ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ)

ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ….

ಜಾತಿ ಲೆಕ್ಕಾಚಾರದ್ದೇ ಡ್ರಿಲ್, “ಶಾಸಕರ ಜಾತಿ”ಗೆ ಹೈಕಮಾಂಡ್ನಿಂದ ರೆಡ್ ಸಿಗ್ನಲ್!

ಕೋರ್ಟ್ನಲ್ಲಿ ವಕೀಲರ ವಾದ-ಪ್ರತಿವಾದ ಹೇಗೋ ಏನೋ, ಆದರೆ ಶಿರಸಿ ಕಾಂಗ್ರೆಸ್ನಲ್ಲಿ ಈಗ ಕೇವಲ ಒಂದೇ ಒಂದು ಅಜೆಂಡಾ—ಅದುವೇ ‘ಜಾತಿ ಲೆಕ್ಕಾಚಾರ’!
ಸದ್ಯದ ಮಾಹಿತಿಯ ಪ್ರಕಾರ, ಸ್ಥಳೀಯ ಶಾಸಕರ ಜಾತಿಯವರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಬ್ಲಾಕ್ ಅಧ್ಯಕ್ಷ ಗಾದಿ ಕೊಡಬಾರದು ಎಂಬ ‘ವೈರಲ್ ವದಂತಿ’ ಸಕತ್ ಸೌಂಡ್ ಮಾಡುತ್ತಿದೆ. ಅಂದರೆ, ಶಾಸಕರು ಯಾವ ಜಾತಿಗೆ ಸೇರಿದವರೋ, ಅದೇ ಜಾತಿಗೆ ಸೇರಿದ ಕಾರ್ಯಕರ್ತರಿಗೆ ಇಲ್ಲಿ “ನೋ ಎಂಟ್ರಿ” ಬೋರ್ಡ್ ತೂಗುಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದನ್ನು ಕೇಳಿದ ಸ್ಥಳೀಯರು, “ಅಂದ್ರೆ ನಾವೇನು ಪಾಪ ಮಾಡಿದ್ದೀವಿ? ನಾವು ಎಂಎಲ್ಎ ಸಾಹೇಬರ ಜಾತಿಯಲ್ಲಿ ಹುಟ್ಟಿದ್ದಕ್ಕೆ ನಮಗೆ ಅಧ್ಯಕ್ಷರಾಗೋ ಅರ್ಹತೆ ಇಲ್ವಾ?” ಎಂದು ಹತಾಶೆಯಿಂದ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ!

ವೀಕ್ಷಕರ ಎದುರು ನಾಟಕೀಯ ಪೆರೇಡ್: ಪ್ಲೇ ಆಗೋದು ಬೇರೆಯದೇ ಕಾರ್ಡ್..!

ಇನ್ನು ಪಕ್ಷದ ವೀಕ್ಷಕರು ಶಿರಸಿಗೆ ಬಂದಾಗ ನಡೆದ ಆ “ಪರೇಡ್” ಅಥವಾ ಅಭಿಪ್ರಾಯ ಸಂಗ್ರಹಣೆ ಕೇವಲ ಕಣ್ಣೊರೆಸುವ ತಂತ್ರವಷ್ಟೇ ಎಂಬುದು ಈಗ ಜಗಜ್ಜಾಹೀರಾಗಿದೆ. ವೀಕ್ಷಕರ ಮುಂದೆ ಕಾರ್ಯಕರ್ತರು ಸಿಂಹದಂತೆ ಗರ್ಜಿಸಿ, ನಾವೇ ಅರ್ಹರು ಎಂದು ಅರ್ಜಿ ಸಲ್ಲಿಸಿದ್ದು ಕೇವಲ ಸಂಪ್ರದಾಯಕ್ಕಷ್ಟೇ! ಆದರೆ ಕೊನೆಗೆ ಗದ್ದುಗೆ ಸಿಗುವುದು ಮಾತ್ರ, ಯೋಗ್ಯತೆಗೋ ಅಥವಾ ಲಾಬಿಗೋ ಅಥವಾ ಕೇವಲ ಜಾತಿ ಸೂತ್ರಕ್ಕೋ? ಎಂಬುದೇ ಯಕ್ಷಪ್ರಶ್ನೆ. ವೀಕ್ಷಕರು ಡೈರಿಯಲ್ಲಿ ಏನೇ ಬರೆದುಕೊಂಡಿರಲಿ, ಅಂತಿಮ ಮುದ್ರೆ ಮಾತ್ರ ಮೇಲೆ ಕುಂತ ‘ದೊಡ್ಡವರ’ ಕೃಪಾಕಟಾಕ್ಷದ ಮೇಲೆಯೇ ನಿಂತಿದೆ.

ಶಾಸಕರ ಅಸಹಾಯಕತೆ ಮತ್ತು ಆಪ್ತವಲಯದ “ಭಯಂಕರ ಅಸಮಾಧಾನ”

ಜಾತಿಯ ಕಾರಣಕ್ಕೆ ಸ್ಥಳೀಯವಾಗಿ ಹುದ್ದೆ ನಿಷೇಧವಾಗುತ್ತಿದ್ದಂತೆ, ನಮ್ಮ ಎಂಎಲ್ಎ ಸಾಹೇಬರ ಮುಖದಲ್ಲಿ ನಗು ಮಾಯವಾಗಿ ಅಸಹಾಯಕತೆ ತಾಂಡವವಾಡುತ್ತಿದೆ. ಸಾಹೇಬರ ಆಪ್ತವಲಯದಲ್ಲಂತೂ ಈಗ “ಭಯಂಕರ ಅಸಮಾಧಾನ” ದ ಕಿಚ್ಚು ಹೊತ್ತಿಕೊಂಡಿದೆ.

ಸಾಹೇಬರ ಜೊತೆ ನಿಂತು ಜೈಕಾರ ಹಾಕಿದವರಿಗೆ ಕೊನೆಗೆ ಸಿಕ್ಕ ಬಹುಮಾನವೇನು ಗೊತ್ತಾ? ಚಪ್ಪಾಳೆ ಹೊಡೆಯುವ ಬರಿಗೈ ಮಾತ್ರ! “ನಾವು ಹಗಲಿರುಳು ಕಷ್ಟಪಟ್ಟು, ಸಾಹೇಬರ ಹಿಂದೆ ಅಲೆಯುವುದು, ಚಪ್ಪಾಳೆ ತಟ್ಟುವುದು, ಬಿಲ್ಡಪ್ ಕೊಡುವುದು… ಕೊನೆಗೆ ಬೇರೆ ಯಾರೋ ಬಂದು ಖುರ್ಚಿಗೆ ಟವೆಲ್ ಹಾಕುವುದು?” ಎಂದು ಆಪ್ತರು ಒಳಗೊಳಗೇ ಕುದಿಯುತ್ತಿದ್ದಾರೆ. ಸಾಹೇಬರ ಮೌನವೇ ಈಗ ಆಪ್ತರ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ.

ಸಿಎಂ ಆಪ್ತರ ನಿಗೂಢ ನಡೆ ಮತ್ತು ಎಂ.ಎನ್. ನಾಯ್ಕರ “ಗೂಳಿ ತನ”

ಮತ್ತೊಂದೆಡೆ, ಸಿಎಂ ಆಪ್ತರೆಂದು ಹೇಳಿಕೊಳ್ಳುವ ಸ್ಥಳೀಯ ನಾಯಕರ ನಡೆ ಮಾತ್ರ ಯಾರಿಗೂ ಅರ್ಥವಾಗದ ಹಾಗಿದೆ. ತೆರೆಮರೆಯಲ್ಲಿ ನಿಂತು ಎಲ್ಲಾ ಕಾಯಿಗಳನ್ನು ಅಚ್ಚುಕಟ್ಟಾಗಿ ಉರುಳಿಸುತ್ತಿರುವ ಇವರ ನಿಗೂಢ ಮೌನ, ಶಿರಸಿಯ ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸಿದೆ.

ಆದರೆ ಇದಕ್ಕೆಲ್ಲಾ ಜಗ್ಗುತ್ತಾರ ವಕೀಲರಾದ ಎಮ್.ಎನ್. ನಾಯ್ಕ್ (ಎಮ್ಮೆನ್)? ಖಂಡಿತ ಇಲ್ಲ! ಎಂದಿನಂತೆ ತಮ್ಮದೇ ಆದ ‘ಸೆಟೆದು ನಿಲ್ಲುವ ಗೂಳಿ ತನ’ ಮತ್ತು ನೇರ ಮಾತಿನ ಮೂಲಕವೇ ಸತ್ಯವನ್ನೇ ಮುಖಕ್ಕೆ ಹೊಡೆದಂತೆ ಮಾತನಾಡಲು ಹೊರಟಿದ್ದಾರೆ. ಆದರೆ, ರಾಜಕೀಯದಲ್ಲಿ ಈ ನೇರ ಮಾತು ಮತ್ತು ದಿಢೀರ್ ಗುಮ್ಮುವ ಚಾಳಿಯೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ ಎಂದು ಹಿತೈಷಿಗಳು ಈಗಲೇ ಗುಪ್ತವಾಗಿ ಎಚ್ಚರಿಸುತ್ತಿದ್ದಾರೆ!

” ರಾಜಕೀಯದಲ್ಲಿ ಗುಮ್ಮುವವರಿಗೆ ಯಾವತ್ತೂ ಇಲ್ಲ ನೆಲೆ..!
ಸುಮ್ಮನಿದ್ದು ಸಾವರಿಕೊಂಡವರಿಗೆ ಮಾತ್ರ ಇದೆ ಇಲ್ಲಿ ಬೆಲೆ!”

ಮುಂದಿನ ಲೆಕ್ಕಾಚಾರ ನಿಗೂಢ: ಬೆಂಕಿ ನಾಯ್ಕರ ಅಗ್ನಿಪರೀಕ್ಷೆ!

ಒಟ್ಟಿನಲ್ಲಿ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕಥೆ ಈಗ ಕ್ಲೈಮ್ಯಾಕ್ಸ್ ತಲುಪಿದೆ. ಜಾತಿಯ ಗೋಡೆ, ಲಾಬಿಯ ಜಾಲ, ಸಿಎಂ ಆಪ್ತರ ನಿಗೂಢ ಗೇಮ್ಪ್ಲಾನ್ ನಡುವೆ ಎಮ್.ಎನ್. ನಾಯ್ಕರು ತಮ್ಮ ‘ಬೆಂಕಿ’ಯಂತಹ ಹೋರಾಟವನ್ನು ಮುಂದುವರಿಸುತ್ತಾರೋ ಅಥವಾ ಈ ರಾಜಕೀಯ ರಣರಂಗದಲ್ಲಿ ತಾವೇ ಅಗ್ನಿಪರೀಕ್ಷೆಗೆ ಸಿಲುಕಿ ಬೇಯುತ್ತಾರೋ?

ಮುಂದಿನ ನಿಗೂಢ ಲೆಕ್ಕಾಚಾರಗಳು ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ!

— ಹೆಚ್ಚಿನ ವರದಿಗಳು ಮುಂದಿನ ಸಂಚಿಕೆಯಲ್ಲಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ...

ಕಾಳಗದಲ್ಲಿ “ಅಧ್ಯಕ್ಷ ಗಾದಿ”,.. ಲಾಭಿಯೇ ಮುಂದಿನ ಹಾದಿ..!??

Sirsi block congress issue….( ಓದುಗರ ವಿಶ್ಲೇಷಣೆ) ಶಿರಸಿ ಬ್ಲಾಕ್ ಕಾಂಗ್ರೆಸ್ ರಾಜಕೀಯ ಕಣದಲ್ಲಿ ಈಗ ಸಖತ್ ಟೆನ್ಷನ್! ಪರೇಡ್ ಮುಗಿಸಿದ ಬೆನ್ನಲ್ಲೇ, ಈಗ...

ಒಂದು ಪತ್ರ.. ಒಡೆದಾಳುವವರ ದಾಳವಾಗಬೇಡಿ ನಾಮಧಾರಿಗಳೆ…

ಮಾನ್ಯರೆ… ನಮಸ್ಕಾರಗಳು… ಕೆಲವು ದಿವಸಗಳಿಂದ ನಿಮಗೊಂದು ಪತ್ರ ಬರೆಯಬೇಕೆಂದುಕೊಂಡು ಯೋಚಿಸುತ್ತಾ ಈ ಬರಹ ಬರೆಯುತ್ತಿದ್ದೇನೆ. Samaajamukhi youtube channel, samajamukhi.net News ಮೂಲಕ ನೀವು...

ಓಣಿಕೇರಿ ಮಾಸ್ತ್ಯ ರಾಮ ನಾಯ್ಕ ನಿಧನ

ಸಿದ್ದಾಪುರ, ತಾಲೂಕಿನ ಕಿಲಾರ ಓಣಿಕೇರಿಯ ಹಿರಿಯ ಸಾಮಾಜಿಕ ಕಾರ್ಯಕರ್ತ ಮಾಸ್ತ್ಯಾ ರಾಮ ನಾಯ್ಕ ಮಂಗಳವಾರ ನಿಧನರಾದರು. ಮೂವರು ಗಂಡುಮಕ್ಕಳು ಸೇರಿ ಅಪಾರ ಬಂಧು ಬಳಗ...

ಯಾರಾಗ್ತಾರೆ…ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ?

ಉತ್ತರಕನ್ನಡಜಿಲ್ಲೆಯ೧೩ ಬ್ಲಾಕ್ಕಾಂಗ್ರೆಸ್ ಗಳ ವೇಟ್ ಒಂದಾದರೆ ಸಿದ್ದಾಪುರದ ತಾಲೂಕಾ ಕಾಂಗ್ರೆಸ್ ಬಲವೇ ಬೇರೆ . ಒಂದು ಕಾಲದಲ್ಲಿ ಬಂಗಾರಪ್ಪ ಒಲುವಿನಿಂದ ಇಡೀ ಜಿಲ್ಲೆ ಸಿದ್ದಾಪುರವನ್ನು...

Latest Posts

“ಒಂದೇ ಕಲ್ಲಿಗೆ ಎರಡು ಹಕ್ಕಿ, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಕ್ಕಾಬಿಕ್ಕಿ!”

ವಿಶ್ಲೇಷಣೆ….. (- ಅನಾಮಿಕ) ​ಶಿರಸಿ ಮತ್ತು ಸಿದ್ದಾಪುರ, ಎರಡು ಕಣ್ಣುಗಳಿದ್ದಂತೆ, ಆದರೆ ಈ ಎರಡೂ ಕಣ್ಣುಗಳಿಗೆ ಒಂದೇ ಜೋಡಿ ಕನ್ನಡಕ! ಹೌದು, ಎರಡೂ ಕ್ಷೇತ್ರಗಳಿಗೆ ಒಬ್ಬರೇ ಶಾಸಕರು’. ಆದರೆ ಹೈಕಮಾಂಡ್ ಸೂತ್ರ ಮಾತ್ರ ಅತ್ತ ಶಿರಸಿಯಲ್ಲಿ ಬೆಂಕಿ ಹಚ್ಚಿದರೆ, ಇತ್ತ ಸಿದ್ದಾಪುರದಲ್ಲಿ ಅದೇ ಸೂತ್ರ ಸಾಹೇಬರಿಗೆ ಬಾಯಿಗೆ ಜಾರಿ ಬಿದ್ದ ತುಪ್ಪದಂತಾಗಿದೆ! ಬನ್ನಿ.. ಸಿದ್ದಾಪುರ...

Recommended For You

About the Author: Kanneshwar Naik

Leave a Reply

Your email address will not be published. Required fields are marked *