ಬಂಗಾರಪ್ಪ ಪುತ್ರರು ಕಾಂಗ್ರೆಸ್ ಗೆ 2021 ರಲ್ಲಿ ಬದಲಾಗುತ್ತಾ ರಾಜಕೀಯ ಲೆಕ್ಕಾಚಾರ?

ಹಿಂದುಳಿದ ವರ್ಗಗಳ ಚಾಂಪಿಯನ್, ಛಲದಂಕಮಲ್ಲ ದಿ.ಎಸ್. ಬಂಗಾರಪ್ಪ ಪುತ್ರರು ಒಟ್ಟಿಗೇ 2021 ರಲ್ಲಿ ಕಾಂಗ್ರೆಸ್ ಸೇರುತ್ತಾರೆ! ಇಂಥದ್ದೊಂದು ಸುದ್ದಿ ಈ ವಾರ ಚರ್ಚೆಯ ವಿಷಯವಾಗಿದೆ.

ಎಸ್. ಬಂಗಾರಪ್ಪ ಪುತ್ರರು ಸೊರಬಾದಲ್ಲಿ ಪ್ರತಿಸ್ಪರ್ಧಿಗಳಾಗದಿದ್ದರೆ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲಬಲ್ಲರು ಎನ್ನುವ ಅಭಿಪ್ರಾಯ ಒಂದಿದೆ. ಯಾಕೆಂದರೆ ಎಸ್. ಬಂಗಾರಪ್ಪ ಒಂದು ಕಾಲದಲ್ಲಿ ಯಾರನ್ನೂ ಗೆಲ್ಲಿಸುವ ಶಕ್ತಿವಂತ! ಧೀಮಂತರಾಗಿದ್ದರು. ಅವರ ಮಕ್ಕಳಾದ ಕುಮಾರ ಮತ್ತು ಮಧು ಎರಡೂ ಜನ ಶಾಸಕರಾದವರು. ಇವರಲ್ಲಿ ಕುಮಾರ ಬಂಗಾರಪ್ಪ ಸಚಿವರಾಗಿ ಜನಮೆಚ್ಚಿದ ಮಂತ್ರಿ ಎನಿಸಿಕೊಂಡವರು.

ಇವರ ಕುಟುಂಬ ಕಲಹದ ಕಾರಣಕ್ಕೆ ಅಥವಾ ಇವರ ಪರಸ್ಫರ ಸೊರಬಾ ಪ್ರೀತಿಯ ಕಾರಣಕ್ಕೆ ಎರಡೂ ಜನ ಸೋತವರು! ಈ ಸೋಲು,ರಾಜಕೀಯ ವ್ಯಹಾರ ನೋಡಿದ ರಾಜ್ಯದ ಜನ ಸೋಲಿಲ್ಲದ ಸರದಾರನ ಮಕ್ಕಳು ಹೀಗೆ ಸೋಲಬಾರದು ಎಂದು ನೊಂದುಕೊಂಡವರೆ.. ಈ ನೋವು, ಬೇಸರದ ಕಾರಣಕ್ಕೆ ಈ ಸಹೋದರರನ್ನು ಜೋಡಿಸಲು ಹೋಗಿ ಬೇರ್ಪಟ್ಟವರು ಅನೇಕರಿದ್ದಾರೆ.

ಈಗ ವಿ.ಪ. ಸದಸ್ಯ ಬಿ.ಕೆ. ಹರಿಪ್ರಸಾದ್ , ಮತ್ತು ಸಾಗರದ ಪ್ರಶಾಂತ್ ಶಿವಪ್ಪ ಮಧು ಮತ್ತು ಕುಮಾರರ ನಡುವೆ ಸಂಧಾನ ಮಾಡಿಸಿ ರಾಜ್ಯ ರಾಜಕೀಯದ ಚಿತ್ರಣ ಬದಲಿಸುವ ಪ್ರಯತ್ನ ಶುರುಮಾಡಿದ್ದಾರೆ. ಇವರ ಪ್ರಯತ್ನ ಯಶಸ್ವಿಯಾದರೆ… ಮಧು ಬಂಗಾರಪ್ಪ ಶಿವಮೊಗ್ಗದ ಲೋಕಸಭೆ ಪ್ರತಿನಿಧಿಸುತ್ತಾರೆ, ಕುಮಾರ ರಾಜ್ಯ ವಿಧಾನಸಭೆ ಸದಸ್ಯ ರಾಗಿ ಅಭಾದಿತವಾಗಿ ಮುಂದುವರಿಯುತ್ತಾರೆ ಎನ್ನುವ ನಿರೀಕ್ಷೆ ಇದೆ.

ಹರಿಪ್ರಸಾದ್ ರಾಷ್ಟ್ರ-ರಾಜ್ಯ ರಾಜಕಾರಣ ಬಂಗಾರಪ್ಪ ಮತ್ತು ಕಾಂಗ್ರೆಸ್ ಹಾಗೂ ರಾಜ್ಯದ ಟಾಪ್ 5 ಅತಿದೊಡ್ಡ ಸಮೂದಾಯಗಳ ಶಕ್ತಿ ಅರಿತವರು. ಅವರ ಯೋಚನೆ, ಯೋಜನೆಯಂತೆ ನಡೆದರೆ ಕುಮಾರಬಂಗಾರಪ್ಪ ಬಿ.ಜೆ.ಪಿ. ಬಿಟ್ಟು ಕಾಂಗ್ರೆಸ್ ಸೇರಿ ಸೊರಬಾದ ವಿಧಾನಸಭಾ ಅಭ್ಯರ್ಥಿಯಾಗುತ್ತಾರೆ ಮತ್ತು ಸಚಿವರೂ ಆಗುವ ಸಾಧ್ಯತೆ ಹೆಚ್ಚು.

ಈ ಸಂಧಾನಕ್ಕೆ ಒಪ್ಪಿ ನಡೆದುಕೊಂಡರೆ ಮಧು ಬಂಗಾರಪ್ಪ ಕೂಡಾ ಕಾಂಗ್ರೆಸ್ ಸೇರಿ ಲೋಕಸಭೆಯ ಸದಸ್ಯರಾಗುತ್ತಾರೆ ಅದೃಷ್ಟ ಒಲಿದರೆ ಅವರೂ ಸಚಿವರಾದಾರು. ಈಗಿರುವ ಪ್ರಶ್ನೆಯೆಂದರೆ…. ಬಿ.ಕೆ. ಹರಿಪ್ರಸಾದ್, ಡಿ.ಕೆ. ಶಿವಕುಮಾರ ಪ್ರಶಾಂತ್ ಶಿವಪ್ಪ ಸೇರಿ ಇನ್ನೂ ಅನೇಕರ ಸಂಧಾನಸೂತ್ರ, ಕಾಂಗ್ರೆಸ್ ನಿರೀಕ್ಷೆ,ಆಸೆ ಪ್ರಕಾರ ಈ ಸಹೋದರರು ಹೊಂದಿಕೊಳ್ಳುತ್ತಾರಾ? ಎಂಬುದು.

ಆದರೆ ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಡಿ.ಕೆ.ಶಿವಕುಮಾರ ಮತ್ತು ಬಿ.ಕೆ. ಹರಿಪ್ರಸಾದ್ ಬಂಗಾರಪ್ಪ ಕುಟುಂಬದ ಆಪ್ತರು, ಇಬ್ಬರೂ ಕಾಂಗ್ರೆಸ್ ಪಕ್ಷ, ರಾಜಕೀಯ ವರ್ಚಸ್ಸುಗಳಲ್ಲಿ ಪ್ರಭಾವಿಗಳು. ಇವರ ಪ್ರಯತ್ನದ ಪ್ರಕಾರ ಸಂಧಾನ ಸೂತ್ರ ಯಶಸ್ವಿಯಾದರೆ…. ಕರ್ನಾಟಕದ ರಾಜಕೀಯ ವಾತಾವರಣವನ್ನು ಬದಲಿಸುವ ಡಿ.ಕೆ.ಶಿವಕುಮಾರ,ಬಿ.ಕೆ. ಹರಿಪ್ರಸಾದ್ ರ ಆಸೆ, ಮಹಾತ್ವಾಕಾಂಕ್ಷೆಗೆ ಈ ಇಬ್ಬರ ಪ್ರಭಾವ, ಶಕ್ತಿ- ವರ್ಚಸ್ಸು ಕೆಲಸಮಾಡುವುದರಲ್ಲಿ ಎರಡು ಮಾತಿಲ್ಲ. ಈ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರು ಬಂಗಾರಪ್ಪ ಪುತ್ರ ರೆಂಬ ಸೊರಬಾ ಜೋಡೆತ್ತುಗಳ ಮೊರೆ ಹೋಗಿದ್ದಾರೆ.

ಕಾಂಗ್ರೆಸ್ ನ ಪ್ರಮುಖ ನಾಯಕರು ಕಾಂಗ್ರೆಸ್ ಆಡಳಿತಕ್ಕೆ ತರಲು ಬಂಗಾರಪ್ಪ ಪುತ್ರರನ್ನು ಬಳಸಿಕೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಚೇತರಿಸಿಕೊಳ್ಳುವುದರಲ್ಲೂ ಅನುಮಾನಗಳಿಲ್ಲ. ಕಾಂಗ್ರೆಸ್ ನಾಯಕರು ಒಂದೇ ಏಟಿಗೆ ಎರಡು ಪಕ್ಷಗಳನ್ನು ಹೊಡೆದು ಅಧಿಕಾರಕ್ಕೆ ಬರಲು ಬಂಗಾರಪ್ಪ ಪುತ್ರರನ್ನು ಬಳಸಿಕೊಳ್ಳುವ ಯೋಜನೆ ತಯಾರಿಸಿದ್ದು ಕಾಂಗ್ರೆಸ್, ಬಿ.ಜೆ.ಪಿ., ಜೆ.ಡಿ.ಎಸ್. ಗಳೆಂಬ ಮೂರೂ ಪ್ರಮುಖ ಪಕ್ಷಗಳ ಹಲವು ನಾಯಕರಿಗೆ ಇದು ಬಿಸಿ ತುಪ್ಪವಾಗುವ ಅನಿವಾರ್ಯತೆ ಸೃಷ್ಟಿಯಾಗುವುದನ್ನು ಯಾರೂ ಅಲ್ಲಗಳೆಯಲಾರರೇನೋ? ಬಂಗಾರಪ್ಪ ಸಾಂಮ್ರಾಜ್ಯ ಕದಲಿಸಿದ ಬಿ.ಜೆ.ಪಿ., ಯಡ್ಡಿಕುಟುಂಬ ಈ ಹೊಸ ಬೆಳವಣಿಗೆಯಿಂದ ಕಂಗಾಲಾಗಿದೆ ಎನ್ನುವ ಮಾತೂ ಸುಳ್ಳಿರಲಿಕ್ಕಿಲ್ಲ. ಇದು ಹಿಂದುಳಿದವರು, ಬಂಗಾರಪ್ಪ ಅಭಿಮಾನಿಗಳ ಮಹಾದಾಸೆ ಕೂಡಾ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ...

sslc ಸಿದ್ದಾಪುರ ರಾಜ್ಯಕ್ಕೇ ನಂ ೦೧ ? ೯೯.೭೫ ಫಲಿತಾಂಶ

ರಜತ್‌ ವಿನಾಯಕ ಶೇಟ್‌ (ಪ್ರಶಾಂತಿ ಪ್ರೌಢಶಾಲೆ)೬೨೨/ ಹಂಸಿನಿ ಮೋಹನ ಹೆಗಡೆ (ಪ್ರಶಾಂತಿ ಪ್ರೌಢಶಾಲೆ)೬೨೦/ ಮಾನ್ಯ ಕೃಷ್ಣಮೂರ್ತಿ ಭಟ್‌ ( ಕಾಳಿಕಾ ಭವಾನಿ ಆ.ಮಾ.ಶಾಲೆ ಕಾನಸೂರು)...

ksrtc -ಕೆಎಸ್‌ಆರ್‌ಟಿಸಿ ನೌಕರರು ನಮ್ಮ ನಡುವಿನ ಯೋಧರು: ಶಾಸಕ ಭೀಮಣ್ಣ ನಾಯ್ಕ ಶ್ಲಾಘನೆ

ಸಿದ್ದಾಪುರ: “ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬವನ್ನು ಮರೆತು, ಪ್ರಯಾಣಿಕರ ಸುರಕ್ಷತೆಯನ್ನೇ ಗುರಿಯಾಗಿಸಿಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ನಿಜಕ್ಕೂ ನಮ್ಮೆಲ್ಲರ ನಡುವಿನ...

adake-bhavana- ಕಾಗೇರಿ-ಭೀಮಣ್ಣ ಗುಟ್ಟಾಗಿ ಹೊಂದಾಣಿಕೆ?!

ರಾಜಕೀಯ, ಪಕ್ಷ, ಒಟ್ಟಾರೆ ಸಮಾಜದಲ್ಲಿ ಹೊಂದಾಣಿಕೆ, ಸಮನ್ವಯ ಅಗತ್ಯ ಎಂದು ಪ್ರತಿಪಾದಿಸಿರುವ ಶಾಸಕ ಭೀಮಣ್ಣ ನಾಯ್ಕ ತಾವು ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ...

ಶಿರಳಗಿ ಗ್ರಾ.ಪಂ. ಎರಡು ಪ್ರಕರಣಗಳು…. ಯಾರದ್ದೋ ಲಾಭಕ್ಕೆ ಯಾರಿಗೋ ಬರೆ! # love jihAd! #

ಸಿದ್ಧಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರಕರಣಗಳು ಪಿಸುಮಾತು ಬಹುದೂರ ಕೇಳಿಸುತ್ತದೆ ಎನ್ನುವಂತೆ ಸದ್ದು ಮಾಡಿವೆ. ಪ್ರಕರಣ ಒಂದು- ಶಿರಳಗಿ...

Latest Posts

teachers elc results… ಶಿಕ್ಷಕರ ಸಂಘ: ಮತ್ತೆ ಗೆದ್ದ ಹಳೆ ತಂಡ

ಸಿದ್ದಾಪುರ, ಇಲ್ಲಿಯ ಶಿಕ್ಷಕರ (ಕ.ರಾ.ಪ್ರಾ.ಶಿ.ಸಂಘ ದ ಸಿದ್ಧಾಪುರ ತಾಲೂಕಾ ಶಾಖೆ) ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಸಂಘದ ನಿರ್ಧೇಶಕರಲ್ಲಿ ಹೆಚ್ಚಿನವರನ್ನು ಸೋಲಿಸಿ ಹಳೆ ತಂಡ ಮತ್ತೆ ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಈ ಚುನಾವಣೆಯ ಮತ ಎಣಿಕೆಯ ಪ್ರಕ್ರೀಯೆ ಸ್ಥಳೀಯ ಬಾಲಿಕೊಪ್ಪ ಶಾಲೆಯಲ್ಲಿ ತಡ ರಾತ್ರಿಯ ವರೆಗೆ ನಡೆದಿತ್ತು. ಹಿಂದಿನ ಅವಧಿಗೆ ಆಯ್ಕೆಯಾಗಿದ್ದ...

Recommended For You

About the Author: Kanneshwar Naik

Leave a Reply

Your email address will not be published. Required fields are marked *