

ಮಳೆನಾಡಿನ ಬಂದ್ ಪರ್ವ
ಮಲೆನಾಡು ಈಗ ಮಳೆನಾಡಾಗಿ ಬದಲಾಗಿದ್ದು, ಈವಾರ ಮಲೆನಾಡಿನಲ್ಲಿ ವಿಪರೀತ ಮಳೆಯಾಗಿರುವುದರಿಂದ ಈ ವಾರ ಮಲೆನಾಡಿಗರು ಮಳೆನಾಡಿಗರಾಗಿ ಬದಲಾಗಿದ್ದಾರೆ.
ನಾಳೆ ಶಿವಮೊಗ್ಗ ಬಂದ್ –
ಶರಾವತಿ ನೀರನ್ನು ತುಮಕೂರು, ಬೆಂಗಳೂರುಗಳಿಗೆ ಹರಿಸುವ ಶರಾವತಿ ನದಿ ನೀರಿನ ಯೋಜನೆ ವಿರೋಧಿಸಿ ಬುಧವಾರ ಜು.10 ರಂದು ಶಿವಮೊಗ್ಗ ಬಂದ್ ನಡೆಯಲಿದೆ.
ಪ್ರಗತಿಪರರ ನೇತೃತ್ವದ ಈ ಬಂದ್ ಮತ್ತು ಈ ಯೋಜನೆ ವಿರೋಧಿ ಹೋರಾಟಕ್ಕೆ ಪಕ್ಷಾತೀತ, ಜಾತ್ಯಾತೀತ ಬೆಂಬಲ ವ್ಯಕ್ತವಾಗಿದೆ.
ಇಂದು ಸಿದ್ಧಾಪುರ ಶಾಲೆಗಳು ಬಂದ್_
ಶಿಕ್ಷಕರ ನಾನಾ ಬೇಡಿಕೆಗಳನ್ನು ಈಡೇರಿಸುವ ಹೋರಾಟದ ಅಂಗವಾಗಿ ಇಂದು ಸಿದ್ಧಾಪುರದ ಪ್ರಾಥಮಿಕ ಶಾಲೆಗಳು ಮುಚ್ಚಿದ್ದವು.
ಸಿದ್ಧಾಪುರದ ಶಿಕ್ಷಕರು ಶಿರಸಿ ಡಿ.ಡಿ.ಪಿ.ಆಯ್. ಕಚೇರಿ ಎದುರು ಪ್ರತಿಭಟನಾ ಧರಣಿಯ ಮೂಲಕ ಮನವಿ ಅರ್ಪಿಸಲು ತೆರಳಿದ್ದರಿಂದ ಬಹುತೇಕ ಎಲ್ಲಾ ಶಾಲೆಗಳಿಗೆ ರಜೆ ಘೋಶಿಸಲಾಗಿತ್ತು.
ಶರಾವತಿ ಮತ್ತು ಅಘನಾಶಿನಿ ನೀರಿನ ಯೋಜನೆಗಳಿಗೆ ವಿರೋಧ
ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿಯಿಂದ ಹೊರ ಜಿಲ್ಲೆಗೆ ನೀರು ಹರಿಸುವುದು ಮತ್ತು ಶರಾವತಿ ನೀರಿನ ಯೋಜನೆ ಹಾಗೂ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸುವ ಸರ್ಕಾರದ ಯೋಜನೆಗಳ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಇಂದು ಸಿದ್ಧಾಪುರದ ಶಂಕರಮಠದಲ್ಲಿ ನಡೆದ ವೇದ ಮತ್ತು ಆಯುರ್ವೇದಗಳಲ್ಲಿ ಪಂಚವೃಕ್ಷಗಳ ಮಹತ್ವದ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಮಾತನಾಡಿದ ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಮತ್ತು ಶಿವಮೊಗ್ಗದ ಶರಾವತಿ ನದಿಗಳಂಥ ಜೀವನದಿಗಳ ನೀರನ್ನು ದೂರದ ಹೊರ,ಅನ್ಯ ಜಿಲ್ಲೆಗಳಿಗೆ ಸಾಗಿಸುವ ಯೋಜನೆ ಪರಿಸರ ಪೂರಕ ಯೋಜನೆಗಳಲ್ಲ ಎಂದರೆ,
ಮುಖ್ಯ ಅತಿಥಿಯಾಗಿ ಮಾತನಾಡಿದ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಭಟ್ ಶರಾವತಿ ನದಿ ನೀರಿನ ಬೆಂಗಳೂರು ಹಿತಾಸಕ್ತಿಯ ಯೋಜನೆ, ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅರಣ್ಯ ಸೇರ್ಪಡೆ ಅವೈಜ್ಞಾನಿಕ ಯೋಜನೆಗಳು. ಇಂಥ ಯೋಜನೆಗಳ ವಿರುದ್ಧ ಸಾರ್ವಜನಿಕ ವಿರೋಧ ಚಳವಳಿ ರೂಪ ಪಡೆಯಬೇಕು ಎಂದು ಆಸಿಸಿದರು.
ಉತ್ತರ ಕನ್ನಡ, ಶಿವಮೊಗ್ಗಗಳಲ್ಲೇ ಬಳಕೆ, ಕೃಷಿಗೆ ನೀರಿಲ್ಲ,ಈ ಸ್ಥಿತಿಯಲ್ಲಿ ಸ್ಥಳಿಯರನ್ನು ನಿರ್ಲಕ್ಷಿಸಿ, ಅನ್ಯರಿಗೆ ಅನುಕೂಲ ಮಾಡುವ ಉಧಾರತೆ ನಮಗೆ ಬೇಡ ಎಂದರು.
