

ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘ ಯಾನೆ ದೀವರ ಸಂಘದ ವಿಚಾರ ಈಗ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಇದು ಒಂದು ಸಮೂದಾಯದ ಅದರಲ್ಲೂ ಹಿಂದುಳಿದ ವರ್ಗದ ಸಮೂದಾಯವೊಂದರ ವಿಚಾರ. ಈ ವಿಷಯ ಅವರ ಆಂತರಿಕ ವಿಚಾರ ಆದರೆ ಇಲ್ಲಿ ರಾಜಕೀಯ ನುಸುಳಿರುವುದು ಎಲ್ಲಾ ವಿವಾದದ ಮೂಲಬಿಂದು ಎನ್ನುವ ವಿಚಾರ ಈಗ ಚರ್ಚೆಯಲ್ಲಿದೆ. ಸುಮಾರು ೨೫ ವರ್ಷಗಳ ಹಿಂದೆ ಅಂದರೆ ಪಕ್ಕಾ ೨೩ ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಘ ಕಾಲು ಶತಮಾನದ ಅವಧಿಯಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದೆ.

ಶ್ರೀಮಾನ್ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾದ ಅವಧಿಯಲ್ಲಿ ಉತ್ತರ ಕನ್ನಡದ ಕೆಲವು ತಾಲೂಕುಗಳ ನಾಮಧಾರಿ ಸಂಘಗಳು ಪ್ರಾರಂಭವಾಗುವ ಕನಸು ಕಂಡಿದ್ದವು. ಅದಕ್ಕೆ ಲಿಂಗಾಯತ, ಕೊಂಕಣಿ, ಬ್ರಾಹ್ಮಣ ಮಠ, ಸಮೂದಾಯ ಸಂಘಗಳೇ ಪ್ರೇರಣೆ! ಹೀಗಿರುವ ಅವಧಿಯಲ್ಲಿ ತಾಲೂಕಿನ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗದ ಸಂಖ್ಯಾ ಬಾಹುಳ್ಯ ಇರುವ ದೀವರು ಜಿಲ್ಲೆಯ ನಾಮಧಾರಿ ಸಂಘಗಳಂತೆ ನಾಮಧಾರಿ ಅಭಿವೃದ್ಧಿ ಸಂಘ ಎಂದು ನೋಂದಾಯಿಸಿಕೊಂಡರು. ಇದರ ಪೂರ್ವ ಮತ್ತು ನಂತರದ ಚರಿತ್ರೆ ಪರಿಗಣಿಸುವುದಾದರೆ….
ದೀವರು ವೈಷ್ಣವರ ಜೊತೆ ಸೇರಬೇಕೋ? ಶೈವರ ಜೊತೆಗೋ ಎಂದು ಪ್ರಶ್ನೆ ಎದ್ದಾಗ ಅಂದಿನ ಹಿರಿಯರು ಸುಮಾರು ಒಂದು ಶತಮಾನಕ್ಕಿಂತ ಹಿಂದೆ ವೈಷ್ಣವರ ಜೊತೆ ಸೇರಿಕೊಂಡ ಚರಿತ್ರೆಯ ಜಾಡು ಹಿಡಿದು ಸಾಗಬೇಕಾಗುತ್ತದೆ!


ಆ ಚರಿತ್ರೆ ಈಗ ಪರಿಗಣಿಸಬೇಕೆಂದೇನೂ ಇಲ್ಲ.
ಉತ್ತರ ಕನ್ನಡದ ನಾಮಧಾರಿಗಳು ದೀವರು ವೈಷ್ಣವರ ಜೊತೆ ಸೇರಿ ತಮ್ಮ ನೆಲಮೂಲದ ಸಾಂಸ್ಕೃತಿಕ ಅಸ್ಮಿತೆ ಕಳೆದುಕೊಳ್ಳಲಿಲ್ಲ ಎನ್ನುವುದು ವಿಶೇಶ. ಯಾಕೆಂದರೆ ಸಮಾಜದ ಸಂಘಟನೆ, ಮಠ ಪರಂಪರೆ, ನಾಮಧಾರಿಗಳು ಸೇರಿದಂತೆ ಸಮಸ್ತ ಅಹಿಂದ ವರ್ಗ ರಾಜರ ಆಳ್ವಿಕೆಯಲ್ಲಿ ಶೋಷಣೆಗೆ ಒಳಗಾಗಿರುವುದು ನಂತರ ಸುಧಾರಣಾ ವಾದಿ ಚಳುವಳಿಗಳು ಅವಗಳನ್ನು ಅನುಸರಿಸಿ ಬಂದ ಗೇಣಿ ಹೋರಾಟ, ಇವುಗಳ ಮಧ್ಯೆ ಸಾಮಾಜಿಕ, ಧಾರ್ಮಿಕ ನ್ಯಾಯಕ್ಕಾಗಿ ಹೋರಾಟ ಇವುಗಳೆಲ್ಲಾ ಕರಾವಳಿ, ಮಲೆನಾಡು ಭಾಗದ ಬಹುಸಂಖ್ಯಾತ ಈಳವ, ಬಿಲ್ಲವ, ದೀವರು, ನಾಮಧಾರಿ ಸೇರಿದಂತೆ ಇವುಗಳ ಸಮಾನಾಂತರ ೨೬ ಜಾತಿ ಸಮೂಹಗಳು ಮತ್ತು ಇವುಗಳೊಂದಿಗೆ ನೂರಾರಿ ಇತರ ಹಿಂದುಳಿದ ಜಾತಿ ಸಮೂದಾಯಗಳೂ ಅನುಭವಿಸಿದ ಯಾತನೆಗಳು.
ಈ ಸುಧೀರ್ಘ ಚರಿತ್ರೆಯ ಪರಿಣಾಮ ಮತ್ತು ವೈದಿಕ ಧರ್ಮದ ಏಕಸ್ವಾಮ್ಯತ್ವಗಳಿಂದ ಬಳಲಿದ ಹಿಂದುಳಿದ ವರ್ಗಗಳಲ್ಲಿ ಈ ಬಹುಸಂಖ್ಯಾತ ಹಿಂದುಳಿದವರಿಗೆ ನಾಯಕತ್ವ, ಮುಂದಾಳತ್ವ ಕೊಟ್ಟಿದ್ದು ಇದೇ ಸಮೂದಾಯ.
ಇಂಥ ಭಾರತೀಯ ಮೂಲದ ಬಹುಸಂಖ್ಯಾತ ದೇಶವಾಸಿಗಳಲ್ಲಿ ದೀವರು ಸಾಮಾಜಿಕ, ಧಾರ್ಮಿಕ ನ್ಯಾಯಗಳ ಜೊತೆಗೆ ಸಾಮಾಜವಾದಿ ಚಳವಳಿ, ಗೇಣಿಹೋರಾಟ ಇವುಗಳಿಗೆಲ್ಲಾ ಮುಂದಾಳತ್ವದ ನಾಯಕತ್ವ ಕೊಟ್ಟಿದ್ದರಿಂದಲೇ ಇಂದು ಈಡಿಗ ಎನ್ನುವ ದೀವರ ಸಮಾನಾಂತರ ೨೬ ಜಾತಿ ಉಪ ಸಮೂದಾಯಗಳು ಕರ್ನಾಟಕದಲ್ಲಿ ಜಾಗೃತ ಹಿಂದುಳಿದ ವರ್ಗದ ಉಪಪಂಗಡಗಳಾಗಿ ಹೆಸರು ಮಾಡಿವೆ.
ಇದರಲ್ಲಿ ದೀವರಲ್ಲಿ ಹಳೆಪೈಕರು, ಹಾಲಕ್ಷತ್ರಿಯರು, ನಾಮಧಾರಿಗಳು, ಈಡಿಗರೆಂದು ಆಯಾ ಪ್ರಾದೇಶಿಕ ಆಡಳಿತಗಳ ಅನುಕೂಲಕ್ಕೆ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡಿವೆ ಆದರೆ ಇವುಗಳೊಂದಿಗೆ ೨೬ ಈಡಿಗ ಸಮಾನಾಂತರ ಸಮೂದಾಯಗಳು ಮತ್ತು ಇವುಗಳೊಂದಿಗೆ ನೂರಾರು ಇತರ ಹಿಂದುಳಿದ ವರ್ಗಗಳ ಚಿಕ್ಕ-ಪುಟ್ಟ ಸಮೂದಾಯಗಳೆಲ್ಲಾ ಸೇರಿ ಈಗಿನ ೨ಎ ಪ್ರವರ್ಗದಡಿ ಮೀಸಲಾತಿಯ ನೆಲೆ ಕಂಡುಕೊಂಡಿವೆ.
ಹೀಗೆ ವೈಶಿಸ್ಟ್ಯಮಯ ಚಾರಿತ್ರಿಕ ಹಿನ್ನೆಲೆ ಹೊಂದಿದ ಈ ಸಮೂದಾಯ ಈಗಲೂ ರಾಜಕೀಯ, ಧಾರ್ಮಿಕ ಸಾಮಾಜಿಕ ಬದುಕಿನಲ್ಲಿ ವೈದಿಕ ಯಜಮಾನಿಕೆ, ವೈದಿಕ ನಿಯಂತ್ರಣಕ್ಕೆ ಒಳಪಡುತ್ತಿರುವ ವಿಸ್ಮೃತಿ ಹಿಂದೆ ಕೆಲಸ ಮಾಡುವ ಕೈ ಯಾವುದು ಎಂಬುದು ಸ್ಪಷ್ಟವಾದರೆ,,,…. ಇಂದಿನ ವರ್ತಮಾನದ ನಗ್ನ ಸತ್ಯಗಳು ಅನಾವರಣಗೊಳ್ಳುತ್ತವೆ.
ರಾಜರ ಕಾಲದಲ್ಲಿ ಸೈನಿಕರಾಗಿ, ಕೃಷಿಕರಾಗಿ, ನಂತರ ಗೇಣಿಮುಕ್ತರಾಗಿ, ವಿದ್ಯಾವಂತರಾಗಿ ವೇಗದ ಉತ್ಕ್ರಾಂತಿ ದಾಖಲಿಸಿದ ಧೀರ ಸಮೂದಾಯವೊಂದು ಈಗ ಎದುರಿಸುತ್ತಿರುವ ಬಿಕ್ಕಟ್ಟಿಗೆ ಯಾರು ಕಾರಣ?
ಅನೇಕ ಹೋರಾಟ, ಬದಲಾವಣೆ, ಬಂಡಾಯಗಳ ನೇತೃತ್ವ ವಹಿಸಿದ್ದ ಶೂರ ಸಮೂದಾಯದ ನಾಯಕತ್ವ, ಸಮೂದಾಯ ಭವನ, ರಾಜಕೀಯ ಗಳಲ್ಲಿ ಒಡೆದಾಳುವ ದಾಳ ಪ್ರಯೋಗಿಸುತ್ತಿರುವ ಸಮಯಸಾಧಕ ಅವಕಾಶವಾದಿಗಳ್ಯಾರು? ಎನ್ನುವ ಪ್ರಶ್ನೆ ಕೂಡಾ ಇತ್ತೀಚಿನ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಚರ್ಚೆಯಲ್ಲಿರುವುದು ಪ್ರಸ್ತುತ ವಿದ್ಯಮಾನ…. (ಮುಂದುವರಿಯಲಿದೆ…)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________





