ಕಾಯ್ಕಿಣಿ ಜಲಕ್ -02

ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ.
ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು.
ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ.
ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ ಮಾತುಕತೆ, ಉಭಯ ಕುಶಲೋಪರಿಗಳ ಪರಿವೆಯೇ ಇಲ್ಲದೆ ಮ(ಮು)ಗುಮ್ಮಾ
ಗಿದ್ದರಂತೆ!
ಆಮೇಲೆ ತಿಳಿದ ಸತ್ಯವೇನೆಂದರೆ, ಆ ಮದುವೆಯ ಜೋಡಿ ಫೇಸ್‍ಬುಕ್ ಮೂಲಕ ಬುಕ್ ಆಗಿದ್ದಂತೆ! ಅಲ್ಲಿ ಸೇರಿರುವ ಬಹುತೇಕರೆಲ್ಲ ಫೇಸ್‍ಬುಕ್ ಸ್ನೇಹಿತರಂತೆ!
ಆಧುನಿಕ ಇಂಟರ್‍ನೆಟ್,ಫೇಸ್‍ಬುಕ್‍ಗಳೆಲ್ಲಾ ಸಂವೇದನೆರಹಿತ ಸ್ನೇಹ ಸಂಬಂಧಗಳನ್ನು ಸೃಷ್ಟಿಸುತ್ತಿವೆ ಎನ್ನುವುದು ಅವರ ಮಾತು !
ಅಂದಹಾಗೆ ಅವರು ಈಗಲೂಫೇಸ್ ಬುಕ್‍ನಲ್ಲಿಲ್ಲ.
ಎಲ್ಲರ ಮನೆ ದೋಸೆನೂ ತೂತೆ!
ಬಹಳಷ್ಟು ಪಾಲಕರು ತೊಂದರೆ, ಸಮಸ್ಯೆ ತಾಪತ್ರಯಗಳಲ್ಲೇ ಇರುತ್ತಾರೆ. ಆದರೆ ಅವರು ತಮ್ಮ ತೊಂದರೆ ಸಮಸ್ಯೆಗಳನ್ನು ಮಕ್ಕಳ ಎದುರಿಗೆ ತೋರಿಸಿಕೊಂಡರೆ ‘ಮಗುಮನಸು’ ಘಾಶಿಯಾಗುತ್ತದೆ. ವಿಶೇಷವೆಂದರೆ, ನನಗೆ ನನ್ನ 20-25ನೇ ವಯಸ್ಸಿನವರೆಗೂ ನಮ್ಮ ಮನೆಯಲ್ಲೂ ತೊಂದರೆ-ತಾಪತ್ರಯಗಳು ಇರಲೇ ಇಲ್ಲ ಎಂದುಕೊಂಡಿದ್ದೆ.
ಆ ನಂತರ ನನಗಾದ ದಿವ್ಯಾನುಭವವೇನೆಂದರೆ, ನಾವು ಚಿಕ್ಕವರಿರುವಾಗ ನಮ್ಮ ತಂದೆ ತಾಯಿ ಎಂದೂ ನಮ್ಮೆದುರು ಜಗಳವಾಡಿದ್ದೇ ಇಲ್ಲ. ಮಕ್ಕಳೆದುರು ನಮ್ಮ ಅಸಮಾಧಾನ, ಅತೃಪ್ತಿ, ರಾಗದ್ವೇಷಗಳನ್ನುತೋರಿಸಿಕೊಳ್ಳಬಾರದು ಎನ್ನುವ ವಿವೇಕ ನಮ್ಮ ಪಾಲಕರಿಗಿತ್ತು. ಹಾಗಾಗಿ ನಮಗೆ ಈ ಎಲ್ಲರ ಮನೆಯ ಸಮಸ್ಯೆ ನಮ್ಮನೆಯಲ್ಲೂ ಇರಹುದೆಂಬ ಅನುಮಾನವೂ ಇರಲಿಲ್ಲ. (ಎಂದರು)
ಲೋಕದ ಜಂಜಡಗಳನ್ನು ಸಣ್ಣ ವಯಸ್ಸಿನ ಮಕ್ಕಳ ಮೇಲೆ ಹೇರಬಾರದು ಎನ್ನುವ ಸಲಹೆ ಅವರದ್ದು.
ನಿಷ್ಠೂರತೆ
ಲೋಕದ ದೋಷಗಳನ್ನು ಬರೆಯುವವರು ಮಾತಿನಲ್ಲಿ ಖಂಡಿಸುವವರು ಅತಿವಿರಳ. ಜಯಂತ್ ಕಾಯ್ಕಿಣಿ ಕೂಡಾ ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ.
ಆದರೆ 2009 ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಿತು ನೋಡಿ, ಆ ಚುನಾವಣೆ ಮುನ್ನ ಉತ್ತರಕನ್ನಡ ಬಿ.ಜೆ.ಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ತನ್ನ ಲಾಗಾಯ್ತಿನ ಕೊಳಕು ರಾಜಕಾರಣದ ಹೇಳಿಕೆಯಾದ ‘ನನಗೆ ಮುಸ್ಲಿಂರ ಮತಗಳು ಬೇಡ’ ಎಂಬ ವಿವೇಕ ಶೂನ್ಯನ ಕೃತ್ಯವನ್ನು ಮತ್ತೆ ಬಹಿರಂಗವಾಗಿ ಹೇಳಿ ಮುಗ್ದರು, ಮೂರ್ಖರು ಆದ ಜನಸಾಮಾನ್ಯರ ಮತಕಬಳಿಸುವ ರಾಜಕಾರಣ ಮಾಡಿದ್ದರು!
ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಅದನ್ನು ನೇರವಾಗಿ ಖಂಡಿಸಿದ ಜಯಂತ್, ಅನಂತಕುಮಾರರ ಈ ವಿಭಜಕ ಹೇಳಿಕೆ ಬಾಲಿಷವಷ್ಟೇ ಅಲ್ಲ ಅಸಹ್ಯ ಕೂಡಾ, ಯಾವ ರಾಜಕಾರಣಿ ಯಾರ ಮತವನ್ನೂ ಕೇಳಬಹುದು , ಆದರೆ ಒಂದು ಸಮುದಾಯದ ಮತ ನನಗೆ ಬೇಡ ಎನ್ನುವ ಹಿಂದೆ ದಾಷ್ಟ್ಯ, ಪ್ಯಾಸಿಸಮ್ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ನಮಗೆ ವಿಭಜಕ ರಾಜಕಾರಣ, ವಿಭಜಕ ರಾಜಕೀಯ ಬೇಡ ನಮಗೀಗ ಬೇಕಾಗಿರುವುದು ಬಂಧುತ್ವವೇ ಹೊರತು ಹಿಂದುತ್ವವಲ್ಲ ನಮಗಿಂದು ಮಮತೆ, ಸಮತೆಗಳು ಬೇಕಾಗಿವೆ. ರಾಜಕಾರಣಿಗಳು ನಮ್ಮ ಸಹಿಷ್ಣುತೆಯನ್ನು ಹಾಳುಮಾಡಬಾರದು ಎಂದು ಖಡಾಖಂಡಿತವಾಗಿ ಅನಂತಕುಮಾರರಹೇಳಿಕೆ,ವರ್ತನೆಯನ್ನು ಖಂಡಿಸಿದ್ದ(ರಂತೆ)ರು.
‘ರಾಜಕಾರಣಿಗಳಿಗೆ ಅಧಿಕಾರವಿರುತ್ತದೆ ಆದರೆ ಕನಸುಗಳಿರುವುದಿಲ್ಲ ಕವಿ, ಸಾಹಿತಿಗಳಿಗೆ ಕನಸುಗಳಿರುತ್ತವೆ ಆದರೆ ಅಧಿಕಾರವಿರುವುದಿಲ್ಲ’ಇದು ಡಾ.ಸರಜೂ ಕಾಟ್ಕರ್ ಹೇಳಿಕೆ. ಇಂಥದ್ಧೇ ಅಭಿಪ್ರಾಯದ ನಯವಾದ ಹೇಳಿಕೆಗಳನ್ನು ಅನೇಕ ಬಾರಿಜಯಂತ್ ನೀಡಿದ್ದಾರೆ. ಈ ವರ್ಷದ 18 ನೇ ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಕೋಲಾದಲ್ಲಿ ನಡೆದಿದ್ದಾಗ ಸಮಾರೋಪ ಸಮಾರಂಭಕ್ಕೆ ಸಚಿವಆರ್.ವಿ.ದೇಶಪಾಂಡೆ ಸರಿಯಾದ ಸಮಯಕ್ಕೆ ಬಂದಿದ್ದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತುರದಿಂದ ಸಭೆ ಮುಗಿಯುವ ಮೊದಲೇನಿರ್ಗಮಿಸಿದರು. ಸಚಿವರೊಂದಿಗೆ ಅವರೊಂದಿಗಿನ ಪಟಾಲಂ ಜಾಗಖಾಲಿ ಮಾಡಿತು. ಈ ಮಹಾ ನಿರ್ಗಮನದ ನಂತರ ಜಯಂತ್ ನಿರಾಳರಾದಂತೆ ಕಂಡರು. ದೇಶಪಾಂಡೆಯವರು ಅವರ ಪಟಾಲಂನ ವರ್ತನೆಯನ್ನು ಜಯಂತ್ ಅಭಿಮಾನಿ ಸಾಹಿತ್ಯಾಸಕ್ತರು ವಿರೋಧಿಸಿದರು.
ಆದರೆ ಜಯಂತ್ ಚುಟುಕಾಗಿ ದೇಶಪಾಂಡೆಯವರೂ ಕೊನೆಯವರೆಗೆ ಕುಳಿತಿದ್ದರೆ ಚೆನ್ನಾಗಿರುತ್ತಿತ್ತೇನೊ….. ಎನ್ನುವಂತೆ ಮಾತನಾಡಿದರು. ಆದರೆ ತಮ್ಮ ಮಾತನ್ನೂ ದೇಶಪಾಂಡೆ ಕೇಳಲೇಬೇಕೆಂಬ ಹಕ್ಕೊತ್ತಾಯ ಮಾಡಲಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *