
ಬಕ್ಕೆಮನೆ ಚಿಂತನೆ-
ನಮಗೆ ಅನಗತ್ಯವಾದ ಅನಿಲಗಳನ್ನು (ಅದು ಕಾರ್ಬನ್ ಡೈಆಕ್ಸೈಡ್ ಇರಲಿ, ನೈಟ್ರಸ್ ಆಕ್ಸೈಡ್ ಇರಲಿ ಅಥವಾ ಓಝೋನ್ ಪದರವನ್ನು ನಾಶ ಮಾಡಬಲ್ಲ ಕ್ಲೊರೊ-ಫ್ಲೊರೊ-ಕಾರ್ಬನ್ ಇರಲಿ)
ನಾವು ನಿಶ್ಚಿಂತೆಯಿಂದ ವಾಯುಮಂಡಲಕ್ಕೆ ಬಿಸಾಕುತ್ತಿರುವುದೇ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಅವು ನಮ್ಮ ಕಣ್ಣಿಗೆ ನೇರ ಕಾಣುತ್ತಿಲ್ಲ. ಹಾಗೂ ನಮ್ಮೆದುರು ಹೆಚ್ಚು ಕಾಲ ನಿಲ್ಲದೆಯೇ ವಾತಾವರಣದ ಮೇಲ್ಪದರಕ್ಕೆ ಸೋರಿ ಹೋಗುತ್ತದೆಂಬ ಕಾರಣದಿಂದ ನಾವು ಅವುಗಳನ್ನು ಉಪೇಕ್ಷೆ ಮಾಡುತ್ತ ಬಂದಿದ್ದೇವೆ. ವಾಯುಮಂಡಲವಷ್ಟೇ ಅಲ್ಲ, ನಮಗೆ ತೀರ ಹತ್ತಿರವಾದ, ಶಿಲಾಮಂಡಲ, ಜಲಮಂಡಲ ಹಾಗೂ ಜೀವಮಂಡಲವೂ ತ್ಯಾಜ್ಯ ವಸ್ತುಗಳ ಅವೈಜ್ಞಾನಿಕ ವಿಲೇವಾರಿಯಿಂದ ದೂಷಿತವಾಗುತ್ತಿವೆ. -ನಾಗೇಶ್ ಹೆಗಡೆ, ಬಕ್ಕೆಮನೆ.
