ದೇಶಪಾಂಡೆ ಬಿ.ಜೆ.ಪಿ.ಗೆ!
ಯಾರ್ ಬರ್ತಾರೆ ಡಿ.ಸಿ.ಸಿ.ಗೆ? ಭಾಗ-01
ರಾಜ್ಯ ಕಂಡ ಊಹೆಗೆ ನಿಲುಕದ ರಾಜಕಾರಣಿ ರಾಜ್ಯ ಕಂದಾಯ ಸಚಿವ,ಉತ್ತರಕನ್ನಡ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ದೇಶಪಾಂಡೆ ಬಿ.ಜೆ.ಪಿ.ಸೇರುತ್ತಾರೆ ಎನ್ನುವ ವಿಷಯ ಚರ್ಚೆಗೆ ಬರತೊಡಗಿ ಈಗಾಗಲೇ ಮೂರುಮುಕ್ಕಾಲು ವರ್ಷಗಳು ಕಳೆದಿವೆ.
ದೇಶಪಾಂಡೆ ಬಿ.ಜೆ.ಪಿ. ಸೇರುತ್ತಾರೆ ಎಂದು ಸುದ್ದಿಯಾಗಲು ಹಲವು ಕಾರಣಗಳಿವೆ.
ಆರ್.ವಿ.ಡಿ. ಕಾಂಗ್ರೆಸ್ ನ ಬ್ರಾಹ್ಮಣ ಕೋಟಾದ ನಾಯಕ.
ದೇಶಪಾಂಡೆ ಬಿ.ಜೆ.ಪಿ. ಬೆಂಬಲಿಗ ಸ್ವಾಮಿಗಳು,ಬ್ರಾಹ್ಮಣ ಉದ್ಯಮಿಗಳ ಜೊತೆ ನಿಕಟ ಸಂಪರ್ಕ ಹೊಂದಿರುವವರು.
ಅನೇಕ ಮಾನದಂಡಗಳಲ್ಲಿ ಬಿ.ಜೆ.ಪಿ. ಗೆ ಹೊಂದಬಹುದಾದ ವ್ಯಕ್ತಿತ್ವದ ದೇಶಪಾಂಡೆ ಬಿ.ಜೆ.ಪಿ. ಸೇರಲು ಅವರಿಗೆ ಸಿದ್ಧಾಂತ, ಬದ್ಧತೆ ಅಡ್ಡಿ ಬರುವುದಿಲ್ಲ ಎನ್ನುವುದೂ ಕೆಲವು ಪ್ರಮುಖ ಕಾರಣಗಳಲ್ಲೊಂದು.
ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಖಜಾಂಜಿಯಾಗಬಲ್ಲ ದೇಶಪಾಂಡೆ ಬಿ.ಜೆ.ಪಿ ಖಜಾಂಜಿಯೂ ಆಗಬಹುದು ಎನ್ನುವುದು ಬಿ.ಜೆ.ಪಿ. ನಿರೀಕ್ಷೆ.
ಹೀಗೆ ಕಾಂಗ್ರೆಸ್‍ಗೆ ಹೊಂದಲಾರದ ನಡತೆ, ವ್ಯಕ್ತಿತ್ವದ ದೇಶಪಾಂಡೆ ಬಹುಹಿಂದೆ ಕಾಂಗ್ರೆಸ್ ನಿಂದ ಜನತಾದಳ, ಜನತಾದಳದಿಂದ ಕಾಂಗ್ರೆಸ್‍ಗೆ ವಲಸೆ ಬಂದವರು.
ಹಾಗಾಗಿ ದೇಶಪಾಂಡೆ ತನ್ನ ಹಿತೈಶಿಗಳ ನೆಚ್ಚಿನ ಬಂಡವಾಳಶಾಹಿಗಳ ಪ್ರೀತಿಯ ಪಕ್ಷವಾದ ಬಿ.ಜೆ.ಪಿ. ಸೇರಬಹುದು ಎನ್ನುವುದು ಎಲ್ಲರ ಅನಿಸಿಕೆ.
ಇಂಥ ಗುಣವಿಶೇಶಗಳ ದೇಶಪಾಂಡೆ ತನ್ನ ಅನುಕೂಲ, ಮಗನ ಭವಿಷ್ಯಕ್ಕಾಗಿ ಬಿ.ಜೆ.ಪಿ.ಸೇರುತ್ತಾರೆ ಎನ್ನುವುದು ಸಾಮಾನ್ಯ ಗ್ರಹಿಕೆ.
ಆದರೆ ಅವರ ಆಪ್ತರು ಹೇಳುವಂತೆ ಸಚಿವ ಆರ್.ವಿ.ದೇಶಪಾಂಡೆ ವಾನಪ್ರಸ್ಥದ ತಯಾರಿಯಲ್ಲಿದ್ದಾರೆ. ಎಲ್ಲಾ ಪಕ್ಷಗಳ ಪ್ರಮುಖರೊಂದಿಗೆ ಹಿತವಾಗಿದ್ದು ಎಲ್ಲರಿಂದಲೂ ಅನುಕೂಲ ಪಡೆಯುವ ದೇಶದ ಪ್ರಮುಖ ಇಂಡಸ್ಟ್ರಿಯಲ್ ಸಿಂಡಿಕೇಟ್ ಸದಸ್ಯರಾಗಿರುವ ದೇಶಪಾಂಡೆ ಮಕ್ಕಳು ಬಿ.ಜೆ.ಪಿ. ಮಾನಸಿಕತೆಯವರಾಗಿದ್ದಾರೆ.
ಹಾಗಾಗಿ ಮಕ್ಕಳ ಕಾರಣಕ್ಕೆ ದೇಶಪಾಂಡೆ ಬಿ.ಜೆ.ಪಿ. ಕದತಟ್ಟಿದರೂ ತಟ್ಟಬಹುದು ಎನ್ನಲಾಗುತ್ತಿದೆ.
ವಿಶೇಶವೆಂದರೆ…. ಉತ್ತರ ಕನ್ನಡ ಸೇರಿದಂತೆ ರಾಜ್ಯ, ದೇಶದಾದ್ಯಂತ ಬಂಡವಾಳಶಾಹಿ,
ವೈದಿಕತೆಯ ಬಿ.ಜೆ.ಪಿ. ಬೆಂಬಲಿಸಿರುವ ಧರ್ಮಸ್ಥಳ ಸಂಘದಂಥ ಅರೆ ರಾಜಕೀಯ ಕೂಟಗಳು ಹಿಂದಿನ ಚುನಾವಣೆಯಲ್ಲಿ ಬ್ರಾಹ್ಮಣರು,ಬಿ.ಜೆ.ಪಿ.ಗೂ ಹೊಂದಿಕೊಳ್ಳುವಂಥವರು ಎಂದು ದೇಶಪಾಂಡೆ ಮತ್ತು ಶಿವರಾಮ ಹೆಬ್ಬಾರರಿಗೆ ಬ್ರಾಹ್ಮಣರ ಲಾಭಿಯಡಿ ರಾಜಕೀಯ ಲಾಭಮಾಡಿದ್ದವಂತೆ!.
ಅಂಥ ಅಂದರ್ ಕಿ ಮಚ್ಚುವಾಳ್ಳಿ ವೈದಿಕ ವೈರಸ್ ಗಳು ಈಗಲೂ ಈ ಬ್ರಾಹ್ಮಣರನ್ನು ಬಿ.ಜೆ.ಪಿ.ಗೆ ಎಳೆಯುವ ಪ್ರಯತ್ನ ಪ್ರಾರಂಭಿಸಿವೆ ಎನ್ನುವುದು ಇನ್ನೊಂದು ವಿಚಾರ.
ಹೀಗೆ ಬ್ರಾಹ್ಮಣಿಕೆಯ ನಿರ್ಧೇಶನದಂತೆ ಉತ್ತರ ಕನ್ನಡದಿಂದ ಶಿವರಾಮ ಹೆಬ್ಬಾರ್ ಮತ್ತು ಆರ್.ವಿ.ಡಿ. ಬಿ.ಜೆ.ಪಿ. ಸೇರುತ್ತಾರೆ ಎನ್ನುವುದು ಒಂದು ಊಹೆ.
ಇದೇನೇ ಇರಲಿ, ಆರ್.ವಿ.ಡಿ. ಸದ್ಯಕ್ಕೆ ಕಾಂಗ್ರೆಸ್ ಬಿಡುವಂತೆ ಕಾಣುತ್ತಿಲ್ಲ. ಆದರೆ, ದೇಶಪಾಂಡೆ ಜನಿವಾರದ ದೋಸ್ತಿಗಳು ದೇಶಾಂಡೆಯವರನ್ನು ಬಿ.ಜೆ.ಪಿ.ಗೆ ತಂದು ಯಡಿಯೂರಪ್ಪನವರ ಸ್ಥಾನದಲ್ಲಿ ಕೂರಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ದೂರಾಲೋಚನೆ ಮಾಡಿ ಮಾಧ್ಯಮಗಳ ಮೂಲಕ ಬಿ.ಜೆ.ಪಿ.ಗೂ ದೇಶಪಾಂಡೆಯವರಿಗೂ ಇರುವ ಜನಿವಾರದ ನಂಟನ್ನು ಗಂಟುಹಾಕುವ ಪ್ರಯತ್ನ ನಡೆಸಿರುವುದು ಮಾತ್ರ ನೂರಕ್ಕೆ ನೂರು ಸತ್ಯ ಎನ್ನಲಾಗುತ್ತಿದೆ.
ದೇಶಪಾಂಡೆ ಬಿ.ಜೆ.ಪಿ. ಸೇರಿದರೆ ಅವರಿಗೆ ವೈಯಕ್ತಿಕವಾಗಿ ಅನುಕೂಲವಾಗಬಹುದು ಆದರೆ ಕಾಂಗ್ರೆಸ್ ನ ಕಂಟಕ ಕಳೆಯಲಿದೆ ಎನ್ನುವುದು ಮಾತ್ರ ವಾಸ್ತವ.
ದೇಶಪಾಂಡೆ ಬಿ.ಜೆ.ಪಿ. ಸೇರಿದರೆ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಆಳ್ವರ ಪಟಾಲಂ ಪ್ರವೇಶಿಸುತ್ತದೆ.
ಆಗ ದೇಶಪಾಂಡೆ ಬಣ ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎನ್ನುವ ಸಂದಿಗ್ಧತೆಗೆ ಸಿಲುಕುವ ಅಪಾಯವಂತೂ ನಿಚ್ಚಳವಾಗಿದೆ.
ಯಾರಾಗ್ತಾರೆ ಡಿ.ಸಿ.ಸಿ. ಅಧ್ಯಕ್ಷ?
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷತೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಕೆ.ಪಿ.ಸಿ.ಸಿ. ಪುನರ್‍ರಚನೆ ನಡೆಯಲಿದೆ.
ಇದರ ಅಂಗವಾಗಿ ಜಿಲ್ಲಾವಾರು ಕಾಂಗ್ರೆಸ್ ಅಧ್ಯಕ್ಷರುಗಳ ಆಯ್ಕೆ ನಡೆಯಲಿದೆ. ಹಾಗಾಗಿ ಭೀಮಣ್ಣ ನಾಯ್ಕ ತೆರವು ಮಾಡುವ ಉ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಯಾರು ಸ್ಫರ್ಧಿಗಳು ಎಂದರೆ ನಾಲ್ಕೈದು ಹೆಸರುಗಳಿಗಿಂತ ಹೆಚ್ಚಿನ ಹೆಸರುಗಳು ಕೇಳಿ ಬರುತ್ತಿಲ್ಲ.
ದೇಶಪಾಂಡೆಯವರ ಅಣತಿಯಂತೆ ನಡೆದರೆ ಶಿವಾನಂದ ಹೆಗಡೆ ಕಡತೋಕಾ, ಷಣ್ಮುಖಗೌಡರ್ ಸಿದ್ಧಾಪುರ,ರಾಮಕೃಷ್ಣ ಮೂಲಿಮನಿ ಮುಂಡಗೋಡ ಅಥವಾ ಕೆ.ಜಿ.ನಾಗರಾಜ್ ಸಿದ್ಧಾಪುರರಲ್ಲಿ ಒಂದು ಹೆಸರು ಅಂತಿಮವಾಗಲಿದೆ ಎನ್ನಲಾಗುತ್ತಿದೆ.
ಮಾರ್ಗರೇಟ್ ಆಳ್ವ ಬಣದಿಂದ ಸಿದ್ಧಾಪುರದ ವಿ.ಎನ್.ನಾಯ್ಕ, ಗೋಕರ್ಣದ ಸಾಯಿ ಗಾಂವಕರ, ಅಥವಾ ಶಿರಸಿ ಸಿ.ಎಫ್. ನಾಯ್ಕ ಅಥವಾ ಸತೀಶ್ ನಾಯ್ಕರಲ್ಲಿ ಒಂದು ಹೆಸರು ಅಂತಿಮವಾಗಲಿದೆ ಎನ್ನಲಾಗುತ್ತಿದೆ. ಹೀಗೆ ಬಣಾಬಣಗಳ ಮೇಲಾಟದಲ್ಲಿ ದೇಶಪಾಂಡೆ ಎಂದಿನಂತೆ ತನ್ನ ಕೈ ಮೇಲಾಗಿಸಿಕೊಂಡರೆ ಶಿವಾನಂದ ಹೆಗಡೆ………. (ಕಾಯ್ತಾ ಇರಿ)