸ ಧೈರ್ಯ ನೀಡಿದಂತಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *