


ಬಿ. ಡಿ. ಹಿರೇಮಠ…

ಯಾರಿಗೆ ಗೊತ್ತಿಲ್ಲ ಹೇಳಿ….೨೦ ವರ್ಷಗಳ ಹಿಂದೆ ಹೈ ಕೋರ್ಟ್ ಧಾರವಾಡ ವಿಭಾಗೀಯ ಪೀಠಕ್ಕಾಗಿ ಹೋರಾಡಿ ಮನೆ ಮಾತಾಗಿದ್ದ ಬಿಡಿ ಹಿರೇಮಠ ಅಂದರೆ ಎಲ್ಲರ ಭಿತ್ತಿಯ ಚಿತ್ರ… ಅವಳಿ ನಗರ ಹುಬ್ಬಳ್ಳಿ – ಧಾರವಾಡದಲ್ಲಿ ಉತ್ತರ ಕರ್ನಾಟಕ ಅಂದರೆ…. ಅದು ಪಾಪು, ಚಂಪಾ… ಪಾವಟೆ, ನಂತರದ ದೊಡ್ಡ ಹೆಸರು. ಅಧಿಕಾರ ಇಲ್ಲದೆ, ಸರ್ಕಾರದ ಸ್ಥಾನ ಮಾನ ಇಲ್ಲದೆ ಉತ್ತರ ಕರ್ನಾಟಕ ಮಾತ್ರವಲ್ಲ ಅಖಂಡ ಕರ್ನಾಟಕ ವನ್ನು ಮನೆ ಬಾಗಿಲಿಗೆ ಕರೆಸಿಕೊಳ್ಳುವ ಏಕೈಕ ಜೀವಂತ ಶಕ್ತಿ ಬಿ. ಡಿ. ಹಿರೇಮಠ….
ದಶಕಗಳ ಅವಿರತ ಹೋರಾಟದ ನಂತರ ಧಾರವಾಡಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ದಕ್ಕಿಸಿಕೊಟ್ಟ ಹಿರೇಮಠ ಹೋರಾಟವೆಂದರೆ ಸರ್ಕಾರ ನಡಗುತ್ತದೆ. ಧಾರವಾಡದಲ್ಲಿ ಸರ್ಕಾರಿ ನೇಮಕಾತಿಗಾಗಿ ನಡೆದ ಹೋರಾಟದಲ್ಲಿ ಹಿರೇಮಠ ಕೈ ಜೋಡಿಸುತ್ತಲೇ ಮುಖ್ಯಮಂತ್ರಿ ಶಿವಕುಮಾರ್ ಅವರ ಬೇಡಿಕೆ ಈಡೇರಿಸುವ ಭರವಸೆ ನೀಡಿ ಅದರಂತೆ ನಡೆದುಕೊಂಡರು ಕೂಡಾ… ಅಧಿಕಾರ ಇಲ್ಲದ ಶಕ್ತಿಶಾಲಿ ವಕೀಲ ಹಿರೇಮಠ ಈಗ ಹೊರಗುತ್ತಿಗೆ ಕಾರ್ಮಿಕರ ಖಾಯಮ್ಮಾತಿಗೆ ಕೈ ಜೋಡಿಸಬೇಕಿದೆ..


ನವ ಜೀತಕ್ಕೆ ಇನ್ನೊಂದು ಹೆಸರಾದ ಹೊರಗುತ್ತಿಗೆ ನೌಕರರು ಮತ್ತು ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗೆ ಹಿರೇಮಠ ಕೈ ಜೋಡಿಸಿದರೆ ಲಕ್ಷಾಂತರ ಕುಟುಂಬಗಳ ಮನೆ – ಮನ ಬೆಳಗುತ್ತದೆ… ಡಿಯರ್ ಹೋರಾಟದ ಸಂಗಾತಿ… ಕನ್ನಡದ ಶಕ್ತಿ ಹಿರೇಮಠ ಅಜ್ಜ ಈ ಹೋರಾಟಕ್ಕೂ ಒಂದು ದಾರಿ ತೋರಿ ಎನ್ನುವುದು ಹಳೆ ಸ್ನೇಹಿತ ನಾಗಿ ನನ್ನ ಕೋರಿಕೆ…
-ಕನ್ನೇಶ್ ಕೋಲಶಿರಸಿ sdp nk


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





