

ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್‍ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.
ಇದರ ನಿರ್ವಹಣೆ ಆ ಉದ್ಯಾವನದ ಉತ್ಫನ್ನದಲ್ಲೇ ನಡೆಯಬೇಕು ಎಂಬುದು ಸರ್ಕಾರದ ನೀತಿ-ನಿಯಮ.
ಆದರೆ ಈಗ ಈ ಉದ್ಯಾನವನದ ವೃಕ್ಷ ಸಂಕುಲ ಫಲ ನೀಡುವಷ್ಟು ಬೆಳೆದಿಲ್ಲ, ಪ್ರವಾಸಿಗರು, ಭೇಟಿ ನೀಡುವವರಿಗೆ ಪ್ರವೇಶ ಶುಲ್ಕ ಹಾಕಿದರೆ ಈಗ ಬರುವವರೂ ಬರಲಾರರೇನೋ ಎನ್ನುವ ಅನುಮಾನ ಅರಣ್ಯ ಇಲಾಖೆಗೆ. ಹಾಗಾಗಿ ಪಟ್ಟಣದ ಸಮೀಪ, ಜೋಗ ರಸ್ತೆಗೂ ಹತ್ತಿರ, ಜನಸಂಪರ್ಕದ ಕುಮಟಾ ರಸ್ತೆಗೆ ತಾಕಿಕೊಂಡಿದ್ದರೂ ಈ ಟ್ರೀಪಾರ್ಕ್ ಬಗ್ಗೆ ಜನರಿಗೆ ತಿಳಿದಿಲ್ಲ.
ಕೃತಕ ಕೆರೆಗಳು, ಕೃತಕ ಉದ್ಯಾನ ಜೊತೆಗೆ ನೂರಾರು ಜಾತಿಯ ಸಸ್ಯ ವೈವಿಧ್ಯ ಈ ಟ್ರೀಪಾರ್ಕ್ ನ ವಿಶೇಶ.
ಟ್ರೀಪಾರ್ಕ್ ಕಲ್ಫನೆಯಂತೆ ಅದನ್ನು ಅಭಿವೃದ್ಧಿಪಡಿಸಲು ಈಗ ಸಕಾಲ.

