

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು ನಮ್ಮ ಪ್ರದೇಶವನ್ನು ವಿಶ್ವ ವಿಖ್ಯಾತ ಮಾಡುತ್ತಿರುವುದಕ್ಕೆ ಧನ್ಯವಾದಗಳು.. ಮಾಧ್ಯಮ ರಂಗ ಶ್ರೀಮಂತರು ಪ್ರಬಲರ ಪರ ವಾಲಿರುವಾಗ ನಿಮ್ಮಂಥ ಕೆಲವರಾದರೂ ಜನರ ಪರ ಇದ್ದೀರಿ ಎನ್ನುವುದು ಸಮಾಧಾನ. ನಮ್ಮಂಥ ಎಷ್ಟೋ ಜನರು ಪ್ರತಿದಿನದ ಆಗು – ಹೋಗುಗಳಿಗೆ ನಿಮ್ಮನ್ನು ಅವಲಂಬಿಸಿದ್ದೇವೆ. Samaajamukhi ಚಾನೆಲ್ ನೋಡಿ ದಿನದ ವಿದ್ಯಮಾನ ತಿಳಿಯುತ್ತಿದ್ದೇವೆ. ನಿಮಗೆ ನಮ್ಮ ಧನ್ಯವಾದಗಳು..

ನಾವೆಲ್ಲಾ ಜಸ್ಟ್ subscribers ಆದರೆ ಸಾಕಾಗುವುದಿಲ್ಲ ನಿಮ್ಮನ್ನು ಉಳಿಸಿಕೊಳ್ಳಬೇಕಾದರೆ ಜಾಹೀರಾತು ದಾರರು, paid ಓದುಗರು ಆಗಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ. ಕೆಲವರಾದರೂ ನಿಮಗೆ ನೆರವಾಗುವವರಿದ್ದಾರೆ ಎನ್ನುವುದು ನಮ್ಮ ಸಮಾಧಾನ. ಉಳಿದಂತೆ ಕಾಲು ಶತಮಾನದ ಪ್ರಾಮಾಣಿಕ ಸೇವೆ ಮಾಡಿದ ನಿಮಗೆ ಸುಖ, ಕೀರ್ತಿ, ಸನ್ಮಾನ, ಅಭಿನಂದನೆ ಗಳು ಹುಡುಕಿ ಬರುತ್ತಿರುವುದು ಸಮಾಧಾನ ಅದಕ್ಕೆ ನೀವು ಅರ್ಹರು ಎನ್ನುವುದು ನಮ್ಮ ಭಾವನೆ.
ಪರಿಸರ, ಸ್ಥಳೀಯ ಕಾಳಜಿ, ನಿಷ್ಠುರ ನಡೆ ಮಾನವೀಯ ತುಡಿತಕ್ಕೆ ಸಮಾಜಮುಖಿ ಮಾದರಿ ಈ ವಿಚಾರದಲ್ಲಿ ನಿಮಗೆ ಸಾಟಿ ಯಾರೂ ಇಲ್ಲ. ನೀವು ನಾಮಧಾರಿ ಆಗಿ ನಿಮ್ಮ ಸಮಾಜದ ಕೆಲವು ನೈಜ ವಿಚಾರಗಳನ್ನು ತಿಳಿಸುತ್ತಿದ್ದೀರಿ. ಕೆಲವರು ನಿಮ್ಮವರನ್ನೂ ಬಳಸಿಕೊಂಡು ಉತ್ತರ ಕನ್ನಡ ರಾಜಕಾರಣ ಮಾಡುವವರು ನಿಮ್ಮ ದೀವರ ನ್ನೂ ಸೇರಿ ಇತರ ಹಿಂದುಳಿದವರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂದು ಅನೇಕ ಬಾರಿ ನೀವು ಸತ್ಯ ಹೇಳಿದ್ದೀರಿ. ನಿಮ್ಮಲ್ಲಿ ಭೀಮಣ್ಣ ಸಭ್ಯತೆಯಲ್ಲಿ ಮಾದರಿಯಾದರೆ… ಕೆಜಿ ನಾಯ್ಕ ಗಟ್ಟಿಗರಾಗಿ ಹೆಸರು ಮಾಡಿದವರು. ಇವರೊಂದಿಗೆ ಡಜನ್ ಗಟ್ಟಲೆ ಉತ್ತಮ ನಾಯಕರು ದೀವರು ನಾಮಾಧಾರಿಗಳಲ್ಲಿದ್ದರೂ ಅವರಿಗೆ ಅವಕಾಶದ ಕೊರತೆ.


ಕೇಜಿನಾಯ್ಕರು ಅವಕಾಶಕೇಳುತ್ತಾರೆಎಂದು ಅವರನ್ನುಮುಗಿಸಲುಪ್ರಯತ್ನಿಸುವ ಕೆಲವರಿಗೆ ಅವರುಸಮಯೋಚಿತವಾಗಿ ಸರಿಯಾದ ಉತ್ತರ ಕೊಟ್ಟಿದ್ದಾರೆ. ಸಮರ್ಥರಾಗಿ ಶಾಸಕತ್ವದ ಅವಕಾಶ ಕೇಳುವುದು ತಪ್ಪೆ?
ಅವರ ದಕ್ಷತೆ ಬಳಸಿಕೊಂಡು ಮೇಲೇರಿದವರು ಅವರ ಅವಕಾಶಕ್ಕೆ ಅಡ್ಡಗಾಲಾ ಗ್ಬಾರದಲ್ಲ.
ಕೇಜಿನಾಯ್ಕ ನಾಯಕ,ಶಾಸಕರಾಗಬಾರದೆಂದು ದುರುದ್ದೇಶ ಹೊಂದಿದವರು ಕೆಲವರನ್ನು ಚೂ ಬಿಟ್ಟು ಆಡುತ್ತಿರುವ ಆಟಕ್ಕೆ ನಾಮಧಾರಿಸಮಾಜ ಬಲಿಯಾಗುತ್ತಿದೆ. ಕೆಲವರ ಹಿತಕ್ಕೆ ಕೆಲವರು ದುಡಿಯುವುದು ಸಹಜ ಆದರೆ ಕೆಲವರ ಅನುಕೂಲಕ್ಕೆ ಒಂದು ಸಮಾಜಬಲಿಯಾಗಬಾರದಲ್ಲ… ಇಡೀ ಜಿಲ್ಲೆಯಲ್ಲಿ ಅನೇಕ ಕಡೆ ಭವ್ಯ ನಾಮಧಾರಿ ಭವನಗಳು ತಲೆಎತ್ತಿನಿಂತಿವೆ ಆದರೆ ನಾಮಧಾರಿಗಳ ಶಕ್ತಿಕೇಂದ್ರವಾದ ಸಿದ್ದಾಪುರದಲ್ಲಿ ನಾಮಧಾರಿ ಮದುವೆಛತ್ರ ಯಾರದೋ ದುರುದ್ದೇಶಕ್ಕೆ ಬಲಿಯಾಗುವುದು ಸರಿಯಲ್ಲ. ಕೆಲವರ ರಾಜಕೀಯಹಿತಾಸಕ್ತಿಯಿಂದ ನೆನೆಗುದಿಗೆ ಬಿದ್ದಿರುವ ಸಭಾಭವನ ನಾಮಧಾರಿಗಳ ಪ್ರತಿಷ್ಠೆಯ ಪ್ರಶ್ನೆಯಾಗಬೇಕು. ಭೀಮಣ್ಣ ಶಾಸಕರಿರುವಾಗ, ಕೆಜಿನಾಯ್ಕ ಅಧ್ಯಕ್ಷರಾಗಿರುವಾಗ ಈ ಕೆಲಸ ಆಗಬಾರದೆಂದು ಸುಪಾರಿಕೊಟ್ಟಿರುವ ಪಟ್ಟಭದ್ರರು ಅನೇಕ ವರ್ಷಗಳಿಂದ ಅನೇಕ ಸಬೂಬುಗಳಮೂಲಕ ನಿಮ್ಮ ಸಮಾಜಬಳಸಿ ಒಗೆಯುತ್ತಾಬಂದಿದ್ದಾರೆ. ಅಂಥವರ ಅಧಿಕಾರದ ಆಸೆಗೆ ನಾಮಧಾರಿಸಮಾಜ ಬಲಿಯಾಗುವುದು ಬೇಡ. ಸುಂದರವಾಗಿ ದೀವರ ಸಮಾಜದಹಿನ್ನೆಲೆ ಬಗ್ಗೆ ಬರೆದಿದ್ದೀರಿ. ನಿಮ್ಮ ಸಮುದಾಯದ ಜೊತೆಗೆ ನಮ್ಮ ಸಮಾಜದಬಗ್ಗೆಯೂ ನೀವು ಬರೆದಿದ್ದೀರಿ… ಒಕ್ಕಲಿಗರು ಹೆಚ್ಚಿರುವಲ್ಲಿ ಜೆಡಿಎಸ್ ಗೆಲ್ಲುತ್ತದೆ. ಲಿಂಗಾಯತರು ಅಧಿಕ ಸಂಖ್ಯೆ ಇರುವಲ್ಲಿ ಅವರು ದೀವರು ಹೆಚ್ಚಿರುವಲ್ಲಿ ಅವರು ಸ್ಪರ್ಧಿಸಿ ಆಯ್ಕೆ ಆದರೆ ತಪ್ಪೇನು? ಕೆಲವರಿಗೆ ತಾವು ಮಾತ್ರ ಅಧಿಕಾರ ಹಿಡಿಯಬೇಕು ಉಳಿದವರು ತಮ್ಮ ಸೇವೆ ಮಾಡಬೇಕು ಎನ್ನುವ ಆಸೆ. ಅದಕ್ಕೆ ಬಲಿಪಶುವಾಗುತ್ತಿರುವುದು ಶಿರಸಿ – ಸಿದ್ದಾಪುರದಲ್ಲಿ ನಾಮಧಾರಿಗಳು.
ಹೇಗಾದರೂ ಮಾಡಿ ಶಿರಸಿ – ಸಿದ್ದಾಪುರ ಕ್ಷೇತ್ರ ಗೆಲ್ಲುವವರ ತಂತ್ರದ ಭಾಗವಾಗಿ ಈಗ ವಿಚಿತ್ರ ರಾಜಕಾರಣ ಪ್ರಾರಂಭವಾಗಿದೆ. ಹಿಂದಿನ ನನ್ನ ಪತ್ರ ಪ್ರಕಟಿಸಿರುವ ವಿಶ್ವಾಸದ ಮೇಲೆ ಹೀಗೆಲ್ಲಾ ಬರೆದಿದ್ದೀನಿ ತಪ್ಪು ಭಾವಿಸಬೇಡಿ… ನಮ್ಮೂರಲ್ಲಿ ದೊಡ್ಡ ಸಮುದಾಯವನ್ನು ಒಡೆದು ಲಾಭ ಮಾಡಿಕೊಳ್ಳುವವರ ಕುತಂತ್ರಕ್ಕೆ ನಾಮಧಾರಿ ಸಮಾಜ ಬಲಿಯಾಗಬಾರದು. ಧೀರ – ಶೂರರು ಆದ ನೀವು ನಿಮ್ಮೊಳಗೆ ಕಚ್ಚಾಡಿ ಬೇರೆಯವರಿಗೆ ಲಾಭ ಮಾಡಲು ಕೊಡಬೇಡಿ. ಎಲ್ಲರನ್ನೂ ಆಳಿ ತಮ್ಮದನ್ನು ಮಾತ್ರ ಉಳಿಸುವವರು ಇತ್ತೀಚಿನ ದಿನಗಳಲ್ಲಿ ಹೊಂಚು ಹಾಕುತ್ತಿದ್ದಾರೆ. ಭೀಮಣ್ಣ, ಕೇಜಿ ನಾಯ್ಕರಂಥವರನ್ನು ಸಮಾಜ ಉಳಿಸಿಕೊಳ್ಳದಿದ್ದರೆ… ಅದರ ಲಾಭ ಪಟ್ಟಭದ್ರರು, ಬೇರೆಯವರಿಗೆ .
ಈ ಪತ್ರ ಪ್ರಕಟಿಸಿ ಅಪಾಯ ತಡೆಯಿರಿ… ನಾಮಧಾರಿ ಸಭಾಭವನ, ಅಭಿವೃದ್ಧಿ ತಡೆಯುವವರು ಅವರೇ ಹಿಂದಿನಿಂದ ಗೇಲಿ ಮಾಡಿ ನಗುವವ ರೂ ಅವರೇ… !
ಈ ಯೋಜಿತ ಪಟ್ಟಭದ್ರ ಹಿತಾಸಕ್ತಿಗಳಿಗೆ ಬಲಿಯಾಗದೆ ದೀವರ ಸ್ವಾಭಿಮಾನ ಉಳಿಸಿ… ನಿಜವಾಗಿ ದೀವರ ಬಗ್ಗೆ ಪ್ರೀತಿ – ಕಾಳಜಿ ಇದ್ದರೆ ಮೊದಲು ಸಭಾಭವನ ಪೂರ್ತಿ ಮಾಡಿ ಇದನ್ನು ಮುಂದಿಟ್ಟುಕೊಂಡು ಒಡೆದಾಳುವವರಿಗೆ ಲಾಭ ಮಾಡಬೇಡಿ.. ನಮ್ಮ ಕಳಕಳಿ ಇಷ್ಟೇ.
– ಅನಾಮಿಕ @ ಸಿದ್ದಾಪುರ nk

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




