ತಂಬಾಕು ನಿಷೇಧದ ಅಂಗವಾಗಿ ಅಂಗಡಿ ಮಾಲಕರು ತಂಬಾಕು ಸೇವನೆ ಅಪರಾಧ ಎನ್ನುವ ಬಿಳಿಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಲು ತಾಕೀತು ಮಾಡಲು ಇಂದು ಇಲ್ಲಿಯ ತಹಸಿಲ್ದಾರ ಕಚೇರಿಯಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ಸಭೆ ಸೂಚಿಸಿದೆ.
ತಹಸಿಲ್ದಾರ ಗೀತಾ ಸಿ.ಜಿ. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು, ತಂಬಾಕು ಉತ್ಫನ್ನಗಳನ್ನು ಸಂಗ್ರಹಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ತಿಳುವಳಿಕೆ ನೀಡಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಮಾನ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. 2003 ರ ಕೊಟ್ಪಾ ಕಾಯಿದೆ ಅನುಸಾರ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ತಹಸಿಲ್ದಾರ ಅಧ್ಯಕ್ಷತೆಯ ಈ ಸಭೆಯಲ್ಲಿ ಜಿಲ್ಲಾ ಸಮನ್ವಯ ಸಮಿತಿಯ ಪ್ರತಿನಿಧಿಗಳು, ತಾಲೂಕಾ ತಂಬಾಕು ನಿಯಂತ್ರಣ ಕೋಶದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ನಂತರ ನಗರದ ಅಂಗಡಿ, ಹೋಟೆಲ್ ಗಳ ಮೇಲೆ ದಾಳಿ ನಡೆಸಿದ ತಂಡ ಕೆಲವರಿಗೆ ದಂಡ ವಿಧಿಸಿ, ತಿಳುವಳಿಕೆ ನೀಡಿತು. ಸಭೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹಾಲಕ್ಷ್ಮಿ ಹೆಗಡೆ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.
ತಹಸಿಲ್ಧಾರ ನೇತೃತ್ವದಲ್ಲಿ ದಾಳಿ-
ಅಶುಚಿತ್ವ, ತಂಬಾಕುಮಾರಾಟ,ಕಾನೂನುಬಾಹೀರ ವಸ್ತುಗಳ ಸಂಗ್ರಹ ಮಾಡಿದವರ ಮೇಲೆ ಕಾನೂನು ಕ್ರಮ
ಸಿದ್ಧಾಪುರ ನಗರದ ಹೋಟೆಲ್,ಗೂಡಂಗಡಿ,ಪೆಟ್ಟಿ ಅಂಗಡಿಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿದ ತಹಸಿಲ್ಧಾರ ಗೀತಾ ಸಿ.ಜಿ. ನೇತೃತ್ವದ ತಂಬಾಕು ನಿಯಂತ್ರಣ ತನಿಖಾ ಕೋಶದ ತಂಡ ಕೆಲವೆಡೆ ತಂಪಾಕು ಉತ್ಫ್‍ನ್ನಗಳು, ಅಕ್ರಮ ಸಂಗ್ರಹಗಳನ್ನು ಪತ್ತೆ ಮಾಡಿ ದಂಡವಿಧಿಸಿದೆ.
ಇಂದು ಬೆಳಿಗ್ಗೆ ತಂಬಾಕು ನಿಯಂತ್ರಣ ತನಿಖಾ ಕೋಶದ ಸಭೆ ನಡೆಯಿತು. ಅಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಂಬಾಕು ನಿಯಂತ್ರಣಾ ತನಿಖಾ ಕೋಶ ಅದರ ಅಧ್ಯಕ್ಷರಾದ ತಹಸಿಲ್ಧಾರ ನೇತೃತ್ವದಲ್ಲಿ ಮಾಡಬಹುದಾದ ಕೆಲಸ, ಕಾನೂನುಕ್ರಮಗಳ ವಿವರ ನೀಡಿದರು.
ಈ ಸಭೆ ಮುಗಿಯುತಿದ್ದಂತೆ ಅದೇ ಅಧಿಕಾರಿಗಳ ತಂಡದೊಂದಿಗೆ ತೆರಳಿದ ತಹಸಿಲ್ಧಾರ ಮತ್ತು ಪ.ಪಂ. ಮುಖ್ಯಾಧಿಕಾರಿಗಳು ಸಾರಿಗೆ ಬಸ್ ನಿಲ್ಧಾಣದಿಂದ ಪ್ರಾರಂಭಿಸಿ ರಾಜ ಮಾರ್ಗದಲ್ಲಿ ಕೆಲವು ಅಂಗಡಿ, ಮುಂಗಟ್ಟುಗಳು ಹೋಟೆಲ್ ಗಳ ತಪಾಸಣೆ ನಡೆಸಿದರು.
ಬಹುತೇಕ ಅಂಗಡಿಗಳಲ್ಲಿ ತಂಬಾಕು ಉತ್ಫನ್ನಗಳ ಸಂಗ್ರಹಣೆ ಬೆಳಕಿಗೆ ಬಂತು. ತಂಬಾಕು ನಿಯಂತ್ರಣ ತನಿಖಾ ಕೋಶದ ಜಿಲ್ಲಾ ಸಲಹೆಗಾರ ಪ್ರೇಮ್ ಕುಮಾರ ನಾಯ್ಕ ನೇತೃತ್ವದಲ್ಲಿ ಅಧಿಕಾರಿಗಳು ಕೆಲವು ಅಂಗಡಿಕಾರರಿಗೆ ದಂಡ ವಿಧಿಸಿ,ಎಚ್ಚರಿಕೆ ನೀಡಿದರು. ಇದೇ ಸಮಯದಲ್ಲಿ ನಿರ್ಮಲಾ ಹೋಟೆಲ್ ಮತ್ತು ಅದರ ಎದುರಿಗಿನ ಗೂಡಂಗಡಿಕಾರರು ಶುಚಿತ್ವ ಕಾಪಾಡಿಲ್ಲ ಎಂದು ಅಧಿಕಾರಿಗಳಿಂದ ಎಚ್ಚರಿಕೆಯ ಸಂದೇಶ ಪಡೆದರು.
ನಂತರ ಮಾತನಾಡಿದ ಅಧಿಕಾರಿಗಳು ಅಕ್ರಮ ತಂಬಾಕು ಮಾರಾಟ, ಬಳಕೆ, ಅಶುಚಿತ್ವ ಮಾಡುವವರಿಗೆ ಪ್ರಾರಂಭಿಕವಾಗಿ ಕನಿಷ್ಟ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮುಂದುವರಿದರೆ ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಪ.ಪಂ. ಮುಖ್ಯಾಧಿಕಾರಿ ಸತೀಶ್ ಗುಡ್ಡೆ ಸೇರಿದಂತೆ ಕೆಲವರು ಉಸ್ಥಿತರಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi