ಶರಾವತಿ ನೀರು ಯೋಜನೆ, ಶಿವಮೊಗ್ಗ ಬಂದ್ ಯಶಸ್ವಿ, ಮಳೆಯಲ್ಲೇ ಪ್ರತಿಭಟನೆ,ಸಭೆ
ಶರಾವತಿ ನದಿ ನೀರನ್ನು ತುಮುಕೂರು, ಬೆಂಗಳೂರುಗಳಿಗೆ ಪೂರೈಸುವ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತಿದ್ದು ಇಂದಿನ ಶಿವಮೊಗ್ಗ ಬಂದ್ ಯಶಸ್ವಿಯಾಗಿದೆ.
ಸಾಗರ ಸೇರಿದಂತೆ ಶಿವಮೊಗ್ಗ ಜಿಲ್ಲೆಯಾದ್ಯಂತ ಪ್ರತಿಭಟನಾಕಾರರು ಮಳೆ ಲೆಕ್ಕಿಸದೆ ಪ್ರತಿಭಟನೆ, ಬಂದ್, ಸಭೆ ನಡೆಸಿದ್ದಾರೆ.
ಇದೇ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಪ್ರತಿಭಟನೆ ಮನವಿ ಅರ್ಪಣೆಗಳು ನಡೆದಿವೆ.
ಸಿದ್ಧಾಪುರದಲ್ಲಿ ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ತಹಸಿಲ್ಧಾರರ ಮೂಲಕ ರಾಜಪಾಲರಿಗೆ ಮನವಿ ನೀಡಿ ಶರಾವತಿ ನೀರಿನ ಯೋಜನೆ, ಉತ್ತರ ಕನ್ನಡ ಜಿಲ್ಲೆಯ ನದಿಗಳ ತಿರುವಿನ ಯೋಜನೆಗಳು ಹಾಗೂ ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅರಣ್ಯ ಸೇರ್ಪಡೆ ನಿರ್ಧಾರ ಕೈಬಿಡಲು ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು ರಾಜ್ಯಪಾಲರನ್ನು ಕೋರಲಾಗಿದೆ.
ಸಿದ್ಧಾಪುರದಲ್ಲಿ ಮನವಿ ನೀಡಿದ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ, ದಲಿತ ಮುಖಂಡ
ಶಿವಾನಂದ ಕೆ.ಎಚ್., ಕನ್ನಡ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ದಿವಾಕರ ನಾಯ್ಕ ಸೇರಿದ ಕೆಲವರ ಒಕ್ಕೂಟ ತಹಸಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದೆ.
ಹೊನ್ನಾವರ-
ಹೊನ್ನಾವರದಲ್ಲೂ ಸ್ಥಳಿಯರು ಶರಾವತಿ ಉಳಿಸಿ ಅಭಿಯಾನದ ಅಂಗವಾಗಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಪಾಲರಿಗೆ ಮನವಿ_
ಸಿದ್ದಾಪುರ:ಜು.10- ಇಂದಿನ ಶಿವಮೊಗ್ಗ ಬಂದ್‍ಗೆ ಜಿಲ್ಲೆಯ ಬರಹಗಾರರು, ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದು, ಕರಾವಳಿ ಮತ್ತು ಮಲೆನಾಡಿನ ನೀರನ್ನು ಹೊರಜಿಲ್ಲೆಗಳಿಗೆ ಕೊಂಡೊಯ್ಯುವ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದ್ದು, ಶಿವಮೊಗ್ಗದಲ್ಲಿ ಶರಾವತಿ ನೀರಿನ ಯೋಜನೆ ವಿರೋಧಿಸಿ ನಡೆಸುತ್ತಿರುವ ಬಂದ್ ಗೆ ಬೆಂಬಲವಿದೆ. ಕರಾವಳಿ ಮತ್ತು ಮಲೆನಾಡಿನ ನದಿಗಳಾದ ಕಾಳಿ, ಅಘನಾಷಿನಿ,ಶರಾವತಿ,ನೇತ್ರಾವತಿ, ನದಿಗಳನ್ನು ಬಳಸಿಕೊಂಡು ಆಯಾ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಕೃಷಿ ಅನುಕೂಲಕ್ಕೆ ಬೇಕಾಗುವ ನೀರಿನ ಅಗತ್ಯಕ್ಕಾಗಿ ಈ ನದಿಗಳ ನೀರನ್ನು ಬಳಸುವ ಯೋಜನೆಗಳನ್ನು ಜಾರಿ ಮಾಡಬೇಕು,
ಮಲೆನಾಡು ಕರಾವಳಿ ಜಿಲ್ಲೆಯ ಜನತೆ ಇಲ್ಲಿನ ನೀರಿನ ಬಳಕೆಯ ಯೋಜನೆಗಳಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ನೀರಿನ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರ ಬಡವಾಗುತ್ತಿದೆ. ಈ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಸ್ಥಳೀಯ ಯೋಜನೆಗಳನ್ನು ಜಾರಿ ಮಾಡಬೇಕು, ಮಲೆನಾಡು ಕರಾವಳಿ ಜಿಲ್ಲೆಗಳಿಂದ ಹೊರ ಜಿಲ್ಲೆಗಳಿಗೆ ವೆಚ್ಚದಾಯಕ ಯೋಜನೆಗಳ ಮೂಲಕ ನೀರೊಯ್ಯುವ ಯೋಜನೆಗಳನ್ನು ನಿಲ್ಲಿಸಬೇಕು.
ಉತ್ತರ ಕನ್ನಡ ಜಿಲ್ಲೆಯ ನದಿ ನೀರಿನ ತಿರುವು, ನೀರುಕೊಂಡೊಯ್ಯುವ ಯೋಜನೆಗಳು ಮತ್ತು ಶರಾವತಿ ಅಭಯಾರಣ್ಯಕ್ಕೆ ಕೆನರಾ ವೃತ್ತದ ಅರಣ್ಯ ಸೇರ್ಪಡೆಯಂತಹ ಯೋಜನೆಗಳನ್ನು ಸರ್ಕಾರ ಕೈಬಿಡಲು ನಿರ್ದೇಶಿಸುವಂತೆ ರಾಜ್ಯಪಾಲರನ್ನು ಕೋರಿ ಹಾಗೂ ಶಿವಮೊಗ್ಗ ಬಂದ್ ಗೆ ಬೆಂಬಲ ನೀಡಿ ಈ ಮನವಿ ಅರ್ಪಿಸುತಿದ್ದೇವೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗಳ ಕನ್ನಡ ಸಂಘಟನೆಗಳು ಪ್ರಗತಿಪರ ಸಂಘಟನೆಗಳ ಪರವಾಗಿ ಕನ್ನೇಶ ಕೋಲಶಿರ್ಸಿ, ದಿವಾಕರ ಸಂಪಖಂಡ, ಹೆಚ್. ಕೆ. ಶಿವಾನಂದ, ಕೇಶವ ನಾಯ್ಕ, ಕೃಷ್ಣಮೂರ್ತಿ ಎನ್. ವಿಠ್ಠಲ ಭಂಡಾರಿ, ಗುರುಮೂರ್ತಿ ನಾಯ್ಕ ಸುಂಕತ್ತಿ, ವಿನಾಯಕ ದೊಡ್ಡಗದ್ದೆ, ರಂಗನಾಥ ಮಂಕೋಡ, ಕ್ಯಾದಗಿ ಗ್ರಾ.ಪಂ ಸದಸ್ಯೆ ಕುಸುಮಾ ಗೌಡ, ಸತೀಶ ಹೆಗಡೆ, ವೀರಭದ್ರ ನಾಯ್ಕ ಸಹಿ ಮಾಡಿದ ಮನವಿಯನ್ನು ಉಪ ತಹಶಿಲ್ದಾರ ಡಿ.ಆರ್. ಬೆಳ್ಳುಮನೆಯವರಿಗೆ ಅರ್ಪಿಸಿದರು.