

ಸಿದ್ಧಾಪುರದ ಮುತ್ತಿಗೆ ಗೋಳಗೋಡಿನ ವಸಂತ ಶಾನಭಾಗರ ಕೊಲೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಿದ್ದಾಪುರ ವೃತ್ತ ನಿರೀಕ್ಷಕ ಜೊಯ್ ಅಂತೋನಿಯವರನ್ನು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತು ಮಾಡಿರುವುದು ಗೊತ್ತಾಗಿದೆ.
ಗೋಳಗೋಡು ಪಾಟಾಳಿ ವಸಂತ ಶಾನಭಾಗರನ್ನು ಅಪಹರಿಸಿ ಹತ್ಯೆ ಮಾಡಿದ ದಾಯಾದಿ ಅಪ್ಪ ಮಗ ಕೊಲೆಯ ನಂತರ ತಲೆಮರೆಸಿಕೊಂಡಿದ್ದರು. ಕಳೆದ ಏಫ್ರಿಲ್ 24 ರಂದು ವಸಂತರನ್ನು ಅಪಹರಿಸಿ ಕೊಲೆಮಾಡಿದ್ದರು.
ಏಫ್ರಿಲ್ 28 ರಂದು ನಾಪತ್ತೆ ದೂರು, ನಂತರ ಅಪಹರಣದ ದೂರು ಹೀಗೆ ಸ್ಥಳಿಯರು ಎರಡೆರಡು ಬಾರಿ ಮಾಹಿತಿ, ಕ್ಲೂ ನೀಡಿದ್ದಾಗ್ಯೂ ಜೊಯ್ ಈ ಪ್ರಕರಣವನ್ನು ಗಂಭೀರ ಪ್ರಕರಣವೆಂದು ಪರಿಗಣಿಸಿರಲಿಲ್ಲ. ನಂತರ ಸ್ಥಳಿಯರ ದೂರು, ಬೇನಾಮಿ ಮಾಹಿತಿ ಮೇರೆಗೆ ಉತ್ತರಕನ್ನಡ ಎಸ್.ಪಿ. ಈ ಪ್ರಕರಣವನ್ನು ಮುಂಡಗೋಡ್ ಪಿ.ಆಯ್. ರಿಗೆ ಹಸ್ತಾಂತರಿಸಿದ್ದರು. ನಂತರ ಬೆಂಗಳೂರು ಕನಕಪುರದ ಲೋಕಿ ಬಂಧನ ಆನಂತರ ವಿನಯ್ ಮತ್ತು ವಸಂತ ಶಾನಭಾಗರ ಬಂಧನ ಆಗಿತ್ತು.
ಈ ಪ್ರಕರಣದಲ್ಲಿ ರಾಜಕೀಯ ಲಾಭಿ(ಶಿರಸಿ ರಾಜಕಾರಣಿಗಳು? ಜಾತಿ ರಕ್ಷಣೆ!)ಗೆ ಮಣಿದು ಕೊಲೆಗಾರರನ್ನು ಬಚಾವು ಮಾಡದ್ದರು ಎನ್ನುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜೊಯ್ ತಲೆದಂಡವಾಗಿದೆ ಎನ್ನಲಾಗುತ್ತಿದೆ.
