

ತಹಸಿಲ್ಧಾರ ನೇತೃತ್ವದಲ್ಲಿ ದಾಳಿ-
ಅಶುಚಿತ್ವ, ತಂಬಾಕುಮಾರಾಟ,ಕಾನೂನುಬಾಹೀರ ವಸ್ತುಗಳ ಸಂಗ್ರಹ ಮಾಡಿದವರ ಮೇಲೆ ಕಾನೂನು ಕ್ರಮ
ಸಿದ್ಧಾಪುರ ನಗರದ ಹೋಟೆಲ್,ಗೂಡಂಗಡಿ,ಪೆಟ್ಟಿ ಅಂಗಡಿಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿದ ತಹಸಿಲ್ಧಾರ ಗೀತಾ ಸಿ.ಜಿ. ನೇತೃತ್ವದ ತಂಬಾಕು ನಿಯಂತ್ರಣ ತನಿಖಾ ಕೋಶದ ತಂಡ ಕೆಲವೆಡೆ ತಂಪಾಕು ಉತ್ಫ್‍ನ್ನಗಳು, ಅಕ್ರಮ ಸಂಗ್ರಹಗಳನ್ನು ಪತ್ತೆ ಮಾಡಿ ದಂಡವಿಧಿಸಿದೆ.
ಇಂದು ಬೆಳಿಗ್ಗೆ ತಂಬಾಕು ನಿಯಂತ್ರಣ ತನಿಖಾ ಕೋಶದ ಸಭೆ ನಡೆಯಿತು. ಅಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಂಬಾಕು ನಿಯಂತ್ರಣಾ ತನಿಖಾ ಕೋಶ ಅದರ ಅಧ್ಯಕ್ಷರಾದ ತಹಸಿಲ್ಧಾರ ನೇತೃತ್ವದಲ್ಲಿ ಮಾಡಬಹುದಾದ ಕೆಲಸ, ಕಾನೂನುಕ್ರಮಗಳ ವಿವರ ನೀಡಿದರು.
ಈ ಸಭೆ ಮುಗಿಯುತಿದ್ದಂತೆ ಅದೇ ಅಧಿಕಾರಿಗಳ ತಂಡದೊಂದಿಗೆ ತೆರಳಿದ ತಹಸಿಲ್ಧಾರ ಮತ್ತು ಪ.ಪಂ. ಮುಖ್ಯಾಧಿಕಾರಿಗಳು ಸಾರಿಗೆ ಬಸ್ ನಿಲ್ಧಾಣದಿಂದ ಪ್ರಾರಂಭಿಸಿ ರಾಜ ಮಾರ್ಗದಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳು ಹೋಟೆಲ್ ಗಳ ತಪಾಸಣೆ ನಡೆಸಿದರು.
ಬಹುತೇಕ ಅಂಗಡಿಗಳಲ್ಲಿ ತಂಬಾಕು ಉತ್ಫನ್ನಗಳ ಸಂಗ್ರಹಣೆ ಬೆಳಕಿಗೆ ಬಂತು. ತಂಬಾಕು ನಿಯಂತ್ರಣ ತನಿಖಾ ಕೋಶದ ಜಿಲ್ಲಾ ಸಲಹೆಗಾರ ಪ್ರೇಮ್ ಕುಮಾರ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ಕೆಲವು ಅಂಗಡಿಕಾರರಿಗೆ ದಂಡ ವಿಧಿಸಿ,ಎಚ್ಚರಿಕೆ ನೀಡಿದರು. ಇದೇ ಸಮಯದಲ್ಲಿ ನಿರ್ಮಲಾ ಹೋಟೆಲ್ ಮತ್ತು ಅದರ ಎದುರಿಗಿನ ಗೂಡಂಗಡಿಕಾರರು ಶುಚಿತ್ವ ಕಾಪಾಡಿಲ್ಲ ಎಂದು ಅಧಿಕಾರಿಗಳಿಂದ ಎಚ್ಚರಿಕೆಯ ಸಂದೇಶ ಪಡೆದರು.
ನಂತರ ಮಾತನಾಡಿದ ಅಧಿಕಾರಿಗಳು ಅಕ್ರಮ ತಂಬಾಕು ಮಾರಾಟ, ಬಳಕೆ, ಅಶುಚಿತ್ವ ಮಾಡುವವರಿಗೆ ಪ್ರಾರಂಭಿಕವಾಗಿ ಕನಿಷ್ಟ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮುಂದುವರಿದರೆ ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೇರಿದಂತೆ ಕೆಲವರು ಉಸ್ಥಿತರಿದ್ದರು.



