ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು.

ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ ಸೋಲು- ಗೆಲುವುಅಂತಿಮಫಲಿತಾಂಶ ಆದರೆ ರಾಜಕೀಯಮುಖಂಡರಿಗೆ ಇದುಪ್ರತಿಷ್ಠೆಯಪ್ರಶ್ನೆ..ಕೆಲವು ಕುಟುಂಬಗಳು ರಾಜಕೀಯಅಖಾಡದಲ್ಲಿ ನೆಲೆನಿಂತವರಿಗೆ ಸೋಲು- ಗೆಲುವಿನ ಅಂತಿಮತೀರ್ಪಿನ ಬಗ್ಗೆ ಲೆಕ್ಕವೇಇಲ್ಲ. ಚುನಾವಣೆಎಂದರೆ ಅವರಿಗೆ ಹೋರಾಟದಅಂಕಣ ಇಂಥ ವಿಶೇಷ ಗುಣವಿಶೇಷಗಳಲ್ಲಿ ಸಿದ್ದಾಪುರ ಬಿಳಗಿಯ ವಾಲ್ಮೀಕಿ ಸಹೋದರರ ಕುಟುಂಬವು ಒಂದು.

ಬಯಲುಸೀಮೆಯಿಂದ ಬಂದು ಮಲೆನಾಡಿನಲ್ಲಿ ನೆಲೆನಿಂತಿರುವ ವಾಲ್ಮೀಕಿ ಕುಟುಂಬದ ಪಿ.ಟಿ.ವಾಲ್ಮೀಕಿ ಶಿಕ್ಷಕರಾಗಿ ಸಿದ್ದಾಪುರಕ್ಕೆ ಆಗಮಿಸಿದರು. ಶಿಕ್ಷಕರಾಗಿ ಶಾಲೆಯಲ್ಲಿಸೇವೆ ಸಲ್ಲಿಸುತ್ತಾ ತಮ್ಮ ಕುಟುಂಬದ ಸದ ಸ್ಯರೊಂದಿಗೆ ಉದ್ಯಮ, ರಾಜಕೀಯ ಪ್ರಯೋಗ ಮಾಡುತ್ತಾ ಸಿದ್ದಾಪುರದಲ್ಲಿ ಹೆಸರು ಮಾಡಿದವರು. ತಾಲೂಕಿನ ಯಾವುದೇ ಕ್ಷೇತ್ರದಲ್ಲಿ ತಮ್ಮ ಪರಿಶಿಷ್ಟ ವರ್ಗದ ಮೀಸಲಾತಿ ಯಡಿ ಗ್ರಾ. ಪಂ. ನಿಂದ ಜಿಲ್ಲಾ ಪಂಚಾಯಿತಿ ವರೆಗೆ ಸ್ಪರ್ಧಿಸಿ ಗೆಲ್ಲುವ ಛಾತಿಯ ವಾಲ್ಮೀಕಿ ಬ್ರದರ್ಸ್ ಈ ವರೆಗೆ ಸ್ಪರ್ಧಿಸಿದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಜಯ ದಾಖಲಿಸಿ ತಮ್ಮ ಹೆಸರು ಪ್ರತಿಸ್ಥಾಪಿಸಿದೆ.

ಈ ವರ್ಷ ತಾಲೂಕಿನ ಒಂದು ಕ್ಷೇತ್ರದಲ್ಲಿ ಇವರಿಗೆ ತಮ್ಮ ಮೀಸಲಾತಿಯಡಿ ತಾಲೂಕಾ ಪಂಚಾಯಿತ ಗೆ ಸ್ಪರ್ಧಿಸುವ ಅವಕಾಶ ಅನಾಯಾಸ ಎಂಬುವಂತಿದೆ. ಆದರೆ ವಾಲ್ಮೀಕಿ ಕುಟುಂಬಕ್ಕೆ ಯಾವ ಕ್ಷೇತ್ರದಲ್ಲೂ ಮೀಸಲಾತಿ ಅವಕಾಶ ಇಲ್ಲದೆಯೂ ಸ್ಪರ್ಧೆ ಮಾಡುವ ಆಸಕ್ತಿ ಕೆರಳಿದೆ. ತಮಗೆ ಲಭ್ಯವಿರುವ ಯಾವುದೇ ಸಾಮಾನ್ಯ ಮಹಿಳೆ, ಪುರುಷ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ ವಾಲ್ಮೀಕಿ ಕುಟುಂಬ ತಮ್ಮ ಕುಟುಂಬದ ಹಿರಿಯ ದಂಪತಿಗಳು ಹಾಗೂ ಕಿರಿಯರ ಕೋಟಾದಲ್ಲಿ ಎಳೆ ದಂಪತಿಗಳು ಸ್ಪರ್ಧೆಗೆ ಅವಕಾಶ ಕೇಳುತ್ತಿರುವುದರಿಂದ ಕಾಂಗ್ರೆಸ್ ತಾಲೂಕಿನ ಎರಡ್ಮೂರು ಚುನಾವಣೆಗಳ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮನಸ್ಸು ಮಾಡುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ ಎನ್ನಲಾಗುತ್ತಿದೆ.

ಈ ಹಿಂದೆ ಬಿಳಗಿ ಗ್ರಾಪಂ, ಸಿದ್ದಾಪುರ ತಾಲೂಕು ಪಂಚಾಯತ್ ಗಳಲ್ಲಿ ಸ್ಪರ್ಧಿಸಿ ಗೆದ್ದಿರುವ ಈ ಕುಟುಂಬದ ಸದಸ್ಯರು ಈ ಬಾರಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ...

ರಾಜೀವ್ ಮೈದಾನಉಳಿಸಲು ಸೂಚನೆ

ಸಿದ್ಧಾಪುರ ‘ರಾಜೀವ ಮೈದಾನ’ ಉಳಿಸಲು ಗ್ರಾಮಸ್ಥರ ಆಗ್ರಹ; ಕ್ರೀಡೆಗೆ ಹೊರತುಪಡಿಸಿ ಅನ್ಯ ಚಟುವಟಿಕೆಗೆ ನೀಡದಂತೆ ಶಿರಸಿ ಉಪವಿಭಾಗಾಧಿಕಾರಿ ಸೂಚನೆ ​ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ಏಕೈಕ...

ತ್ಯಾರಸಿ ಯುವತಿಗೆ ಬಂಗಾರದ ಪದಕ

ಸಿದ್ದಾಪುರ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಸಿದ್ದಾಪುರ ತಾಲೂಕಿನ ತ್ಯಾರ್ಸಿಯ ರಚನಾ ಪ್ರಕಾಶ ಗೌಡರ್ ರಾಜ್ಯದ ರಾಜ್ಯಪಾಲರಿಂದ ಬಂಗಾರದ( ಗೋಲ್ಡ್ ಮೆಡಲ್...

ಸಹಕಾರಿ ಸೇರಿದಂತೆ…. ನಾನಾ ಕ್ಷೇತ್ರಗಳ ಕೀಲಿಕೈ ಕಳ್ಳನ ಕೈ ಸೇರಿದರೆ ಅಪಾಯ!!!

ಕನ್ನ ಹಾಕಿದವರಿಗಿಂತ ಕಾವಲು ನಿಂತು ಕಣ್ಣುಮುಚ್ಚಿದವನೇ ಪ್ರಧಾನ ಆರೋಪಿ!?(ಸಹಕಾರಿ ರಂಗದ ರಕ್ಷಾ ಕವಚವಾದ ಸನ್ನದು ಲೆಕ್ಕಪರಿಶೋಧಕರ ನೈತಿಕ ಅಧಃಪತನದ ಕರಾಳ ದರ್ಶನ) “ಭಾರತೀಯ ಸಂಸ್ಕೃತಿಯಲ್ಲಿ...

Latest Posts

ಶಿಕ್ಷಣ – ಉದ್ಯಮ, ರಾಜಕೀಯ ಕ್ಷೇತ್ರಗಳ ಮುಂಚೂಣಿಯ ವಾಲ್ಮೀಕಿ ಕುಟುಂಬ

ತಾಲೂಕುಪಂಚಾಯತ್ & ಜಿಲ್ಲಾಪಂಚಾಯತ್ ಜೊತೆಗೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹೊಸ್ತಿಲಲ್ಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಎಲ್ಲೆಲ್ಲೂ ಚುನಾವಣೆ ಸದ್ದು. ಗ್ರಾಮೀಣ ಚುನಾವಣಾಕಣಎಂದರೆ… ಅದು ಕೋಳಿಕಾಳಗದಂತೆ ಸೋಲು- ಗೆಲುವುಅಂತಿಮಫಲಿತಾಂಶ ಆದರೆ ರಾಜಕೀಯಮುಖಂಡರಿಗೆ ಇದುಪ್ರತಿಷ್ಠೆಯಪ್ರಶ್ನೆ..ಕೆಲವು ಕುಟುಂಬಗಳು ರಾಜಕೀಯಅಖಾಡದಲ್ಲಿ ನೆಲೆನಿಂತವರಿಗೆ ಸೋಲು- ಗೆಲುವಿನ ಅಂತಿಮತೀರ್ಪಿನ ಬಗ್ಗೆ ಲೆಕ್ಕವೇಇಲ್ಲ. ಚುನಾವಣೆಎಂದರೆ ಅವರಿಗೆ ಹೋರಾಟದಅಂಕಣ ಇಂಥ ವಿಶೇಷ ಗುಣವಿಶೇಷಗಳಲ್ಲಿ ಸಿದ್ದಾಪುರ ಬಿಳಗಿಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *