ದೀಪದ ಬುಡ…

ದೀಪದ ಬುಡ…
-ಪಾದಚಾರಿ
ದೀಪದ ಬುಡದಲ್ಲಿ ಕತ್ತಲೆ ಎನ್ನುವ ಮಾತಿದೆ. ಆ ಮಾತು ಎಷ್ಟು ಸತ್ಯ ಎಂದರೆ ನಮ್ಮ ಮನೆಯಲ್ಲೇ ಪ್ರತಿಭಾವಂತರಿದ್ದರೂ ನಾವು ಗಮನನೀಡುವುದಿಲ್ಲ. ನಮ್ಮ ತೋಟದಲ್ಲೇ ಒಳ್ಳೆಯ ತರಕಾರಿ ಇರುತ್ತದೆ. ಆದರೆ ನಮಗದು ಕಾಣುವುದಿಲ್ಲ. ಕಂಡರೂ ಇಷ್ಟವಾಗುವುದಿಲ್ಲ. ಎಷ್ಟೋ ವಸ್ತುಗಳು ನಮ್ಮಲ್ಲೇ ಇರುತ್ತವೆ.ಆದರೆ ನಾವು ಉಪಯೋಗಿಸುವುದಿಲ್ಲ. ಯಾಕೆಂದರೆ ಅದರಮಹತ್ವ ನಮಗೆ ನಗಣ್ಯ.
ದೂರದಿಂದ ಬಂದದ್ದು ಮಾತ್ರ ಒಳ್ಳೆಯದೆಂದು ತಲೆಯಲ್ಲಿ ತುಂಬಿಕೊಳ್ಳುತ್ತೇವೆ. ನಮಗೆ ಬೇಕಾದ ವಸ್ತು ಸನಿಹದಲ್ಲೇ ಇದ್ದರೂ ಗಮನಿಸದೆ ಎಲ್ಲೆಲ್ಲೋ ಹುಡುಕುತ್ತಿರುತ್ತೇವೆ. ಅಂತಹ ಸಂದರ್ಭದಲ್ಲಿ ಹೇಳುವ ಮಾತು ದೀಪದ ಬುಡದಲ್ಲಿ ಕತ್ತಲೆ ಎಂದೋ ಅಥವಾ ಅಂಗೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕೆ ಅಲೆದಾಟ ಎಂದು.
ಈ ಗಾದೆ ಏಕೆ ನೆನಪಾಯಿತು ಎಂದರೆ, ನಮ್ಮೂರಿನ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರನ್ನು ನನ್ನ ಶಾಲಾ ಜೀವನದಲ್ಲಿ ಕೇಳಿಯೇ ಇರಲಿಲ್ಲ. ನಾನು ಪ್ರಾಥಮಿಕ, ಮಾಧ್ಯಮಿಕ ಶಾಲೆಯ ಒಂಭತ್ತನೆಯವರೆಗೆ ಓದಿದ್ದು ಸಿದ್ಧಾಪುರ ತಾಲೂಕಿನಲ್ಲೇ. ಆದರೆ ಚೌಡ ನಾಯ್ಕರ ಹೆಸರು ಮಾತ್ರ ಎಲ್ಲೂ ಕೇಳಲಿಲ್ಲ.
ಶಾಲೆಬಿಟ್ಟ 24-25 ವರ್ಷಗಳ ನಂತರ ಶ್ರೀಪಾದ ಹೆಗಡೆ ಮಗೇಗಾರ್ ಬರೆದ ಕ್ರಾಂತಿಯ ಕಿಡಿ ಎನ್ನುವ ನಾಟಕದ ಪುಸ್ತಕವನ್ನು ಕೊಟ್ಟವರು ಬೆಂಗಳೂರಿನ ನಾರಾಯಣ ಶಾನುಭಾಗರು. ಬೆಂಗಳೂರಿನಿಂದ ನಾರಾಯಣ ಶಾನುಭಾಗರು ಪ್ರೀತಿಯಿಂದ ಮುಂಬಯಿಯ ನನ್ನ ಮನೆ ವಿಳಾಸಕ್ಕೆ ಕ್ರಾಂತಿಯ ಕಿಡಿ ಕಳುಹಿಸಿದ ಶಾನುಭಾಗರ ಸಾಹಿತ್ಯಾಸಕ್ತಿಗೆ ಧನ್ಯವಾದಗಳು ಎಂದು ಹೇಳಲು ದೂರವಾಣಿ ಮಾಡಿದ್ದೆ. ನೀನು ಸಿದ್ಧಾಪುರದವ, ಸಿದ್ಧಾಪುರದ ಕಥೆ ನಿನಗೂ ತಿಳಿದಿರಲಿ. ನೀನು ಕೃತಿಯನ್ನು ಇಷ್ಟಪಡಬಹುದು ಎಂದು ಕಳುಹಿಸಿರುವೆ ಎಂದರು.
40 ಪುಟಗಳ ನಾಟಕ ಓದುತ್ತ ಹೋದಂತೆ ಅನೇಕ ವಿಚಾರಗಳು ಮನಸ್ಸಿನಲ್ಲಿ ಮೊಳಕೆಯೊಡೆದವು. ಅಷ್ಟೇ ಅಲ್ಲ ದೀಪದ ಬುಡದಲ್ಲಿ ಕತ್ತಲೆಎನ್ನುವ ಗಾದೆಯೂ ನೆನಪಾಯಿತು.
ನಾನು ಶಾಲೆಗೆ ಹೋಗುವಾಗ ಬಾಬರ್, ಅಕ್ಬರ್, ಷಹಜಹಾನ್, ಔರಂಗಜೇಬ, ಬಾದಶಾಹ, ರಾರ್ಟ್
ಕ್ಲೈವ್, ಚರ್ಚಿಲ್, ಮೌಂಟ್ ಬ್ಯಾಟನ್, ಸುಲ್ತಾನರು, ಹೈದರಾಲಿ, ಟಿಪ್ಪು ಅವರ ಬಗ್ಗೆ ಬಹಳಷ್ಟು ಪಾಠಗಳಿದ್ದವು. ಆದರೆ ನಮ್ಮ ಚೌಡನಾಯ್ಕರ ಕುರಿತು ಯಾಕೆ ಪ್ರಸ್ಥಾಪ ಇಲ್ಲಎಂದು ಯೋಚಿಸಿದೆ. ಇತಿಹಾಸದ ಪುಟದಲ್ಲಿ ಸ್ವಾತಂತ್ರ್ಯ ಸೇನಾನಿ ಚೌಡ ನಾಯ್ಕರ ಹೆಸರು ಉಲ್ಲೇಖವಾಗದೆ ಇರಲು ಕಾರಣವೇನು? ಎಂದು ನನ್ನ 36ನೇ ವರ್ಷದಲ್ಲಿ ಯೋಚಿಸಿದೆ.
ನಮ್ಮ ಬೇಡ್ಕಣಿ ಚೌಡ ನಾಯ್ಕರ ಕುರಿತು ಒಂದು ಪಾಠ ಬೇಡ, ಎಲ್ಲಾದರೂ ಉಲ್ಲೇಖವಾದರೂ ಆಗಬೇಕಿತ್ತಲ್ಲ. ಯಾರ ಬಾಯಲ್ಲೂ ಅವರ ಹೆಸರು ಕೇಳಿರಲಿಲ್ಲ. ಯಾಕೆ ಹೀಗಾಯಿತು ಎಂದು ಯೋಚಿಸುತ್ತಿರುತ್ತೇನೆ. 1947ರಿಂದ ಇಷ್ಟೊಂದು ಜನ ಪ್ರತಿನಿಧಿಗಳು ಬಂದು ಹೋದರೂ ಸಹ ಚೌಡ ನಾಯ್ಕರ ಕುರಿತು ಒಂದು ಚಿಕ್ಕ ಸ್ಮೃತಿ ಭವನವಾಗಲಿ, ಅವರ ಹೆಸರಿನಲ್ಲಿ ಗ್ರಂಥಾಲಯವಾಗಲಿ ಏಕಿಲ್ಲ. ಕೆಲವರನ್ನು ಕೇಳಿದೆ- ಸರ್ಕಲ್‍ಗೆ ಅವನ (ರ) ಹೆಸರು ಹಾಕಿರುವರು ಎಂಬ ಉತ್ತರ ಬಂತು.
ಒಂದು ಸರ್ಕಲ್‍ಗೆ ಅವರ ಹೆಸರನ್ನು ಹಾಕಿದರೆ ಅದು ಏನೂ ಸಾಲದು. ಸಿದ್ದಾಪುರದಲ್ಲಿರುವ ನೆಹರೂ ಮೈದಾನಕ್ಕೆ ವೀರ ಸ್ವಾತಂತ್ರ್ಯ ಸೇನಾನಿ ಚೌಡನಾಯ್ಕ ಮೈದಾನ’ ಎಂದು ಮರು ನಾಮಕರಣ ಯಾಕೆ ಮಾಡಬಾರದು ಎಂಬ ಯೋಚನೆಯೂ ಬಂತು.
ಆದರೆ ಅಂತಹ ಸಹೃದಯಿನಾಗರಿಕರು ನಮ್ಮೂರಲ್ಲಿಲ್ಲವಲ್ಲ ಇದ್ದರೆ ಅವರನ್ನು ಎಚ್ಚರಿಸಿ ನಿರಂತರ ಅಹಿಂಸಾತ್ಮಕವಾದ ಜನಜಾಗೃತಿಯಿಂದ ಈ ಚಿಕ್ಕ ಕಾರ್ಯ ಸಾಧ್ಯವಾಗುವಂತೆ ಮಾಡಬಹುದು. ಆದರೆ ದೀಪದ ಬುಡದಲ್ಲಿ ಕತ್ತಲು ಅಲ್ಲವೆ?
ಚೌಡ ನಾಯ್ಕರ ರಾಷ್ಟ್ರಪ್ರೇಮ ಕೇಳುತ್ತಾ ಹೋದರೆ ಎಂತಹವರಿಗಾದರೂ ಮೈ ಜುಂ ಎನ್ನುತ್ತದೆ. ಹಾಗಾದರೆ ಯಾಕಾಗಿ ಅವರ ಹೆಸರನ್ನು ಮರೆತಿದ್ದೇವೆ? ಶ್ರೀಮಂತ ಕುಟುಂಬದಿಂದ ಬಂದ ಚೌಡ ನಾಯ್ಕರು ಆ ಕಾಲದಲ್ಲಿ ಮೆಟ್ರಿಕ್ ಓದಿದ ಅವರಿಗೆ ತಂದೆಯ ಹೆಸರಿನಿಂದ ಒಳ್ಳೆಯ ಸರಕಾರಿ ಹುದ್ದೆ ಗಿಟ್ಟಿಸಬಹುದಿತ್ತು. ಆದರೆ ಬ್ರಿಟೀಷರ ಕೈಕೆಳಗೆ ದುಡಿಯುವುದಕ್ಕಿಂತ ಸಾವೇ ಲೇಸು ಎಂದೆಣಿಸಿದ ಕ್ರಾಂತಿವೀರ ಹೆತ್ತ ತಂದೆಯ ವಿರೋಧವನ್ನು ಕಟ್ಟಿಕೊಂಡು ಬ್ರಿಟಿಷರ ಪೆಟ್ಟಿಗೆ (ಹೊಡೆತಕ್ಕೆ) ಮೈಕೊಟ್ಟು ಕೊನೆಗೆ ವೀರಯೋಧ ದೂರದ ಧಾರವಾಡದಲ್ಲಿ ಆಸ್ಪತ್ರೆ ಸೇರಿ ವೀರ ಮರಣವನ್ನಪ್ಪಿದ ಚೌಡ ನಾಯ್ಕ ನಮ್ಮ ತಾಲೂಕಿನವರಿಗೆ ನಗಣ್ಯವಾಗಲು ಕಾರಣ ದೀಪದ ಬುಡದಲ್ಲಿ ಕತ್ತಲೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *