
ಹುಚ್ಚ
ಹುಚ್ಚನಿಗೆ ಕಫ್ರ್ಯೂ ಹೇಗೆ ಅನ್ವಯಿಸೀತು?
ಅವನು ನಡುರಸ್ತೆಯಲ್ಲೇ ವಿಹಾರ ಹೊರಟ. ಬೆಳಿಗ್ಗೆ ಬೆಳಿಗ್ಗೆಯೇ ಗಬ್ಬುನಾರುವ ಹುಚ್ಚನ ಸಹವಾಸವಾಯಿತಲ್ಲಾ ಎಂದು ಪೊಲೀಸರು ಗೊಣಗಿಕೊಂಡರು.
“ಏ ಹುಚ್ಚ, ದೂರ ಹೊರಟ್ಹೋಗು, ಅವರು ನಿನ್ನ ಕೈಕಾಲು ಮುರಿದ್ರೆ ಏನು ಮಾಡ್ತಿ?” “ಆ ಹುಚ್ರು ನಂಗೆನು ಮಾಡ್ತಾರೆ?
”ಪೊಲೀಸರ ಕಡೆಗೊಂದು ಕೀಟಲೆಯ ಮುಗುಳ್ನಗೆ ಎಸೆದು ಹುಚ್ಚ ಹಾಡುತ್ತಾ ಸಾಗಿದ.
“ಯಾರು….ಏನು ಮಾಡುವರು, ನನಗೇನು ಕೇಡು ಮಾಡುವರು…..?
ಮರುದಿನ!!!!
(ಬಿ ನೆಗೆಟಿವ್ ನಿಂದ)
