ನೀವ್ ಹಬ್ಬ ಜಾತ್ರೆಮಾಡಿ ಹಾಳಾಗಬಡ್ರಿ…. -ಕಟ್ಟೆಪಂಚತ್ಕೆ

ಮೋಹನಣ್ಣ ಒಂಥರಾ ಮಾತಾಡ್ದಅಂದ್ರಪ….
ಟಾರಿಪ್ಪಿ ಉಪೇಂದ್ರನ ಶೈಲಿಯಲ್ಲಿ ಉಪ್ಪಿಟ್ಟು ಸ್ಟೈಲ್ ಮಾಡಿಕೊಂಡು
ಬರತೊಡಗಿದ್ದ.
ಆಗ ಎದುರುನಿಂದ ಬಂದ ಟೀಲಪ್ಪ, ಟಾರಿಪ್ಪಣ ಮನ್ನೆ ಸಿದ್ಧಾಪುರದಗೆ ನಮ್ ಕಾರ್ಯಕ್ರಮ ಇತ್ತಂತಲ ಹೋಗಿದನ, ಅಂದ.
ಹೋಗಿದ್ದೆ..,ಅಂದ್ರೆ ನಾಂವ್ ಹೊರಗ್ಯನರು, ನಿಮ್ಮ ಮಾದೇವಣ್ಣ ಅವ್ರ ಸಂಘಟ್ನೆ ಮೆಂಬರು, ಅಂವ ಹೋಗಿದ ನೋಡು ಅಂದ,ಟಾರಿಪ್ಪಿ.
ಅಷ್ಟೊತ್ತಿಗೆ ಬೈಕನಲ್ಲಿ ಬಂದಿಳಿದ ಮಾದೇವಣ್ಣ ಏ…,ಟಾರಿಪ್ಪಿ.., ನಿಮ್ದೆಂತದ ಬಿದ್ಮರುದ್ ಕಾರ್ಯಕ್ರಮ… ನಮ್ ಜಾತಿ ಫಕ್ಸನ್‍ಗೆ ಬರ್ರ.. ಅಂದ್ರೆ.. ನೀವ್ ಸಾಹಿತ್ಯ,ಪಾಹಿತ್ಯ ಅಂತ ಆ ಬದಿಗೆ ಹೋಗಿರಲ ಅಂದ.
ಹೌದ, ಮಾದೇವಣ್ಣ ನೀವು ಸರ್ಕಾರಿ ನೌಕರರಾಗೇ ಜಾತಿ-ಪಾತಿ ಅಂತ ಸಂಘಟ್ನೆ, ಸಮಾವೇಸ ಅಂತ ಮಾಡ್ತುರಿ, ನಾವ್ ಹಂಗಲ್ಲಪ.. ನೇರಾನೇರ ನಮ್ಮ್ ಡಿಸೋಜಾ ಬಂದರಂದ್ರೆ ನಾವ್ ಎಲ್ಲಿದ್ರೂ ಅಲ್ಲಿ ಹೋಗಿ ಬಿಡ್ತುವು, ಹಂಗೇ ಬಿದ್ದಮರ ಕಾರ್ಯಕ್ರಮ ಇತ್ತು ಡಿಸೋಜಾ ಸರು,ಬೇವಿನಗಿಡುದ್ ಸರ್ರು ಬಂದಿರು, ಆ ಬಿದ್ರಕಾನ ಹುಡ್ರು ಎಷ್ಟ್ ಸುಪ್ಪರ್ ಹಾಡದ್ರು ಗೊತ್ತಾ?
ಏನೇ ಆಗ್ಲಿ ಆ ತಮ್ಮಣ್ಣಸರು ಹುಡ್ರುನ ಚಲೋ ಬೆಳಸ್ಯರೋ ಅಂದ. ಅಷ್ಟೊತ್ತಿಗೆ ಕಟ್ಟೆಚರ್ಚೆಗೆ ಸೇರಿಕೊಂಡ ಪರಮೇಶಿ ‘ಮಾದೇವಣ್ಣ ಏನ್ರೋ ನೂರ್ ಜನರಿಗೆ ಇದು ಮಾಡಿರಲ್ಲೋ ಅಂದ.ಹೌದ, ಪರಮೇಶಿ, ನೀನು ನಿನ್ ಸಾಂವಕಾರುನ ಹಂಗೆ ನಿಮ್ನಿಮ್‍ದೇ ಮಾಡ್ಕಿನದಲ್ಲ. ನಾವು ನಮ್ ಜಾತಿ ಅಂತ ಮಾಡ್ಕಿಬೇಕಲ ಕಡಿಗೆ ನಿಮ್ ಬೀಮಣ್ಣ ಎಷ್ಟ್ ಕೊಟ್ಟನೆ ಅಂತ ಕೇಳಿದನ? ಎಂದು ಪ್ರಶ್ನಿಸಿದರು.
ಏ. ಒಂದ್ ನಲವತ್‍ಸಾವ್ರ ಕೊಟ್ಟನಂತೆ, ಏನಂತ ತಿಳ್ಕುಂದುರಿ ನಮ್ಮ ಭೀಮಣ್ಣುನ, ಆ ಹೊಸಳ್ಳಿ ಹುಡ್ಗಿಗೂ ಪಾರಿನ್ನಿಗೆ ಹೋಗಬಕರೆ ಹೇಳು ಅಂದನಂತೆ. ಹಂಗೆ, ಅನಿವಾರ್ಯ ಆದಾಗ ನಮ್ ಭೀಮಣ್ಣರು ಐದನೆ. ಗೊತ್ತಾತಲ ಈಗ, ಎಂದು ಪರಮೇಶಿ ಭೀಮಣ್ಣನ ಬಗ್ಗೆ ಪರಮ ಅಭಿಮಾನ ಪ್ರದರ್ಶಿಸಿದ.
ಹಾಗೇ ಮುಂದುವರಿದು, ಟಾರಿಪ್ಪಣ ನಮ್ ಮೋಹನಣ್ಣುನು ಚಲೋ ಮಾತಾಡ್ದನಂತಲ್ಲ ಅಂದ. ಹೌದ ಪರಮೇಶಿ ಮೊನ್ನೆ ನಿಮ್ ಭೀಮಣ್ಣ,ಮೋಹನಣ್ಣುಂದೇ ವಿಸೇಸ. ಭೀಮಣ್ಣ ಬರೀ ಓದದು,ನೌಕರಿ ಮಾಡದು ದುಡ್ ಮಾಡಬಿಟ್ರೆ ಸಾಲದಿಲ್ಲ, ಸಮಾಜುಕ್ಕು ಏನರು ಮಾಡ್ಬಕು ಸೇವೆ ಅಂದರೆ.
ಹಿಂದೆ ಹೆಂಗಿತ್ತು ನಮ್ ಸಮಾಜ, ಬಂಗಾರಪ್ಪಾಜಿ,ಕಾಗೋಡು, ಜಾಲಪ್ಪ ಪೂಜಾರಿ ಎಲ್ಲಾ ಸೇರಿ ಕಟ್ಟಿದ ಸಮಾಜದಗೆ ಈಗ ಒಂಥರಾ ಹರದು-ಹಂಚಿ ಹೋದಂಗಾಗೈತಿ ಹಿಂಗಾಗಬರ್ದು ಅಂದರೆ.
ಮೋಹನಣ್ಣ,, ನೀವು ಒಟ್ಟೂ ಓದ್ತುರಿ ಮುಂದೆ-ಹಿಂದೆ ಎಂತದೂ ಗೊತ್ತಿಲ್ಲ 95-98 ಪರ್ಸಂಟೈಸ್ ಎನೋ ಮಾಡಿರಿ ಅದು ಸಾಧ್ನೆನೆ,ಆದರೆ ಮುಂದೇನು? ಯಾರಿಗೂ ಗೊತ್ತಿಲ್ಲ. ಹಂಗಗಿ ಸರಿ ಪ್ಲ್ಯಾನ್ ಮಾಡ್ಕಿಂದು ಓದ್ಬಕು. ಭಿಕ್ಷಕರಿಗೆ ಬ್ಯಾರೆ ದಾರಿಇಲ್ಲ ಅನ್ನಹಂಗೆ ಆದ್ರೆ ನಿಮ್ ಪರ್ಸಂಟೈಸಿಂದ ಎಂಥದೂ ಆಗದಿಲ್ಲ ಎಂದ, ಎನ್ನುತಿದ್ದಂತೇ ಮಾತುಪ್ರಾರಂಭಿಸಿದ ಪರಮೇಶಿ,
ಅಂವ ಅದೆಂಥಕೆ ಹಂಗೆ ಮಾತಾಡ್‍ದ್ಯ ಎಂದು ಪ್ರಶ್ನಿಸಿದ. ಅದಕ್ಕೆ ಉತ್ತರಿಸುವಂತೆ ಪ್ರತಿಕ್ರೀಯಿಸಿದ ಟಾರಿಪ್ಪಿ, ಏ..ಯ್, ಪರಮೇಶಿ,ಟೀಲು ನಿಮಗೆಂತದೂ ಅರ್ಥ ಆಗದಿಲ್ರ ಮರಯ, ಅದ್ಕೇ ಕಾರ್ಯಕ್ರಮುಕ್ಕೆ ಬರ್ರೀ ಅನ್ನದು, ಆ ಫಕ್ಸನ್ನಗೆ ನಮ್ ಎಂ.ಕೆ.ಸರ್ರು, ಇವರೆಲ್ಲಾ ಮಾತಾಡಿದ್‍ಮ್ಯಾಲೆ ಇವರು ಹಿಂಗಿಂಗೇ ಹೇಳದ್ರು ಅಂತ ಹೇಳರು ನಿಮಗೆ ನಿಮ್ಮ ಕೆಲ್ಸನೇ ಮುಗಿಯದಿಲ್ಲ ಅವೆಲ್ಲಾ ಹೆಂಗೆ ಅರ್ಥ ಆಕವೆ. ಹಿಂದೊಂದ್ಸರಿ ನಮ್ ಬಮಗಾರ್ಯಪ್ಪಸೈಬ್ರೂ ‘ ನೀವ್ ಹಬ್ಬ ಜಾತ್ರೆಮಾಡಿ ಹಾಳಾಗಬಡ್ರಿ…. ಹೆಂಡ-ಪಂಡ. ಕುರಿ-ಕೋಳಿ ಕಡ್ದು ಹಬ್ಬುಕಂತ ಕರ್ಚ್‍ಮಾಡಬದ್ಲು ಮಕ್ಳ ಶಿಕ್ಷಣ,ಓದದ್ಕೆ ಕರ್ಚ್‍ಮಾಡ್ಬಕು ಅಂದಿರು,
ಆಗ್ಲೂ ನೀವು ಅವ್ರು ಮಾತ್ರ ಹಬ್ಬಮಾಡದ್ರೂ ಅಡ್ಡಿಲ್ಲ, ಕುರಿಕೋಳಿ ಜಾತ್ರೆಮಾಡದ್ರೂ ನಡಿತೈತಿ ,ನಮಗೆ ಮಾತ್ರ ಮಾಡ್ಬಡ್ರಿ ಅಂತರೆ ಅಂದಿರಿ. ಈಗಲೂ ಹಂಗೇ ನಮ್ ಮೋಹನಣ್ಣ ನಮ್ ಜನ್ರ ಬಗ್ಗೆ ಕಾಳ್ಜಿಇಂದ್ಲೆ, ನಮ್‍ಕ್ಕಿಂತ ಹಿಂದ್ ಇರ ಬಡಜನ್ರುನ ನೋಡ್ಬಕು, ಬರೀ ಪರ್ಸ್‍ಂಟೈಸ್ ಮಾಡದು, ನಾವ್ ನೌಕ್ರು ಸೇರ್‍ಕ್ಕಿಂದು ನಮನಮ್ದಷ್ಟೆ ನೋಡ್ಕಿಂದ್ರೆ ಸರಿಅಲ್ಲ. ಏನ್ ಓದದ್ರೆ, ಮುಂದೆ ಏನ್ ಆಕೈತಿ, ಈಗ ಓದಿದ್ರಮ್ಯಲೆ ಮುಂದೆ ಎಂಥದ್ ಓದಿದ್ರೆ ಓಳ್ಳೆದು ಅಂತ ತಿಳದರತ್ರ ಕೇಳಿ-ಹೇಳಿ ಮಾಡಿ ಮಾಡ್ಬಕು.
ಓದಿ-ಓದಿಬಡವಾದ ಕೂಚಭಟ್ಟ ಅನ್ನಹಂಗೆ ಆಗ್‍ಬಾರ್ದು. ನೀವ್ ಪರ್ಸಂಟೈಸ್ ಮಾಡ್ದ್ಯರರು ಜವಾಬ್ಧಾರಿ ಇಂದ ಓದಿ ಏನರು ಮಾಡ್ಬಕು ನೀವು ಸರಿಯಾಗಿ ಓದಿ-ಮಾಡಿ ಭವಿಷ್ಯ ಕಂಡ್ಕುನಿಲ್ಲ ಅಂದ್ರೆ ಉಳದರ ಕತೆ ಹೆಂಗೆ ಅಂತ ಕಾಳಜಿ ಮಾತ್ನೆ ಆಡದ್ರು ಎಂದು ಟಾರಿಪ್ಪಿ ಸಮರ್ಥಿಸಿದ.
ಹಂಗಂದನೆ ಟಾರಿಪ್ಪಣ… ಮತ್ತೆ ಅಂವ ಒಂಥರಾ ಮಾತಾಡ್ಯದ ಅಂದ್ರಪ ಎಂದು ರಾಗ ಎಳೆದ ಪರಮೇಶಿ.
ಏ..ಯ್ ಹುಡ್ರಾ.. ನೀವು ಯಾವಾಗ್ಲೂ ಹಂಗೇ ನಮ್ ಬಂಗಾರ್ಯಪ್ಪ ಒಂದ್ ಹೇಳದ್ರೆ ಅದ್ನ ನೀವ್ ಅರ್ಥ ಮಾಡ್ಕಿನದೆ ಬ್ಯಾರೆತರ, ಹಂಗೇ ನಮ್ ಮೋಹನಣ್ಣ ತನ್ ಮಗುನ್ ಸುದ್ದಿನೂ ಹೇಳಿ, ಬರಿ ಓದದು,ಪಸಟೈಸ್ ಮಾಡದು ಅಷ್ಟೇಅಲ್ಲ. ಈಗ ಮೊದಲಿನಂಗಿಲ್ಲ ಸೌಲ್ಫ ಕಷ್ಟನೇಐತಿ. ಹೇಳಿ-ಕೇಳಿ ಮಾಡಿ ಓದಬಕು ಅಂದನೆ. ಅದೆಲ್ಲಾ ನಿಮ್ಗೆ ಅರ್ಥಾಗಿರೆ ನೀವು ಹಿಂಗಿರ್ತುರೈತನ ಎಂದು ಉಗಿದ.
ಮಾದೇವಣ್ಣ- ಟಾರಿಪ್ಪಿಯ ಈ ಮಾತುಗಳ ತಲೆ-ಬುಡ ಅರಿಯದ ಛೇರ್‍ಮನ್ ರಾಣೆ, ಟೀಲಪ,್ಪ ಟಾರಿಪ್ಪಿ, ಮಾದೇವಣ್ಣನ ಕೈ-ಬಾಯ್ ನೋಡಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜಾಗೃತೆ ವಾಹನ ಓಡಾಟ ಹೆಚ್ಚಿದೆ, ಮಂಗಗಳು ಸಾಯುತ್ತಿವೆ! ಸಾ. ಸಮ್ಮೇಳನ ಮುಗಿದು ಹೋದ ಮೇಲೆ……

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ- ಸಂಸ್ಕೃತಿ ಅಭಿವೃದ್ಧಿ ಬಗ್ಗೆ ಕ್ಷಕಿರಣ ಬೀರುವ ಉತ್ತರ ಕನ್ನಡ ಜಿಲ್ಲೆಯ ೨೪ ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ....

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *