#ಹೆಣ್ಣು ನೀ.. ತವರು ಮನೆಯಲ್ಲಿ ಹೆಣ್ಣಾಗಿ ಬೆಳೆದು ನನ್ನ ಮನೆಗೆ ಕಣ್ಣಾಗಿ ಬಂದವಳು ನೀ..!! ಅತ್ತೆ ಮಾವಂಗೆ ಸೊಸೆಯಾಗಿ ಭಾವನಿಗೆ ನಾಧಿನಿಯಾಗಿ ನಾಧಿನಿ ಮೈಧುನನಿಗೆ ಅತ್ತಿಗೆಯಾಗಿ ವಾರಗಿತ್ತಿಯರೊಂದಿಗೆ ಬೆರೆತು,ಕಲೆತು ಸಾಗುತ್ತಿರುವವಳು ನೀ..!! ತಾ ಸುಟ್ಟರೂ ಹತ್ತಿ ಉರಿಯುವ ಜ್ಯೋತಿಯಾಗಿ ಬತ್ತಿ ಪರರ ಬಾಳಿಗೆ ಬೆಳಕಾಗುವ ಹಣತೆಯಂತೆ ನೀ..!! ಮನದಲ್ಲಿ ನೋವಿದ್ದರೂ ಮೊಗದಲ್ಲಿ ನಗುಚೆಲ್ಲಿ ಪತಿಯೇ ಪ್ರತ್ಯಕ್ಷ ದೈವವೆಂಬಂತೆ ಪೂಜಿಸಿ , ಪ್ರೇಮಿಸುವ ಹೆಣ್ಣು ನೀ..!! ತವರಿನ ಸಿರಿಯ ನೆನಸಿ ನನ್ನ ಕುಡಿಯ ನಿನ್ನೊಡಲಲ್ಲಿರಿಸಿ ಗರ್ಭದ ತೊಟ್ಟಿಲೊಳಗೆ ತೂಗಿಸಿ, ಆಡಿಸಿ, ಸಂತೈಸಿ ನವಮಾಸದಿ ಹೊತ್ತು, ಹೆತ್ತು ನನ್ನ ಕೈಯಲ್ಲಿತ್ತು ನೋವಿನೊಂದಿಗೆ ನಗೆಯ ಬಿರುವವಳು ನೀ..!! ಒಂಬತ್ತು ತಿಂಗಳು ನಿನ್ನ ಉದರದಲ್ಲಿಟ್ಟು ನೀ ಹೊರುವ ಭಾರವ ನಾ… ಹೊರಲಾರೆ ಆದರೆ ನಿನ್ನೊಂದಿಗೆ ನಾ… ಕೈ ಜೋಡಿಸುವೆ ಹೆರುವಾಗ ನೀ ಸಹಿಸುವ ನೋವಾ ನಾ…ಭರಿಸಲಾರೆ ಆದರೆ ನಿನ್ನ ಸೇವೆಯ ನಾ…ಮಾಡುವೆ… ಹೂವಿನೊಂದಿಗೆ ನಾರು ಸ್ವರ್ಗವ ಸೇರಿದಂಗೆ ನಿನ್ನೊಟ್ಟಿಗೆ ನನಗೂ ಒಂದಿಷ್ಟು ಪುಣ್ಯ ಲಭಿಸಲಿ ಅವಕಾಶವ ನೀಡು ನೀ… ನನ್ನ ಕುಡಿಗೆ ನಾ ಸೇವೆ ಮಾಡಲು..!! .ರೇಖಾ.ಡಿ. |