

ಉತ್ತರಕನ್ನಡಜಿಲ್ಲೆ ಸಿದ್ದಾಪುರ ತಾಲೂಕಿನ ಕಾವಂಚೂರುಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಮತ್ತು ಮನಮನೆ ಗ್ರಾಮ ಪಂಚಾಯತಿಗೆ ಹೊಂದಿಕೊಂಡಿರುವ ಬಸರಮನೆ ಹಳ್ಳಕ್ಕೆ ಕಾಲುಸಂಕದ ಅವಶ್ಯಕತೆಕುರಿತು ಸಾಮಾಜಿಕಜಾಲತಾಣದಲ್ಲಿ ಅಭಿಯಾನದಂತೆ ನಡೆದಿದ್ದಕಾರ್ಯಕ್ಕೆ ಕರಾವಳಿ ಪ್ರಾಧಿಕಾರದ ಮಾಜಿಅಧ್ಯಕ ನಿವೇದಿತ್‍ಆಳ್ವಾ ತಕ್ಷಣ ಸ್ಪಂದಿಸಿ ತಮ್ಮಆತ್ಮೀಯರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ ರ ಪ್ರಾದೇಶಿಕ ಅಭಿವೃದ್ಧಿ ನಿಧಿಯಲ್ಲಿರೂಪಾಯಿ10,00,000/-(ಹತ್ತುಲಕ್ಷ) ಗಳನ್ನು ಮಂಜೂರಿ ಮಾಡಿಸಿದ್ದಾರೆ.
ಸುತ್ತಮುತ್ತಲ ಹಳ್ಳಿಗಳಲ್ಲಿ ಕಲ್ಲೂರಿನಲ್ಲಿ ಮಾತ್ರ ಶಾಲೆಯಿದ್ದು, ಸಾಮಾಜಿಕಜಾಲತಾಣದಲ್ಲಿ ಹೆಗ್ಗೆಕೊಪ್ಪದ ಶಾಲಾ ಮಕ್ಕಳುತಮ್ಮ ಪ್ರಾಣವನ್ನುಕೈಯಲ್ಲಿಟ್ಟುಕೊಂಡುತುಂಬಿದ ಹೊಳೆಯನ್ನು ಮರದ ದಿಮ್ಮಿಯ ಕಾಲು ಸಂಕದಿಂದದಾಟುತ್ತಿರುವದೃಶ್ಯವು ಮೈ ಜುಮ್ಮೆನ್ನಿಸುವಂತಿತ್ತು.
ಇದನ್ನು ನೋಡಿದ ನಿವೇದಿತ ಆಳ್ವಾ ತಕ್ಷಣಸ್ಥಳೀಯರನ್ನು ಸಂಪರ್ಕಿಸಿ ವಿಷಯದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಪಡೆದು ಈ ಜಾಗದಲ್ಲಿಜರೂರಾಗಿ ಕಾಲುಸಂಕ ನಿರ್ಮಾಣದಅಗತ್ಯತೆಯನ್ನುಮನಗಂಡುಕಾಲುಸಂಕ ಮಂಜೂರಿಮಾಡಿಸಲುಕಾರ್ಯಪ್ರವೃತ್ತರಾಗಿಯಶಸ್ಸು ಗಳಿಸಿದ್ದಾರೆ.
ಈ ಬಗ್ಗೆ ಮೊದಲು ಜಿಲ್ಲಾಧಿಕಾರಿಗಳ ಗಮನ ಸೆಳೆದ ಮಾಜಿ ತಾ.ಪಂ. ಸದಸ್ಯ ವಸಂತ ನಾಯ್ಕರ ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ, ಸಮಾಜಮುಖಿ ಪತ್ರಿಕೆ ಮತ್ತ ನ್ಯೂಸ್‍ವೆಬ್ ಸೈಟ್‍ನಲ್ಲಿ ಮೊಟ್ಟಮೊದಲು ವರದಿ ಪ್ರಸಾರವಾದದ್ದನ್ನು ಇಲ್ಲಿ ಸ್ಮರಿಸಬಹುದು.
ಸಮಾಜಮುಖಿ ವರದಿಗಳ ನಂತರ ಇತರ ಮಾಧ್ಯಮಗಳೂ ವರದಿ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನದ ಮಾದರಿಯ ಹಕ್ಕೊತ್ತಾಯ ನಡೆದಿತ್ತು.
ಈ ಬಗ್ಗೆ ಹಾಲಿ ತಾ.ಪಂ. ಸದಸ್ಯ ನಾಶಿರ್ ಖಾನ್,ಮಾಜಿ ತಾ.ಪಂ. ಸದಸ್ಯ ವಸಂತ ನಾಯ್ಕ, ಜಿ.ಪಂ.ಸದಸ್ಯೆ ಸುಮಂಗಲಾ ನಾಯ್ಕ ಸೇರಿದಂತೆ ಅನೇಕ ಸ್ಥಳಿಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಈ ಸಂಕರ್ಪ ಸೇತುವೆ ವ್ಯವಸ್ಥೆ ಮಾಡಲು ಸಾಧ್ಯವೆ? ಎಂದು ಸಮಾಜಮುಖಿ ಗಮನ ಸೆಳೆದಿತ್ತು.
ನಂತರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೇ ನಡೆದಿತ್ತು.
ಹೆಗ್ಗೆಕೊಪ್ಪದ ಈ ಅವಶ್ಯ ಸೇತುವೆ ಬಗ್ಗೆ ಆಡಳಿತ ವ್ಯವಸ್ಥೆಯ ಗಮನ ಸೆಳೆದ ಬಗ್ಗೆ ಸಮಾಜಮುಖಿ, ವಸಂತ ನಾಯ್ಕ,ಸೇರಿದಂತೆ ಆಭಾಗದ ಜನಪ್ರತಿನಿಧಿಗಳು ಮುಖಂಡರ ಪ್ರಯತ್ನದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದರು.
ಅವಶ್ಯ ತುರ್ತು ಕೆಲಸದ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ನಿವೇದಿತ್ ಆಳ್ವರೊಂದಿಗೆ ಸ್ಥಳಿಯರ ಪ್ರಯತ್ನದ ಬಗ್ಗೆ ಸಮಾಜಮುಖಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
(ಇದು ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರಶಸ್ತಿಗಿಂತಲೂ ಸಾವಿರ ಪಟ್ಟು ಹೆಚ್ಚು ಸಮಾಧಾನ ತಂದಿದೆ.)

