

ಇಂದು ಅವರಗುಪ್ಪಾ, ನಾಳೆ ಕೋಲಶಿರ್ಸಿಯಲ್ಲಿ ಆರಿದ್ರಮಳೆ ಬಿಂಗಿ
ಚಾಂಗಲೋ ಹೋಯ್…. ಎಂದು
ಕುಮಾರ ರಾಮನ ಆರಾಧಿಸುವ ಜನತೆ
ಮಲೆನಾಡಿನ ಬಹುತೇಕ ಭಾಗಗಳಲ್ಲಿ ಆಚರಿಸುವ ಆರಿದ್ರಮಳೆ ಹಬ್ಬ ಎನ್ನುವ ಮಳೆಉತ್ಸವ ಈಗ ಎಲ್ಲೆಡೆ ನಡೆಯುತ್ತಿದೆ.
ಮಲೆನಾಡಿನಲ್ಲೇ ಮೊದಲು ಆರಿದ್ರಮಳೆ ಪ್ರಾರಂಭವಾಗುವ ಮೊದಲೇ ಸಿದ್ಧಾಪುರದ (ಉ.ಕ.) ಮನ್ಮನೆಯಿಂದ ಪ್ರಾರಂಭವಾಗುವ ಕೃಷಿಕರ ಉತ್ಸವ ಆರಿದ್ರಮಳೆ ಹಬ್ಬ ಪ್ರತಿಗ್ರಾಮದಲ್ಲಿ 2-3 ದಿವಸ 15-20 ದಿವಸಗಳ ಕಾಲ ಆಚರಿಸಲಾಗುತ್ತದೆ.
ಹಿಂದೆ ಶ್ರಮಿಕರು ಸೈನ್ಯದಿಂದ ವಿಶ್ರಾಂತಿ, ಕೃಷಿ ಕೆಲಸಕ್ಕೆ ಬಂದು ತಮ್ಮ ಪರಾಕ್ರಮಿ, ತ್ಯಾಗಜೀವಿ ಕುಮಾರರಾಮನನ್ನು ಆರಾಧಿಸಿ,ಖುಷಿಗಾಗಿ ಹಬ್ಬ ಮಾಡಿ ವಿಶ್ರಾಂತಿ ಮತ್ತು ಕೃಷಿ ಕೆಲಸಮಾಡುವ ಮೋಜಿಗಾಗಿ ಆಚರಿಸಲು ಪ್ರಾರಂಭವಾದ ಈ ಉತ್ಸವ ನೂರಾರು ವರ್ಷಗಳಿಂದ ಕೆಲವೇ ಬದಲಾವಣೆಗಳಿಗೂ ಒಡ್ಡಿಕೊಂಡು ಆಚರಿಸಲ್ಪಡುತ್ತಿದೆ.
ಶಿರಸಿ, ಸಿದ್ಧಾಪುರ ಸೇರಿದಂತೆ ಮಲೆನಾಡಿನ ಬಹುತೇಕ ಪ್ರದೇಶಗಳಲ್ಲಿ ಶ್ರಮಜೀವಿಗಳು ಪ್ರತಿವರ್ಷ ಆಚರಿಸುವ ಹಬ್ಬ ಈ ವರ್ಷವೂ ಆಚರಣೆಯ ಕೊನೆಯ ಹಂತದಲ್ಲಿದೆ.
ಬಹುತೇಕ ಒಂದೇ ರೀತಿ ತುಸು ಮಾರ್ಪಾಡುಗಳು, ರೀತಿ-ರಿವಾಜುಗಳೊಂದಿಗೆ ಸಿದ್ಧಾಪುರದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ನವವಧುವರರು, ಹೊರ ಊರುಗಳಲ್ಲಿದ್ದವರು ಗ್ರಾಮಕ್ಕೆ ಬಂದು ಆಚರಿಸುವ ಈ ಆರಿದ್ರಮಳೆ ಹಬ್ಬವನ್ನು ಇಂದು ಅವರಗುಪ್ಪಾದಲ್ಲಿ
ಬಹುವಿಶಿಷ್ಟವಾಗಿ ಆಚರಿಸಲಾಯಿತು.
ಗ್ರಾಮದ ಜನರು ಮೊನ್ನೆ ಸಾಯಂಕಾಲವೇ ಪೂಜಾ ಮೂರ್ತಿಗಳನ್ನು ಹೊರತೆಗೆದು ಶಾಸ್ತ್ರ ಸಂಪ್ರದಾಯದಂತೆ ಪೂಜಿಸಿದರು. ರವಿವಾರದ ಪೂಜೆಯ ನಂತರ ಇಂದು ಸಾರ್ವತ್ರಿಕ ಬಿಂಗಿ ಆಚರಣೆ ನಡೆಯಿತು.
ಮಂಗಳವಾರ ಕೋಲಶಿರ್ಸಿ
ಯಲ್ಲಿ ಬಿಂಗಿ-
ಸಿದ್ಧಾಪುರದ ಹೊಸೂರು, ಮನ್ಮನೆ, ಹುಸೂರು, ಅವರಗುಪ್ಪಾ ಕೋಲಶಿರ್ಸಿ ಸೇರಿದಂತೆ ಬಹುತೇಕ ಕಡೆ ಆರಿದ್ರಮಳೆ ಹಬ್ಬದ ಬಿಂಗಿ ನಡೆಸಲಾಗುತ್ತದೆ. ಕೋಲಶಿರ್ಸಿಯಲ್ಲಿ ಹಬ್ಬದ ಪ್ರಾರಂಭ ಕಾಯಿ ಕಡಿಯುವ ಮೂಲಕ ರವಿವಾರ ವಿದ್ಯುಕ್ತವಾಗಿ ಪ್ರಾರಂಭವಾಗಿದೆ.
ಮಂಗಳವಾರ ದೇವರ ಮೆರವಣಿಗೆ, ಕೆಂಡ ಹಾಯುವ ಮೂಲಕ ಬಿಂಗಿ ಆಚರಿಸಲಾಗುತ್ತದೆ. ಮಾಂಸಾಹಾರ ಈ ಹಬ್ಬದ ವಿಶೇಶ. ಅವರಗುಪ್ಪಾ, ಕೋಲಶಿರ್ಸಿ, ಬೇಡ್ಕಣಿ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಳೆದ ವಾರದಿಂದ ಪ್ರಾರಂಭವಾದ ಈ ಹನಿಹಬ್ಬ ಆರಿದ್ರ ಮಳೆಯ ಮುಕ್ತಾಯದೊಂದಿಗೆ ಮುಗಿಯುತ್ತದೆ. ¸


