

ವಿಶ್ಲೇಷಣೆ….. (- ಅನಾಮಿಕ)

ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ!
ಬನ್ನಿ.. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಹುದ್ದೆಯ ರಾಜಕೀಯ ಪ್ರಹಸನದ ಮತ್ತೊಂದು ಮಜವಾದ ಮುಖವನ್ನು ನೋಡೋಣ…


ಶಿರಸಿಗೆ ನಿಷೇಧದ ಬಿಸಿ, ಸಿದ್ದಾಪುರಕ್ಕೆ ಸಿಕ್ತು “ಬಂಪರ್ ಖುಷಿ”!
ಅತ್ತ ಶಿರಸಿಯಲ್ಲಿ ಶಾಸಕರ ಸಮುದಾಯವರಿಗೆ ಬ್ಲಾಕ್ ಅಧ್ಯಕ್ಷ ಗಾದಿ ‘ನೋ ಎಂಟ್ರಿ’ ಎಂಬ ಸದ್ದಿಲ್ಲದ ವದಂತಿ ಹಬ್ಬಿ, ಸಾಹೇಬರನ್ನು ಅಸಹಾಯಕತೆಯ ಕಡಲಲ್ಲಿ ಮುಳುಗಿಸಿದೆ. ಆದರೆ, ನೆರೆಯ ಸಿದ್ದಾಪುರ ಕಡೆ ಕಣ್ಣು ಹಾಯಿಸಿದರೆ ಸನ್ನಿವೇಶ ಸಂಪೂರ್ಣ ಉಲ್ಟಾ!
ಸಿದ್ದಾಪುರದಲ್ಲೂ ಶಾಸಕರ ಸಮುದಾಯವೇ ದೊಡ್ಡ ಮಟ್ಟದಲ್ಲಿ ಮೇಲುಗೈ ಹೊಂದಿದೆ. ಜೊತೆಗೆ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರನ್ನಾಗಿ ಆಯ್ಕೆಮಾಡಿ ಇತಿಹಾಸವನ್ನು ಸೃಷ್ಟಿಸುವಲ್ಲಿ ಅವರ ಸಮೂದಾಯದ ವಿಶೇಷ ಶ್ರಮವನ್ನು ಸ್ಮರಿಸಲೇ ಬೇಕು. ಆದರೆ ಈಗ ಹೈಕಮಾಂಡ್ ಜಾರಿಗೆ ತಂದಿರುವ ಹೊಸ ಸೂತ್ರಗಳು ಶಿರಸಿಯಲ್ಲಿ ಸಾಹೇಬರ ತಲೆನೋವಿಗೆ ಕಾರಣವಾಗಿದ್ದರೆ, ಸಿದ್ದಾಪುರದಲ್ಲಿ ಮಾತ್ರ ಅದೇ ಸೂತ್ರ ಸಾಹೇಬರ ಮುಖದಲ್ಲಿ ಒಳಗೊಳಗೇ ತೃಪ್ತಿಯ ನಗು ತರಿಸಿದೆ ಎನ್ನುವ ಗಾಸಿಪ್ ಕೇಳಿ ಬರುತ್ತಿದೆ!
”ಅಕಾಲಿಕ ರಾಜೀನಾಮೆ”ಯ ಪ್ರಹಸನ…ತೂಗದ ತಕ್ಕಡಿಯೇ ಕಾರಣ?!
ಸಿದ್ದಾಪುರದ ಹಿಂದಿನ ಅಧ್ಯಕ್ಷರ ಅಧಿಕಾರಾವಧಿ ಏಳು ಬೀಳಿನ ರೋಚಕ ಕಥೆಯಾಗಿದೆ! ಮೊದಮೊದಲಿಗೆ ಜೊತೆಯಾಗಿ ಕೈ ಕೈ ಹಿಡಿದು ಹೆಜ್ಜೆ ಹಾಕಿದ್ದನ್ನು ಕಂಡವರಿಗೂ ಹೆಜ್ಜೆ ತಪ್ಪಿದ್ದು ಎಲ್ಲಿ ಎನ್ನುವುದೇ ಇಂದಿಗೂ ನಿಗೂಢವಾಗಿದೆ. ಕೊನೆಗೆ, ಆಡಳಿತದ ತಕ್ಕಡಿ ಸರಿಯಾಗಿ ತೂಗದೆ, ಏರುಪೇರಾದ ಪರಿಣಾಮವೇ ಅಧ್ಯಕ್ಷರ “ಅಕಾಲಿಕ ರಾಜೀನಾಮೆ” ಪ್ರಹಸನ ಎನ್ನುವುದು ಹಲವರ ಅಂಬೋಣ! ಆದರೆ ಈಗ ಅದೇ ತಕ್ಕಡಿಯನ್ನು ಅತ್ಯಂತ ಎಚ್ಚರಿಕೆಯಿಂದ ಸರಿಯಾಗಿ ತೂಗಲು ಶಾಸಕರಿಗೆ ಸಕ್ಕತ್ ಗೋಲ್ಡನ್ ಚಾನ್ಸ್ ಸಿಕ್ಕಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಪರೇಡ್ ನಡೆಸಿದ್ದು ಸುಮ್ಮನೆ.. “ಒಕ್ಕಲಿಗ” ಸೂತ್ರಕ್ಕೆ ಮನ್ನಣೆ!
ಹುದ್ದೆ ಖಾಲಿಯಿದೆಯೆಂದರೆ ಸುಮ್ಮನಿರುತ್ತಾರಾ? ಸಿದ್ದಾಪುರದಲ್ಲೂ ಶಾಸಕರ ಸಮುದಾಯದ ಆಕಾಂಕ್ಷಿಗಳು ಡಜನ್ಗಟ್ಟಲೆ ಬಂದು ಕ್ಯೂ ನಿಂತು ಪರೇಡ್ ನಡೆಸಿದ್ದಾರೆ. ಅವರಲ್ಲಿ ತಾ . ಪಂ.ಮಾಜಿ ಅಧ್ಯಕ್ಷ ಸಿ. ಆರ್. ನಾಯ್ಕ, ಜಿ. ಪಂ. ಮಾಜಿ ಸದ ಸ್ಯ ವಿ. ಎನ್. ನಾಯ್ಕ, ಹಾಲಿ ಬ್ಲಾಕ್ ಅಧ್ಯಕ್ಷ ವಸಂತ್ ನಾಯ್ಕ ಸೇರಿದ ಘಟಾನುಘಟಿಗಳ ದಂಡೇ ಇದೆ.
ಇದರ ಮಧ್ಯೆ ಈ ವರೆಗೆ ನಿರಂತರವಾಗಿ ಬ್ಲಾಕ್ ನಡೆಸಿದ್ದ ಕಾನುದೀವರಿಗೆ ಶಿರಸಿ ಕ್ಷೇತ್ರದ ತಾಲೂಕಾಧ್ಯಕ್ಷತೆಗಳಿಗೆ ಬ್ಲಾಕ್ ಎನ್ನುವ ಸುದ್ದಿ ಹಬ್ಬಿದೆ!!. ಸಿದ್ದಾಪುರದ ಮೂರನೇ ದೊಡ್ಡ ಸಮುದಾಯ ಶಿರಸಿ ಕ್ಷೇತ್ರದ ಎರಡನೇ ದೊಡ್ಡ ಮತ ಶಕ್ತಿ ಹೊಂದಿರುವ ಹವ್ಯಕರು ಕಾಂಗ್ರೆಸ್ ತಾಲೂಕಾ ಅಧ್ಯಕ್ಷತೆಗೆ ಆಕಾಂಕ್ಷಿ ಗಳಲ್ಲದಿರುವುದೂ ಸಿದ್ದಾಪುರದ ಮಟ್ಟಿಗೆ ವಿಶ್ವ ಸೋಜಿಗ! ಯಾಕೆಂದರೆ.. ಭೀಮಣ್ಣ ನಾಯ್ಕ ಶಾಸಕರಾದ ಮೇಲೆ ಲಾಭದ ಸಿಂಹ ಪಾಲು ಪಡೆದ ಹವ್ಯಕರು ಕಾಂಗ್ರೆಸ್ ನ ಮತದಾರರೇ ಅಲ್ಲ!!???
ಆದರೆ ಇಲ್ಲಿ ಲಾಬಿ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದೇ ಅಸಲಿ ಮಜಾ.
ಈಗ ಸ್ಥಳೀಯ ರಾಜಕೀಯದ ಪಡಸಾಲೆಯಲ್ಲಿ ಒಂದು ಹೊಸ ಲೆಕ್ಕಾಚಾರ ಜೋರಾಗಿ ಚಾಲ್ತಿಯಲ್ಲಿದೆ. ಹಿಂದೆ ಈಗಾಗಲೇ ನಾಯ್ಕರಿಗೆ ಒಂದು ಸುತ್ತು ಪ್ರಾತಿನಿಧ್ಯ ಸಿಕ್ಕಿಯಾಗಿರುವುದರಿಂದ, ಈ ಬಾರಿ ತಾಲೂಕಿನ ಎರಡನೇ ಅತಿ ದೊಡ್ಡ ಸಮುದಾಯವಾದ ‘ಒಕ್ಕಲಿಗ’ರಿಗೆ ಗದ್ದುಗೆ ಬಿಟ್ಟುಕೊಡುವುದು ಪಕ್ಷದ ಆರೋಗ್ಯಕ್ಕೂ, ಮುಂದಿನ ಲೆಕ್ಕಾಚಾರಕ್ಕೂ ಅತ್ಯಂತ ಲಾಭದಾಯಕ ಎಂಬ ಮಾತು ಕೇಳಿಬರುತ್ತಿದೆ.
ಶಾಸಕರ ಮಾಸ್ ಸ್ಟ್ರಾಟಜಿ: ಒಕ್ಕಲಿಗರ ಓಲೈಕೆ….ಹಳೆ ಕಹಿ ಅನುಭವಕ್ಕೂ ಆರೈಕೆ!
ಹಿಂದಿನ ದಿನಗಳಲ್ಲಿ ನಡೆದ ಆ ಹಳಸಿದ ಅನುಭವಗಳಿಂದ ಎಚ್ಚೆತ್ತಿರುವ ಶಾಸಕರು, ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳುವ ಮೂಡಿನಲ್ಲಿಲ್ಲ. ಹಿಂದೆ ಕೈತಪ್ಪಿದ ಹತೋಟಿಯನ್ನು ಮರಳಿ ಪಡೆಯಲು ಇದಕ್ಕಿಂತ ಸೂಕ್ತ ಸಮಯ ಮತ್ತೊಂದಿಲ್ಲ! ಶಾಸಕರ ಸುತ್ತ ಮುತ್ತ ತಿರುಗಾಡುವ ಅನೇಕ ಒಕ್ಕಲಿಗ ಗೌಡರ ನಾಯಕರಲ್ಲಿ ಶಾಸಕರ ಒಲವು ಸೀತಾರಾಮ ಗೌಡ ಎನ್ನಲಾಗುತ್ತಿದೆ.
ಒಕ್ಕಲಿಗ ಸಮುದಾಯಕ್ಕೆ ಬ್ಲಾಕ್ ಅಧ್ಯಕ್ಷ ಗಾದಿ ನೀಡುವುದರ ಮೂಲಕ, ಒಂದು ಕಡೆ ಪ್ರಾತಿನಿಧ್ಯ ನೀಡಿ ಆ ಸಮುದಾಯದವರನ್ನು ಪ್ರೀತಿಯಿಂದ ತಬ್ಬಿಕೊಳ್ಳಬಹುದು; ಇನ್ನೊಂದೆಡೆ, ಹಿಂದೆ ಕೈಮೀರಿ ನಡೆದವರ ಕಹಿ ನೆನಪುಗಳಿಗೆ ಶಾಶ್ವತ ಮುಕ್ತಿ ನೀಡಿ, ತಮಗೆ ವಿಧೇಯರಾಗಿ ಉಳಿಯುವವರನ್ನು ಆಯ್ಕೆ ಮಾಡಲು ಇದುವೇ ಸರಿಯಾದ ಟೈಮ್!
ಒಟ್ಟಿನಲ್ಲಿ, ಶಿರಸಿ ಬ್ಲಾಕ್ನಲ್ಲಿ ಬೆಂಕಿ ಹತ್ತಿಕೊಂಡು ಸಾಹೇಬರು ಬೇಯುತ್ತಿದ್ದರೆ, ಸಿದ್ದಾಪುರ ಬ್ಲಾಕ್ನಲ್ಲಿ ಮಾತ್ರ ಸಿಕ್ಕ ಅವಕಾಶವನ್ನು ಕ್ಯಾಶ್ ಮಾಡಿಕೊಳ್ಳಲು ಸಖತ್ ರಣತಂತ್ರ ರೂಪಿಸುತ್ತಿದ್ದಾರೆ. ಒಂದೇ ನಾಣ್ಯದ ಎರಡು ಮುಖಗಳಂತಿರುವ ಈ ಎರಡು ಬ್ಲಾಕ್ಗಳಲ್ಲಿ ಮುಂದಿನ ಅಧ್ಯಕ್ಷ ಗಾದಿಯ ಕಿರೀಟ ಯಾರಿಗೆ ಒಲಿಯಲಿದೆ ಎನ್ನುವುದು ಸಧ್ಯಕ್ಕೆ ಯಕ್ಷಪ್ರಶ್ನೆಯಾಗಿದೆ!
ಅತ್ತ ಬಿಜೆಪಿಯಲ್ಲಿ ಮಡಿವಾಳರನ್ನು ಸಿದ್ದಾಪುರ ಮಂಡಲ ಅಧ್ಯಕ್ಷರನ್ನಾಗಿಸಿರುವ ಕಾಗೇರಿತಂತ್ರ ಕೆಜಿನಾಯಕರನ್ನು ಪಕ್ಷದಿಂದಉಚ್ಚಾಟಿಸುವ ಹಂತಕ್ಕೆಮುಟ್ಟಿದೆಆದರೆ ಈ ಬಣದಲ್ಲಿಮೂರುಮತ್ತೊಂದು ಮುಖಂಡರುಬಿಟ್ಟರೆ ಉಳಿದವರನ್ನು ವಿರೋಧಿಪಾಳಯದಲ್ಲಿ ಹುಡುಕಬೇಕು! ಕೆಲವು ವರ್ಷಗಳಹಿಂದೆ ನಾಯ್ಕರೆ ಬಿಜೆಪಿ ಆಸ್ತಿ ಎಂದುಲಾಭಮಾಡಿಕೊಂಡ ಹೆಗಡೆಪಡೆ ಈಗ ಕೆ.ಜಿ.ನಾಯಕರ ವಿರೋಧಕಟ್ಟಿಕೊಂಡು ದೀವರನ್ನು ಎದುರುಹಾಕಿಕೊಂಡಿದೆ. ಕಾಂಗ್ರೆಸ್, ಬಿಜೆಪಿಗಳಲ್ಲಿ ಒಕ್ಕಲಿಗರು, ಮಡಿವಾಳರಓಲೈಕೆ ಶುರುವಾಗಿದ್ದರೆ ಶಿರಸಿ ಅಖಾಡದ ಗೆಲುವು ನಿರ್ಧರಿಸುವ ನಾಯಕರಿಗೆ ಚೊಂಬುಗ್ಯಾರಂಟೀ ಎನ್ನುವ ಸ್ಥಿತಿಇದೆ. ತಾಲೂಕಿನಲ್ಲಿಬಿಜೆಪಿ ಕಟ್ಟಿ ಸಮಾಜಕಟ್ಟಲುಹೊರಟ ಕೇಜಿನಾಯಕರಿಗೆ ಹಳೆದೋಸ್ತಿಗಳೇ ಶತ್ರುಗಳು ಈ ಮೇಲಾಟದಲ್ಲಿ ಅನ್ಯಾಯವಾಗುತ್ತಿರುವುದು ದೀವರಿಗೆ ಎನ್ನುವ ಸತ್ಯ ನಿಗಿನಿಗಿಯಾಗಿದ್ದರೂ ದೀವರಿಗೆ ಸಡನ್ ನಾಯಕರಾಗುವ ಧಾವಂತ ಈ ವಾತಾವರಣ ನಿಭಾಯಿಸಿ ಹೈರಾಣಾಗಿರುವ ಶಾಸಕರು ನಿಮ್ಮೊಲುಮೆ ನನಗಿರಲಿ ತಂದೆ ಎಂದು ಮಠ – ದೇವಾಲಯ ಎಡಕಾಡಿ ಹವ್ಯಕರನ್ನು ಓಲೈಸತೊಡಗಿದ್ದಾರೆ ಎನ್ನುವ ಗುರುತರ ಆರೋಪಗಳಿವೆ. ಒಂದೆಡೆ ನಾಯ್ಕ ರು, ಗೌಡರು, ಮಡಿವಾಳರು ಚಿಕ್ಕಪುಟ್ಟ ಸ್ಥಾನ – ಮಾನಗಳಿಗೆ ಹೆಣಗಾಡಿ ಸುಸ್ತಾಗಿ ಹತಾಶರಾಗಿದ್ದರೆ… ಮೇಲೆ ಕುಳಿತು ಗೊಂಬೆ ಆಡಿಸುತ್ತಿರುವ ಪಟ್ಟಭದ್ರರು ೩೦ ವರ್ಷಗಳ ನಮ್ಮವರಿಗಿಂತ ನಮ್ಮವರಿಗೆ ನೆಲೆ – ಬೆಲೆ ಕೊಡುತ್ತಿರುವ ಭೀಮಣ್ಣ ಬೆಸ್ಟು ಎನ್ನುತ್ತಿದ್ದಾರಂತೆ!
ಈ ವಿಚಾರ ಶಾಸಕರ ತಲೆ ತಿರುಗಿಸಿದರೆ ಬರಲಿರುವ ಚುನಾವಣೆಯಲ್ಲಿ ಮತ ಚೋರಿ ಪರಿವಾರ ಭೀಮಣ್ಣರಿಗೆ ಗದೆ ಕಸಿದುಕೊಂಡು ವಂಶಂಪಾಯನ ಸರೋವರಕ್ಕೆ ತಳ್ಳುವುದು ಪಕ್ಕಾ ಎನ್ನುವುದು ಅನಾಮಿಕನ ವಿಶ್ಲೇಷಣೆ.
ಶಾಸಕರು ಸಿದ್ದಾಪುರ ಬ್ಲಾಕಿಗೆ ಗೌಡರಿಗೆ ಮನ್ನಣೆ ನೀಡಿದರೆ ಶಿರಸಿ ಬ್ಲಾಕಿಗಾದರೂ ದೀವರನ್ನು ತರಬೇಕೆಂಬ ಬೇಡಿಕೆ ಬಲವಾಗಿದೆ. ಕಾಂಗ್ರೆಸ್ ನ ಸಾಲಿಡ್ ಮತದಾರರಾದ ದೀವರು ಜಿಲ್ಲೆಯ ಸಂಸದರು, ಕೆಲವು ಕ್ಷೇತ್ರಗಳ ಶಾಸಕರಾದರೂ ಗೊಂಬೆ ಆಡಿಸುವವರ ಸೂತ್ರಕ್ಕೆ ಕುಣಿಯುತ್ತಿರುವುದು ವಿಪರ್ಯಾಸ ಎನ್ನಲಾಗುತ್ತಿದೆ. ಇದರ ಹಿಂದೆ ಒಡೆದು ಆಳುವ ತಂತ್ರವೇ ಮಂತ್ರವಾಗಿರುವುದು ವಾಸ್ತವ.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________




