
ಕರುಳಿನ ಕೂಗು
ಕರುಳಿನ ಕೂಗಿಗೆ
ಕರಗದ ಮನವೇ
ವಿದಾಯ ಹೇಳಿ
ತೊರೆದುಬಿಡು ನನ್ನ
ಈ ಕರುಳಬಳ್ಳಿಗೆ ನೀನೇ
ಕೊಳ್ಳಿ ಇಟ್ಟು..!!
ಅರೆಬರೆ ಬೆಂದು ಹಳಸಿದ
ಗಂಜಿ ನನಗಿರಲೆಂದು
ಅರಸಿ, ಹಾರಿಸಿಟ್ಟ ಅನ್ನದಗುಳ
ಕೈ ತುತ್ತು ಮಾಡಿ ತಿನ್ನಿಸಿದ
ಕೈಗಳೇ ಬೇಡುತ್ತಿವೆ ನಿನ್ನಲ್ಲಿ ಇಂದು..!!
ಈ ಹಸಿವ
ತಾಳಲಾರದು ಈ ಜೀವ
ನಿನ್ನ ಅಮೃತ ಹಸ್ತದಿಂದ
ಕೊಟ್ಟುಬಿಡು ಚೂರು ವಿಷವ
ಹರಕೆ ಹೊತ್ತು
ನಿನ್ನನಡೆದ ತಪ್ಪಿಗೆ
ಅಸುನೀಗುವೆ ನಾ ನಿನ್ನ ಮಡಿಲಲ್ಲೇ..!!
.ರೇಖಾ.ಡಿ.
