ಇಲ್ಲಿವೆ ಪಶ್ಚಿಮಘಟ್ಟದ ನೂರಾರು ಪ್ರಭೇದ

ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ.
ಒಂದು ಕೋಟಿಗಿಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟ್ರೀಪಾರ್ಕ್ ಅಭಿವೃದ್ಧಿಯಿಂದ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ರಾಕ್‍ಗಾರ್ಡನ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಈ ಉದ್ಯಾನವನ ಉದ್ಧಾರವಾದರೆ ಚಂದ್ರಗುತ್ತಿ,ಜೋಗ ಕ್ಕೆ ಬರುವ ಪ್ರವಾಸಿಗರಿಗೆ ವಿಶ್ರಾಂತಿ, ವಿಹಾರದ ತಾಣವಾಗಿಯೂ ಅನುಕೂಲವಾಗುತ್ತದೆ.
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ.
ಉದ್ಯಾನವನ, ಬಿದಿರಿನ ಪ್ಲಾಂಟೇಶನ್ ಸೇರಿ 75 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಟ್ರೀಪಾರ್ಕ್‍ನಲ್ಲಿ ನೂರಕ್ಕೂ ಹೆಚ್ಚು ಸಸ್ಯವೈವಿಧ್ಯವಿದೆ.
ಅವಸರದ ಕಾಲದಲ್ಲಿ ನಿರ್ಮಾಣವಾದ ಈ ಟ್ರೀಪಾರ್ಕ್ ಮಕ್ಕಳಿಗೆ ಆಟಕ್ಕೆ, ಹಿರಿಯರಿಗೆ ವಿಹಾರಕ್ಕೆ ಅನುಕೂಲವಾಗುತ್ತಿದೆ.
ಈ ವಿಶಿಷ್ಟ ವೃಕ್ಷ ಉದ್ಯಾನವನ್ನು ನಿರ್ಮಾಣ ಮಾಡಿ 10 ವರ್ಷ ಕಳೆದರೂ ಈ ಉದ್ಯಾನವನದ ಬಗ್ಗೆ ಪ್ರಚಾರವಿಲ್ಲ. ಉತ್ತಮ ಉದ್ದೇಶದಿಂದ ಅರಣ್ಯ ಇಲಾಖೆ ಪ್ರಾರಂಭಿಸಿದ ಈ ಉದ್ಯಾನವನ ಸ್ಥಳಿಯ ವಿಶೇಶದಂತೆ ನಿರ್ಮಾಣವಾಗಿದೆ.
ಇದರ ನಿರ್ವಹಣೆ ಆ ಉದ್ಯಾವನದ ಉತ್ಫನ್ನದಲ್ಲೇ ನಡೆಯಬೇಕು ಎಂಬುದು ಸರ್ಕಾರದ ನೀತಿ-ನಿಯಮ.
ಆದರೆ ಈಗ ಈ ಉದ್ಯಾನವನದ ವೃಕ್ಷ ಸಂಕುಲ ಫಲ ನೀಡುವಷ್ಟು ಬೆಳೆದಿಲ್ಲ, ಪ್ರವಾಸಿಗರು, ಭೇಟಿ ನೀಡುವವರಿಗೆ ಪ್ರವೇಶ ಶುಲ್ಕ ಹಾಕಿದರೆ ಈಗ ಬರುವವರೂ ಬರಲಾರರೇನೋ ಎನ್ನುವ ಅನುಮಾನ ಅರಣ್ಯ ಇಲಾಖೆಗೆ. ಹಾಗಾಗಿ ಪಟ್ಟಣದ ಸಮೀಪ, ಜೋಗ ರಸ್ತೆಗೂ ಹತ್ತಿರ, ಜನಸಂಪರ್ಕದ ಕುಮಟಾ ರಸ್ತೆಗೆ ತಾಕಿಕೊಂಡಿದ್ದರೂ ಈ ಟ್ರೀಪಾರ್ಕ್ ಬಗ್ಗೆ ಜನರಿಗೆ ತಿಳಿದಿಲ್ಲ.
ಕೃತಕ ಕೆರೆಗಳು, ಕೃತಕ ಉದ್ಯಾನ ಜೊತೆಗೆ ನೂರಾರು ಜಾತಿಯ ಸಸ್ಯ ವೈವಿಧ್ಯ ಈ ಟ್ರೀಪಾರ್ಕ್ ನ ವಿಶೇಶ.
ಟ್ರೀಪಾರ್ಕ್ ಕಲ್ಫನೆಯಂತೆ ಅದನ್ನು ಅಭಿವೃದ್ಧಿಪಡಿಸಲು ಈಗ ಸಕಾಲ.
ಈ ಬಗ್ಗೆ ಸರ್ಕಾರಕ್ಕೆ ಹೊಸ ಪ್ರಸ್ತಾಪ ಒಂದನ್ನು ಕಳುಹಿಸುತ್ತೇವೆ. ಇಲಾಖೆ,ಸರ್ಕಾರದ ನಿರ್ದೇಶನ,ನಿಯಮದಂತೆ ಅದನ್ನು ಅಭಿವೃದ್ಧಿಪಡಿಸಿ ಪ್ರಚಾರ ನೀಡಿದರೆ ಅನುಕೂಲ.

  • ಅಬ್ದುಲ್‍ಅಜೀಜ್,
    -ಉಪ ಅರಣ್ಯ ಸಂರಕ್ಷಣಾಧಿಕಾರಿ
    ಸಿದ್ಧಾಪುರ ಒಂದು ಮಿನಿ ಇಂಡಿಯಾ. ಇಲ್ಲಿ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಾಜಕಾರಣಿಗಳೆಲ್ಲಾ ಆಗಿ ಹೋಗಿದ್ದಾರೆ.
    ಇತಿಹಾಸ, ಚರಿತ್ರೆ ಇಲ್ಲಿಯ ವೈಶಿಷ್ಟ್ಯ, ಜೀವವೈವಿಧ್ಯಗಳ ಒಟ್ಟಂದದ ಒಕ್ಕೂಟ ಆದರೆ ಹೊರಗಿನವರೊಂದಿಗೆ ಒಳಗಿನವರಿಗೆ ನಮ್ಮ ವಿಶೇಶ, ಅನನ್ಯತೆ, ಅಸ್ಮಿತೆಗಳನ್ನು ಪರಿಚಯಿಸಬಹುದು. ಇಲ್ಲಿಯ ಮುಂದಾಳುಗಳು ಇವೆಲ್ಲವನ್ನೂ ಒಂದೇ ಆವರಣದಲ್ಲಿ ತರುವ ಐತಿಹಾಸಿಕ ಮಹತ್ವದ ಕೆಲಸ ಮಾಡಬೇಕಿದೆ. ಅದಕ್ಕೆ ಸಾರ್ವಜನಿಕ ಸಹಕಾರವೂ ದೊರೆಯಬೇಕಿದೆ.
    -ಸುಬ್ರಾಯ ಮತ್ತೀಹಳ್ಳಿ, ಸಾಹಿತಿಗಳು

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *