ಎಲ್ಲೆಲ್ಲೂ ಶರಾವತಿ!

ನೀರು ಮತ್ತು ಅಭಯಾರಣ್ಯ ಎಲ್ಲೆಲ್ಲೂ ಶರಾವತಿ
ಮಲೆನಾಡು ಮತ್ತು ಕರಾವಳಿಯ ಜೀವಜಲದ ಕೊಂಡಿಯಾದ ಶರಾವತಿ ಈಗ ಎಲ್ಲೆಡೆ ಚರ್ಚೆಯ ವಿಷಯ.
ಶಿವಮೊಗ್ಗ ಅರಣ್ಯ ವೃತ್ತದ ಶರಾವತಿ ಅರಣ್ಯಕ್ಕೆ ಶರಾವತಿ ಅಭಯಾರಣ್ಯ ಎಂದು ಹೆಸರು. ಈ ಅಭಯಾರಣ್ಯದ ವ್ಯಾಪ್ತಿ ಮೊದಲು ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿತ್ತು. ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿದ್ದ ಉತ್ತರ ಕನ್ನಡದ ನಾಗವಲ್ಲಿ ಸೇರಿದಂತೆ ಅನೇಕ ದಟ್ಟಾರಣ್ಯ ಪ್ರದೇಶ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ಸೇರಿರಲಿಲ್ಲ.
ಇದೇ ಗಡಿಯ ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶ ಅಭಯಾರಣ್ಯಕ್ಕೆ ಸೇರಿದ ವ್ಯಾಪ್ತಿಯ ಅರಲಗೋಡಿನಲ್ಲೇ ಎರಡು ಡಜನ್ ಜನ ಮಂಗನಕಾಯಿಲೆಗೆ ತುತ್ತಾಗಿದ್ದು. ಇದೇ ಪ್ರದೇಶಕ್ಕೆ ಹೊಂದಿಕೊಂಡ ಸಿದ್ಧಾಪುರ ತಾಲೂಕಿನ ಕೆಲವೆಡೆ ಜನ ಪ್ರಾಣಿಗಳಿಗಿಂತ ಕೀಳಾಗಿ ಹುಳುಗಳಂತೆ ಸತ್ತಿದ್ದಾರೆ.
ಆಗ ಕೂಡಾ ಸರ್ಕಾರ, ಶರಾವತಿ ಅಭಯಾರಣ್ಯ, ರಾಜ್ಯ ವನ್ಯಜೀವಿಮಂಡಳಿ ಚಕಾರ ಎತ್ತಲಿಲ್ಲ.
ಯಾಕೆಂದರೆ, ಸರ್ಕಾರ ಮತ್ತು ಅಭಯಾರಣ್ಯ, ವನ್ಯಜೀವಿ ಕಾನೂನುಗಳು ವನ್ಯಮೃಗ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತವೆಯೆ ಹೊರತು ಅಲ್ಲಿನ ಮನುಷ್ಯರ ಬಗ್ಗೆಯಲ್ಲ.
ಈ ಅನುಭವಗಳಿಂದ ಪಾಠಕಲಿತಿರುವ ಉತ್ತರ ಕನ್ನಡದ ಜನತೆ ತಮ್ಮ ಕೆನರಾ ಅರಣ್ಯ ವೃತ್ತದ 30 ಸಾವಿರ ಹೆಕ್ಟೆರ್ ಅರಣ್ಯ ಪ್ರದೇಶವನ್ನು ಅನಾಮತ್ತಾಗಿ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ತರುವುದು ಬೇಡ ಎನ್ನುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 60 ರಷ್ಟು ಅರಣ್ಯ, 70% ಅರಣ್ಯಭೂಮಿ ಇದೆ. ಈ ಅರಣ್ಯ ಭೂಮಿಯನ್ನು ಜಿಲ್ಲೆಯ ಜನರಿಗೆ ಸಾಗುವಳಿಗೆ ಕೊಡಿ ಎಂದು 1980 ರ ದಶಕಕ್ಕಿಂತ ಮೊದಲಿನಿಂದಲೂ ಡಾ.ದಿನಕರ ದೇಸಾಯಿ ನೇತೃತ್ವ, ಕಾಲದಿಂದಲೂ ಹಕ್ಕೊತ್ತಾಯದ ಬೇಡಿಕೆ ಜೀವಂತವಾಗಿದೆ.
ಆದರೆ, ಆಳುವ ದೊರೆಗಳಿಗೆ ಪ್ರಭುತ್ವಕ್ಕೆ ಅದು ಕೇಳುತ್ತಿಲ್ಲ.
ಈಗ ಈ ಅರಣ್ಯಭೂಮಿಯನ್ನೇ ಶರಾವತಿ ಅಭಯಾರಣ್ಯಕ್ಕೆ ನೀಡಿ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿಸಿ ಎಂದು ಅಧಿಕಾರಿಗಳು ಶರಾ ಬರೆದು ಬಿಟ್ಟಿದ್ದಾರೆ.
ಈ ಬೆಳವಣಿಗೆ ಈಗಿನ ಲೋಕಸಭೆ ಚುನಾವಣೆ ಸಮಯದಲ್ಲಿ ನಡೆದು ಈಗ ಆದೇಶವೂ ಆಗಿದೆ. ಇದರ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಲಾಗಾಯ್ತಿನ ಅರಣ್ಯವಾಸಿಗಳಾದ ನಮ್ಮ ಕಾಡನ್ನು ಅಭಯಾರಣ್ಯ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟು ನಾವು ನಾಡು ಸೇರಲು ಸಾಧ್ಯವಿಲ್ಲ. ಎಂದಿದ್ದಾರೆ.
ವಿಚಿತ್ರವೆಂದರೆ, ಈ ಬಗ್ಗೆ ಶಿರಸಿ ಶಾಸಕರು, ಉತ್ತರ ಕನ್ನಡ ಸಂಸದರು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತುಟಿಪಿಟಿಕ್ಕೆಂದಿಲ್ಲ. ಕ್ಷೇತ್ರದ ಜನತೆ ಬವಣೆಯಲ್ಲಿದ್ದರೆ ಈ ಜನಪ್ರತಿನಿಧಿಗಳು ಪಿಟೀಲು ಬಾರಿಸುತ್ತಿರುವಂತೆ ಭಾಸವಾದರೆ ಅದಕ್ಕೆ ಹೊಣೆ ಈ ಜನಪ್ರತಿನಿಧಿಗಳನ್ನು ಆಯ್ಕೆಮಾಡಿದ ಮತದಾರಲ್ಲವೆ?.
ಶರಾವತಿ ನೀರು-
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನವಸತಿ ಸೇರಿದ ಅರಣ್ಯ ಪ್ರದೇಶವನ್ನು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನ ಮಾಡಲು ಸರ್ಕಾರ ಮುಂದಾಗಿದ್ದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿಯ ನೀರನ್ನು ಬೆಂಗಳೂರಿಗೆ ಸಾಗಿಸುವ ಹೊಸ ಯೋಜನೆಗೆ ಸರ್ಕಾರ ಮುಂದಾಗಿದೆ. ಸಾಗರದಿಂದ ಶರಾವತಿ ನೀರನ್ನು ಬೆಂಗಳೂರಿಗೆ ನೀಡುವ ಯೋಜನೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿದೆ.
ನಾ.ಡಿಸೋಜಾ, ಪ್ರಸನ್ನ, ಚಾರ್ವಾಕ ರಾಘವೇಂದ್ರ, ಹರ್ಷಕುಗ್ವೆ ಸೇರಿದ ತಂಡ ಶನಿವಾರ ಸಾಗರದಲ್ಲಿ ಮತ್ತು ಸೋಮವಾರ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆ ಕರೆದು ಸಮಾಲೋಚನೆ ಮಾಡಿ ಜುಲೈನಲ್ಲಿ ಶಿವಮೊಗ್ಗ ಬಂದ್‍ಗೂ ಕರೆ ನೀಡಿದೆ.
ಬೆಂಗಳೂರು ಸೇರಿದ ಇಡೀ ರಾಜ್ಯ, ದೇಶ, ಜಗತ್ತಿಗೇ ನೀರು ಬೇಕು. ಆದರೆ, ಸಹಜ ಜೀವವೈವಿಧ್ಯ, ಪ್ರಾಕೃತಿಕ ಅನುಕೂಲಕ್ಕೆ ಸೆಡ್ಡು ಹೊಡೆದು ಬೃಹತ್ ಯೋಜನೆಗಳ ಮೂಲಕ ಜನ, ಪರಿಸರಕ್ಕೆ ತೊಂದರೆ ಮಾಡುವ ಬದಲು ಮಳೆ ಕೊಯ್ಲು, ಲವಣಯುಕ್ತ ನೀರಿನ ಶುದ್ಧೀಕರಣಗಳ ಮೂಲಕ ಈ ಅಗತ್ಯ ಪೂರೈಸಿಕೊಳ್ಳಬಹುದಲ್ಲವೆ? ಎನ್ನುವ ಸಲಹೆ ವ್ಯಕ್ತವಾಗಿದೆ.
ಉತ್ತರ ಕನ್ನಡ ಶಿವಮೊಗ್ಗಗಳಲ್ಲಿ ಅಲ್ಲಿಯ ನೀರು, ಪರಿಸರವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಅನಾವೃಷ್ಟಿ, ಅತಿವೃಷ್ಟಿಗಳೆಲ್ಲಾ ಆಗುತ್ತಿವೆ. ಈ ನೀರು ಕನಿಷ್ಟ ಉತ್ತರ ಕನ್ನಡ ಶಿವಮೊಗ್ಗಗಳಲ್ಲಿ ಸದ್ಬಳಕೆ ಯಾದರೆ ಈ ಜಿಲ್ಲೆಗಳ ಬವಣೆ ನೀಗುತ್ತದೆ.
ಆದರೆ ಸರ್ಕಾರ ಈ ಜಿಲ್ಲೆಗಳು ಇಲ್ಲಿಯ ಜೀವವೈವಿಧ್ಯಗಳ ಮಹತ್ವ ಪರಿಗಣಿಸದೆ ಶರಾವತಿ, ವರದಾ, ಕಾಳಿ ನದಿಗಳ ನೀರಿನ ಸದ್ಬಳಕೆಯಿಂದ ಈ ಜಿಲ್ಲೆಗಳ ಜನಜೀವನ ಸುಧಾರಿಸದೆ, ಬೆಂಗಳೂರಿನ ಜನರ ನೀರಿಗಾಗಿ ಇಲ್ಲಿಯ ಜನರ ನಾಳೆಗಳಿಗೆ ಕಂಟಕವಾಗುತ್ತಿದೆ.
ಈ ಹಿನ್ನೆಲೆಗಳಲ್ಲಿ ಸಾರ್ವಜನಿಕರ ಹೋರಾಟ, ಪ್ರತಿಭಟನೆಗಳು ಎರಡೂ ಜಿಲ್ಲೆಗಳಲ್ಲಿ ನಡೆದಿವೆ. ಈ ಹೋರಾಟಕ್ಕೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಜನಪ್ರತಿನಿಧಿಗಳು ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಉತ್ತರ ಕನ್ನಡದ ಪ್ರಮುಖ ರಾಜಕಾರಣಿಗಳು, ಜನಪ್ರತಿನಿಧಿಗಳು ನಿದ್ದೆಹೋದಂತಿದ್ದಾರೆ. ಎರಡು ಜಿಲ್ಲೆಗಳ ಲಕ್ಷಾಂತರ ಜನ ಹೋರಾಟ, ಪ್ರತಿಭಟನೆ ಎನ್ನುತಿದ್ದರೆ, ಕೆಲವು ರಾಜಕಾರಣಿಗಳು ಏನೂ ಆಗಿಲ್ಲದಂತಿರುವುದು ಏನು ಸೂಚಿಸುತ್ತಿದೆ?

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *