

ಕಲಬುರ್ಗಿಯ ರಂಗ ಸಂಗಮ ಕಲಾ ವೇದಿಕೆ ಹಿರಿಯ ಕಲಾವಿದರಾಗಿದ್ದ ಜಂಗಮ ಶೆಟ್ಟಿ ನೆನಪಿನಲ್ಲಿ ನೀಡುವ ರಾಜ್ಯ ಮಟ್ಟದ ಜಂಗಮ ಶೆಟ್ಟಿ ಪ್ರಶಸ್ತಿಯನ್ನು ಈ ಬಾರಿ ಶಿರಸಿಯ ರಂಗ ತಜ್ಞ, ಕಲಾವಿದ, ಶಿಕ್ಷಕ ಡಾ. ಶ್ರೀಪಾದ ಭಟ್ಟ ಅವರಿಗೆ ಪ್ರಕಟಿಸಿದೆ.
ರಂಗ ಭೂಮಿಯಲ್ಲಿ ತಮ್ಮದೇ ಆದ ಮನ್ವಂತರ ಸೃಷ್ಟಿಸಿದ ರಂಗಭೂಮಿ ತಜ್ಞ. ಸಂಗೀತ, ಸಾಹಿತ್ಯ, ಶಿಕ್ಷಣ,ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಡಾ. ಶ್ರೀಪಾದ ಭಟ್ಟರ ನಿರ್ದೆಶನದ ನಾಟಕಗಳು ಈಗಾಗಲೇ ನಾಡು ಹೊರ ನಾಡುಗಳಲ್ಲಿ ಜನ ಜನಿತವಾಗಿವೆ.
ಕರ್ಣಭಾರ, ಚಿತ್ರಾ, ಕಂಸಾಯಣ, ಮಕ್ಕಳ ರವೀಂದ್ರ, ರೆಕ್ಕೆ ಕಟ್ಟುವಿರಾ, ರಾಜ್ಯದ ಎಲ್ಲಡೆ ಪ್ರದರ್ಶನ ಕಂಡ ಪಾಪು ಬಾಪು ಸೇರಿದಂತೆ ಅನೇಕ ಪ್ರದರ್ಶನಗಳಿಂದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅನೇಕ ಏಕ ವ್ಯಕ್ತಿ ನಾಟಕ ಪ್ರಯೋಗಗಳಿಗೂ ನಿರ್ದೇಶನ ಮಾಡಿದ್ದಾರೆ.
ರಾಷ್ಟ್ರೀಯ ನಾಟಕೋತ್ಸವಗಳಲ್ಲೂ ಇವರ ನಿರ್ದೇಶಿತ ನಾಟಕಗಳು ಪ್ರದರ್ಶನ ಕಂಡಿದ್ದು, ನಾಡು ಹೊರ ನಾಡುಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕ ಹೊಸ ಮಾದರಿಯ ಪ್ರಯೋಗಗಳಿಗೂ ನಾಂದಿ ಹಾಡಿದ್ದಾರೆ.
ಜು.18ರ ಬೆಳಿಗ್ಗೆ 10:30ಕ್ಕೆ ಕಲಬುರ್ಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಬಳಿಕ ನೃತ್ಯಗಾಥಾ ಏಕ ವ್ಯಕ್ತಿ ರಂಗ ಪ್ರಯೋಗ ನಡೆಯಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ :08-07-2019 ರ ಸಿದ್ದಾಪುರ ಪೇಟೆಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿs 29839 33099 32689
2 ತಟ್ಟಿಬೆಟ್ಟೆ 23899 25409 24899
3 ಕೆಂಪಗೋಟು 21099 21099 21099
4 ಬಿಳಿಗೋಟು 15802 17002 16182
5 ಚಾಲಿ 20909 21519 21399
6 ಕೋಕಾ 14012 18482 16412
7 ಕಾಳುಮೆಣಸು 30089 30089 30089
ಜುಲೈ 9 ರಂದು ಪ್ರಾ.ಶಾ.ಬಂದ್, ಪ್ರತಿಭಟನೆ
ಸರ್ಕಾರ ಜಾರಿಗೆ ತಂದಿರುವ ಸಿ&ಆರ್ (ವೃಂದ ಮತ್ತು ನೇಮಕಾತಿ ನಿಯಮ) ನಿಯಮ ಸೇರಿದಂತೆ ಕೆಲವು ನಿಯಮಗಳು ಅವಿವೇಕದಿಂದ ಕೂಡಿದ ಅಮಾನವೀಯ ಕಾನೂನುಗಳು . ಸರ್ಕಾರ ಕಾರ್ಪೋರೆಟ್ ಕಂಪನಿಗಳ ಪ್ರಭಾವಕ್ಕೊಳಗಾಗಿ ಮಾಡಿದ ಕಾನೂನುಗಳು ಇವು. ಇವುಗಳನ್ನು ರದ್ದು ಮಾಡಿ, ತಕ್ಷಣದಲ್ಲಿ ಶಿಕ್ಷಕರ ಬೇಡಿಕೆಗಳನ್ನು ಈಡೆರಿಸಬೇಕು ಎಂಬಿತ್ಯಾದಿ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ಜುಲೈ 9 ರಂದು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಿ ಶಿರಸಿಯ ಡಿಡಿಪಿಐ ಕಛೇರಿ ಎದುರಿಗೆ ಬೃಹತ್ ರ್ಯಾಲಿಯ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ.ನಾಯ್ಕ ಕಡಕೇರಿ ತಿಳಿಸಿದ್ದಾರೆ.
