

ಬ್ರೇಕಿಂಗ್ ನ್ಯೂಸ್
ಶಿರಸಿ ರಾಗಿಹೊಸಳ್ಳಿ ಬಳಿ ನಡೆದ ಲಾರಿ-ಕಾರು ಅಪಘಾತದಲ್ಲಿ ಸಿದ್ಧಾಪುರದ ಒಬ್ಬರು ಮೃತರಾಗಿದ್ದು ಮೂವರಿಗೆ ಗಂಭೀರ ಗಾಯಗಾಳಾಗಿರುವುದು ವರದಿಯಾಗಿದೆ.
ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗಾಯಾಳುಗಳನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.
ಗೋಕರ್ಣಕ್ಕೆ ತರಳುತಿದ್ದ ಕಾರು ಮತ್ತು ಎದುರಿನಿಂದ ಬರುತಿದ್ದ ಲಾರಿಗಳ ನಡುವೆ ಮೂಕಾಮುಕಿ ಡಿಕ್ಕಿಯಾಗಿದ್ದು, ವಾಹನ ಯೋಗೀಶ್ ಶಾನಭಾಗ ಎಂಬುವವರಿಗೆ ಸೇರಿದ್ದಾಗಿದೆ. ಚಿತ್ರ,ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪರಿಸರಕ್ಕಾಗಿ ರಾಜೀನಾಮೆ ಕೊಟ್ಟು ಹೋರಾಡಲು ಸ್ವರ್ಣವಲ್ಲೀ ಸಲಹೆ-
ಜಿಲ್ಲೆಯ ನೆಲ-ಜಲಕ್ಕಾಗಿ ಹೋರಾಡಲು ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ
ಉತ್ತರಕನ್ನಡ ಜಿಲ್ಲೆಯ ಕೆನರಾ ವೃತ್ತದ ಅರಣ್ಯ ಪ್ರದೇಶವನ್ನು ಶರಾವತಿ ಅಭಯಾರಣ್ಯಕ್ಕೆ ಸೇರಿಸಿದ ಆದೇಶವನ್ನು ರದ್ದು ಮಾಡುವುದು ಸೇರಿದಂತೆ ಇತರ ಐದು ನಿರ್ಣಯಗಳನ್ನು ಅಘನಾಶಿನಿ ಕಣಿವೆ ಉಳಿಸಿ ಸಮಾವೇಶ ಅಂಗೀಕರಿಸಿದೆ.

