

| ಹೊಂಬೆಳಕು ಹೊತ್ತ ಅವಳ ಗುಲಾಬಿ ನಯನಗಳು| ಕಂಡ ಕೂಡಲೇ ಹೊಳೆಹೊಳೆದು ಆ ಸಂಜೆಯಾಗಿತ್ತು ಮರುಳು|| ಓದಿ ಮಾಡುತ್ತಿಹನು ಮನನ ಕೇವಲ ಅಂದದ ಸೊಬಗು| ತಂಗಾಳಿ ತಣ್ಡಗೆ ಆವರಿಸಿ ಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋ ಕಳೆದುಕೊಂಡೆ ಆಗ ನನ್ನೇ ನಾನು| ಎಲ್ಲಿ ಹೇಗೆ ಎಂದು ಹುಡುಕದೆ ಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿ ಮುಂಗಾರು ಮಿಂಚಿನ ಸೆಳೆವು| ಇಂಚಿಂಚು ಅತಿಕ್ರಮಣ ಸ್ಥಳವಕಾಶ ಮಾಡಿತು ಒಲವು|| ಬೇಡ ಬೇಡವೆಂದರೂ ಕೇಳದಂತೆ ಭಾಸ| ಮಿಡಿಮಿಡಿದು ಆಗಿಹೋಯಿತು ಈ ಮನ ಪರವಶ||ಅತಿ ವಿಶೇಷ ಎನಿಸಿ ಸಹಜ ಸ್ವಭಾವ| ಅದು ಯಾಕೋ ಏನೋ ಬದಲಾಗಿ ಹಾವಭಾವ||ಹೇಗಾದರೂ ಇಡಲಿ ನಾನೆಷ್ಟು ಗಮನ| ಆಡಿದಂತೆ ತೂಗುಯ್ಯಲೆ ಕಣ್ಣಾಮುಚ್ಚಾಲೆಯ ಕ್ಷಣ|| ಅದೆಂತಹ ಕಚಗುಳಿ ಬೀರುವಾಗ ಕಳ್ಳ ನೋಟ| ಕಂಡು ಹಿಡಿದಳು ನೋಡಿ ನನ್ನ ಪಠ್ಯೇತರ ಆಟ ಪಾಠ||ಬೆಸೆದಾಗ ಕಣ್ಣು ಕಣ್ಣು ಪ್ರೇಮಮೂರ್ತಿಯ ಪ್ರತಿಷ್ಠಾಪನೆ| ಇನ್ನೂ ಏನು ಎಂದು ಹೇಳಲಿ ಮೂಕವಿಸ್ಮಿತ ಆಲಾಪನೆ||*ಬಸವರಾಜ ಕಾಸೆ* 7829141150 pr***********@***il.comReplyForward |
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






