

ಸಿದ್ದಾಪುರ, ಇಲ್ಲಿಯ ನಾಮಧಾರಿ ಅಭಿವೃದ್ಧಿ ಸಂಘದ ಸದ ಸ್ಯತ್ವ ದ ವಿಚಾರದಲ್ಲಿ ವಿವಾದವಾಗಿ ನ್ಯಾಯಾಲಯ ಕೆಲವು ಸದಸ್ಯರ ವಿರುದ್ಧ ಹೊರಡಿಸಿದ್ದ ಪ್ರತಿಬಂಧಕಾಜ್ಞೆ ಸಿಂಧು ಎನ್ನುವ ಮೂಲಕ ಅಭಿವೃದ್ಧಿ ಸಂಘ ತನ್ನ ಚಟುವಟಿಕೆ ಮುಂದುವರಿಸಲು ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ.

ನಾಮಧಾರಿ ಅಭಿವೃದ್ಧಿ ಸಂಘದ ಸಸ್ಯತ್ವದಬೇಡಿಕೆ ವಿಚಾರವಾಗಿ ಕೆಲವು ಸದರಸ್ಯರು ಸಂಘದ ವಾರ್ಷಿಕ ಸಭೆಗೆ ಅಡ್ಡಿ ಪಡಿಸಿದ್ದರು. ಈ ಬೆಳವಣಿಗೆ ನಂತರ ಅಧ್ಯಕ್ಷ ಕೆ.ಜಿ. ನಾಯ್ಕ ನೇತೃತ್ವದಲ್ಲಿ ಈ ಸದ ಸ್ಯರಿಗೆ ಸಂಘದ ಸಭೆಯಲ್ಲಿ ಪಾಲ್ಗೊಳ್ಳುವುದಾಗಲಿ ತಕರಾರು ಮಾಡುವುದಾಗಲಿ ಮಾಡಬಾರದೆಂದು ಪ್ರತಿಬಂಧಕಾಜ್ಞೆ ತಂದಿತ್ತು. ಈ ಪ್ರತಿಬಂಧಕಾಜ್ಞೆ ವಿರುದ್ಧ ವಸಂತ ನಾಯ್ಕ ನೇತೃತ್ವದ ತಂಡ ಆಕ್ಷೇಪಣೆ ದಾಖಲಿಸಿತ್ತು. ಉಭುಯತರರ ವಾದ ಆಲಿಸಿದ ನ್ಯಾಯಾಲಯ ತನ್ನ ಪ್ರತಿಬಂಧಕಾಜ್ಞೆಯನ್ನು ಎತ್ತಿ ಹಿಡಿದಿದೆ. ಈ ತೀರ್ಪಿನಿಂದಾಗಿ ನಾಮಧಾರಿ ಅಭಿವೃದ್ಧಿ ಸಂಘದ ಸದಸ್ಯತ್ವ ಕೇಳಿ ಗಲಾಟೆ ಎಬ್ಬಿಸಿದ್ದ ಬಣಕ್ಕೆ ಹಿನ್ನಡೆಯಾಗಿದೆ . ಸದಸ್ಯತ್ವ, ಹಕ್ಕು ಪ್ರತಿಪಾದನೆ ಮಾಡುತಿದ್ದ ಸದಸ್ಯರಲ್ಲದ ತಂಡಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದು ಕೆ.ಜಿ. ನಾಯ್ಕ ನೇತೃತ್ವದ ಬಣಕ್ಕೆ ಆರಂಭಿಕ ಜಯ ಸಿಕ್ಕಂತಾಗಿದೆ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________



