


ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದದುರ್ಘಟನೆ ಸಿದ್ದಾಪುರಕೋಲಶಿರಸಿ ಯಲ್ಲಿ ನಡೆದಿದೆ. ಮೃತ ಈಶ್ವರ ಹಾಲಾ ನಾಯ್ಕ ಕೃಷಿ- ಕೂಲಿಮಾಡಿಕೊಂಡಿದ್ದು ಪಿತ್ರಾರ್ಜಿತ ಆಸ್ತಿ ಇದ್ದರೂ ಅವರ ಹೆಸರಿನಲ್ಲಿರಲಿಲ್ಲ ತುಂಡುಭೂಮಿಹೊಂದಿದ್ದ ಈಶ್ವರ ನಾಯ್ಕ ಅನಾರೋಗ್ಯಕ್ಕೆ ತುತ್ತಾಗಿ ಕೃಷಿ- ಕೂಲಿಮಾಡುವಷ್ಟುಸಶಕ್ತನಾಗಿರಲಿಲ್ಲ. ಅನಾರೋಗ್ಯದ ನಡುವೆ ನಿರುದ್ಯೋಗ ಜೊತೆಗೆಜೀವನನಿರ್ವಹಣೆಗೆಮಾಡಿಕೊಂಡಿದ್ದ ಸಾಲ ಇವುಗಳಿಂದ ಚಿಂತಿತನಾ ಗಿದ್ದವನು ಶುಕ್ರವಾರ ಮನೆಯಿಂದ ಕೆಲಸಕ್ಕೆಂದು ಹೊರನಡೆದಿದ್ದವನು ಸಾಯಂಕಾಲದ ವರೆಗೆ ಮನೆಗೆ ಮರಳಿರಲಿಲ್ಲ. ಗ್ರಾಮಕ್ಕೆ ಬರುವ ಕೊನೆಯ ಬಸ್ ತೆರಳಿದ ನಂತರ ಮನೆಗೆ ಬಾರದ ಈಶ್ವರ ಬಗ್ಗೆ ಪತ್ನಿ ಮತ್ತು ಮಗಳು ಊರಿನಲ್ಲಿ ವಿಚಾರಿಸಿದ್ದಾರೆ. ತಡ ರಾತ್ರಿಯಾದರೂ ಬಾರದ ಈ ವ್ಯಕ್ತಿ ಬಗ್ಗೆ ಖಾಯಂ ಸಂಪರ್ಕ ದ ಜಾಗದಲ್ಲಿ ವಿಚಾರಿಸಿದಾಗ ಈಶ್ವರ ನಾಯ್ಕ ಶುಕ್ರವಾರದ ಸಂಜೆ ವರೆಗೆ ಕೋಲಸಿರ್ಸಿ ಕ್ರಾಸ್ ಬಳಿ ಇದ್ದುದನ್ನು ಕಂಡವರು ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಹುಡುಕಾಡಿದ ಕುಟುಂಬಸ್ಥರಿಗೆ ಶನಿವಾರ ಮುಂಜಾನೆ ಈ ವ್ಯಕ್ತಿ ಕಸ್ತೂರು ಮಾರ್ಗದ ಪಕ್ಕ ಗೇರು ಮರವೊಂದಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ತೇಲಾಡುತ್ತಿರುವುದು ಪತ್ತೆಯಾಗಿದೆ. ಮೃತ ಈಶ್ವರ ನಾಯ್ಕ ಸಾಲಬಾಧೆಯಿಂದ ಹತಾಶನಾಗಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪ್ರಾಥಮಿಕ ತನಿಖೆ ಯಿಂದ ಸಿದ್ಧವಾಗಿದೆ. ಆತ್ಮಹತ್ಯೆ ಗೆ ಶರಣಾದ ಈಶ್ವರ ಪತ್ನಿ – ಪುತ್ರಿ ಸೇರಿದ ಅಪಾರ ಬಂಧು – ಬಳಗ ಆಗಲಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




