

ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿಯಿಂದ ಹೊರ ಜಿಲ್ಲೆಗೆ ನೀರು ಹರಿಸುವುದು ಮತ್ತು ಶರಾವತಿ ನೀರಿನ ಯೋಜನೆ ಹಾಗೂ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ಸರ್ಕಾರದ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಇಂದು ಸಿದ್ಧಾಪುರದ ಶಂಕರಮಠದಲ್ಲಿ ನಡೆದ ವೇದ ಮತ್ತು ಆಯುರ್ವೇದಗಳಲ್ಲಿ ಪಂಚವೃಕ್ಷಗಳ ಮಹತ್ವದ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಮಾತನಾಡಿದ ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಮತ್ತು ಶಿವಮೊಗ್ಗದ ಶರಾವತಿ ನದಿಗಳಂಥ ಜೀವನದಿಗಳ ನೀರನ್ನು ದೂರದ ಹೊರ,ಅನ್ಯ ಜಿಲ್ಲೆಗಳಿಗೆ ಸಾಗಿಸುವ ಯೋಜನೆ ಪರಿಸರ ಪೂರಕ ಯೋಜನೆಗಳಲ್ಲ ಎಂದರೆ,
ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಶರಾವತಿ ನದಿ ನೀರಿನ ಬೆಂಗಳೂರು ಹಿತಾಸಕ್ತಿಯ ಯೋಜನೆ, ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅರಣ್ಯ ಸೇರ್ಪಡೆ ಅವೈಜ್ಞಾನಿಕ ಯೋಜನೆಗಳು. ಇಂಥ ಯೋಜನೆಗಳ ವಿರುದ್ಧ ಸಾರ್ವಜನಿಕ ವಿರೋಧ ಚಳವಳಿ ರೂಪ ಪಡೆಯಬೇಕು ಎಂದು ಆಸಿಸಿದರು.
ಉತ್ತರ ಕನ್ನಡ, ಶಿವಮೊಗ್ಗಗಳಲ್ಲೇ ಬಳಕೆ, ಕೃಷಿಗೆ ನೀರಿಲ್ಲ,ಈ ಸ್ಥಿತಿಯಲ್ಲಿ ಸ್ಥಳಿಯರನ್ನು ನಿರ್ಲಕ್ಷಿಸಿ, ಅನ್ಯರಿಗೆ ಅನುಕೂಲ ಮಾಡುವ ಉಧಾರತೆ ನಮಗೆ ಬೇಡ ಎಂದರು.


