ಹೊಂಬೆಳಕು ಹೊತ್ತ ಅವಳ ಗುಲಾಬಿ ನಯನಗಳು| ಕಂಡ ಕೂಡಲೇ ಹೊಳೆಹೊಳೆದು ಆ ಸಂಜೆಯಾಗಿತ್ತು ಮರುಳು|| ಓದಿ ಮಾಡುತ್ತಿಹನು ಮನನ ಕೇವಲ ಅಂದದ ಸೊಬಗು| ತಂಗಾಳಿ ತಣ್ಡಗೆ ಆವರಿಸಿ ಮುದಗೊಂಡಿದೆ ಮೆಲ್ಲಗೆ ಮೆರುಗು||ಅದು ಯಾಕೋ ಏನೋ ಕಳೆದುಕೊಂಡೆ ಆಗ ನನ್ನೇ ನಾನು| ಎಲ್ಲಿ ಹೇಗೆ ಎಂದು ಹುಡುಕದೆ ಹೋಗಿ ಕೇಳಿ ಅವಳನ್ನು||ತುಸು ನಾಚಿಕೆ ಬೆರೆಸಿ ಮುಂಗಾರು ಮಿಂಚಿನ ಸೆಳೆವು| ಇಂಚಿಂಚು ಅತಿಕ್ರಮಣ ಸ್ಥಳವಕಾಶ ಮಾಡಿತು ಒಲವು|| ಬೇಡ ಬೇಡವೆಂದರೂ ಕೇಳದಂತೆ ಭಾಸ| ಮಿಡಿಮಿಡಿದು ಆಗಿಹೋಯಿತು ಈ ಮನ ಪರವಶ||ಅತಿ ವಿಶೇಷ ಎನಿಸಿ ಸಹಜ ಸ್ವಭಾವ| ಅದು ಯಾಕೋ ಏನೋ ಬದಲಾಗಿ ಹಾವಭಾವ||ಹೇಗಾದರೂ ಇಡಲಿ ನಾನೆಷ್ಟು ಗಮನ| ಆಡಿದಂತೆ ತೂಗುಯ್ಯಲೆ ಕಣ್ಣಾಮುಚ್ಚಾಲೆಯ ಕ್ಷಣ|| ಅದೆಂತಹ ಕಚಗುಳಿ ಬೀರುವಾಗ ಕಳ್ಳ ನೋಟ| ಕಂಡು ಹಿಡಿದಳು ನೋಡಿ ನನ್ನ ಪಠ್ಯೇತರ ಆಟ ಪಾಠ||ಬೆಸೆದಾಗ ಕಣ್ಣು ಕಣ್ಣು ಪ್ರೇಮಮೂರ್ತಿಯ ಪ್ರತಿಷ್ಠಾಪನೆ| ಇನ್ನೂ ಏನು ಎಂದು ಹೇಳಲಿ ಮೂಕವಿಸ್ಮಿತ ಆಲಾಪನೆ||*ಬಸವರಾಜ ಕಾಸೆ* 7829141150 pradeepbasu40@gmail.comReplyForward |