ಬಿ.ಜೆ.ಪಿ.ಯಲ್ಲಿದ್ದು ನಂತರ ಕಾಂಗ್ರೆಸ್ ಸೇರಿ, ಹಣ-ಜಾತಿ ಅನುಕೂಲಗಳಿಂದ ಶಾಸಕನಾಗಿ ಈಗ ಅತ್ರಪ್ತರೊಂದಿಗೆ ಸೇರಿರುವ ಶಿವರಾಮ ಹೆಬ್ಬಾರ ಅತ್ತ ಧರೆ ಇತ್ತ ಪುಲಿ ಎನ್ನುವ ಸಂದಿಗ್ಧ ದಲ್ಲಿ ಸಿಲುಕಿದ್ದಾರೆಯೇ?
ಇಂಥದೊಂದು ಅನುಮಾನ ಎಲ್ಲೆಡೆ ಚರ್ಚೆಯಾಗುತ್ತಿದೆ.
ಸ್ವಯಂ ಪ್ರಯತ್ನ, ಪರಿಶ್ರಮದಿಂದ ಬೆಳೆದು ಬಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದರೂ ಶಿವರಾಮ ಹೆಬ್ಬಾರ್ ಬಿ.ಜೆ.ಪಿ.ಯಿಂದ ಪಡೆದಿದ್ದೇನೂ ಇಲ್ಲ.
ಅನಂತಕುಮಾರ, ಕಾಗೇರಿಗಳೆಂಬ ಸಂಘದ ನಾಟಕಕಾರ ಸ್ವಜಾತಿ ಮಾಣಿಗಳೆದುರು ರಾಜಕೀಯ ಮಾಡುವುದಕ್ಕೇ ಎದುರುಸಿರು ಬಿಡುತ್ತಿರುವ ಕಷ್ಟ ಕಾಲದಲ್ಲಿ ಅದ್ಹ್ಯಾಗೋ ಕಬ್ಬಿಣದ ಅದಿರು ಒಲಿದು ಶಿವರಾಮ ಹೆಬ್ಬಾರ್ ಕೋಟ್ಯಾಧೀಶರಾಗಿಬಿಟ್ಟರು. ಆ ಕೋಟ್ಯಾಧಿಪತಿಯಾದ ಅದಿರು ವ್ಯವಹಾರವೇ ಶಿವರಾಮ ಹೆಬ್ಬಾರ್ ರನ್ನು ಪ್ರವರ್ಧಮಾನಕ್ಕೆ ತಂದದ್ದು.
ಹೆಬ್ಬಾರ್ ಅದಿರು ವ್ಯವಹಾರದಲ್ಲಿ ಕಾಗೇರಿ, ಅನಂತಕುಮಾರಗಳಿಗೆ ಮಂತ್ಲಿ ಕೊಟ್ಟು ಸ್ನೇಹ ಸಂಪಾದಿಸುವುದು ಹೆಬ್ಬಾರ್ ರಿಗೆ ಅನಿವಾರ್ಯವಾಗಿತ್ತು. ತನ್ನಿಂದ ಜನಪ್ರತಿನಿಧಿತ್ವದ ಅವಕಾಶ ಬಳಸಿ ಕೊಟ್ಯಾಂತರ ಹಣ ಕಸಿದ ಈ ಮಾಣಿಗಳಿಬ್ಬರ ಎದುರು ನಾಯಕನಾಗುವುದು ಹೆಬ್ಬಾರ್ ಹವಣಿಕೆಯಾಗಿತ್ತು.
ಈ ಪ್ರಯತ್ನಕ್ಕೆ ಅಡ್ಡಿಯಾಗಿದ್ದವರೇ ದೇಶಪಾಂಡೆ ಮತ್ತವರ ರಾತ್ರಿ ಸ್ನೇಹಿತರಾದ ಅನಂತಕುಮಾರ ಹೆಗಡೆ ಮತ್ತು ಕಾಗೇರಿ ಹೆಗಡೆಗಳು.
ಈ ಬ್ರಾಹ್ಮಣರ ನಾಯಕತ್ವದ ಮೇಲಾಟದಲ್ಲಿ ಹೆಬ್ಬಾರ್ ಮಾರ್ಗರೇಟ್ ಆಳ್ವ ಬಣ ಸೇರಿದರು. ಎಲ್ಲಾ ಇದ್ದೂ ಏನೂ ಮಾಡದ ಆಳ್ವ ಅಮ್ಮ ಮಗನ ಸಾವಾಸದಿಂದ ಏನೂ ಗಿಟ್ಟುವುದಿಲ್ಲ ಎಂದರಿತ ಹೆಬ್ಬಾರ್ ನೇರ ಬಿ.ಜೆ.ಪಿ. ದೆಹಲಿ ಕುಳಗಳೊಂದಿಗೆ ಸಂಪರ್ಕ ಪ್ರಾರಂಭಿಸಿದರೆ, ಬಿ.ಜೆ.ಪಿ.ಯ ಗುಜರಾತಿ ಕ್ರಿಮಿನಲ್ ಗಳು ಈ ಹಿಂದೆ ಆರೋಪಿ ಯಾಗಿದ್ದ ಹೆಬ್ಬಾರ್ ರನ್ನು ಸರ್ಕಾರಿ ಅಸ್ತ್ರಗಳಿಂದ ತಿವಿಯತೊಡಗಿದ್ದರು.
ಕಾಂಗ್ರೆಸ್ ಬಿಟ್ಟರೆ ಉತ್ತರ ಕನ್ನಡದ ಹೆಗಡೆಗಳ ಸಮಸ್ಯೆ, ಕಾಂಗ್ರೆಸ್ ನಲ್ಲಿದ್ದರೆ ಅವರ ದೋಸ್ತ ದೇಶಪಾಂಡೆ ರಗಳೆ. ಹೀಗೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎನ್ನುವ ಸಂದಿಗ್ಧ ಸ್ಥಿತಿಯಲ್ಲಿ ಹೆಬ್ಬಾರ್ ರಿಗೆ ಕಂಡದ್ದು ಅತ್ರಪ್ತರ ಕೂಟ.
ಎಲ್ಲಾ ಆಗಿ ತನ್ನ ರಗಳೆ ಮುಗಿಯಿತು ಎನ್ನುತ್ತಿರುವಾಗಲೇ ಈಗ ಶಿವರಾಮ ಹೆಬ್ಬಾರ್ ಶಾಸಕತ್ವದಿಂದ ಅನರ್ಹರಾಗುವ ಸಾಧ್ಯತೆ ದಟ್ಟವಾಗಿದೆ.
ಈ ಸ್ಥಿತಿಗೂ ಮೊದಲು ಉತ್ತರ ಕನ್ನಡದಲ್ಲಿ ಹೆಬ್ಬಾರ್ ಬಿ.ಜೆ.ಪಿ. ಸೇರ್ಪಡೆಗೆ ವಿರೋಧವಿತ್ತು. ಚುನಾವಣೆ ಇತರ ಸಮಯದಲ್ಲಿ ಹೆಬ್ಬಾರ್ ಹಣದಿಂದ ಮೋಜು ಮಸ್ತಿ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ನೇರವಾಗಿ ಹೆಬ್ಬಾರ್ ನಡೆಯನ್ನು ವಿರೋಧಿಸುವ ಧೈರ್ಯ, ನೈತಿಕತೆ ಇರಲಿಲ್ಲ.
ಹಾಗಾಗಿ ಬಿ.ಜೆ.ಪಿ. ಕಾಂಗ್ರೆಸ್ ಗಳಲ್ಲಿ ಶಿವರಾಮ್ ರ ಹೊಸನಡೆ ಬಗ್ಗೆ ವಿರೋಧ ವಿದ್ದರೂ ಯಾರೂ ಬಹಿರಂಗವಾಗಿ ಸದ್ದು ಮಾಡಿರಲಿಲ್ಲ.
ಅಷ್ಟಕ್ಕೂ ಹೆಬ್ಬಾರ್ ಕಳೆದ 6 ತಿಂಗಳುಗಳಿಂದ ತನ್ನ ಆಪ್ತರು, ಹಿತೈಶಿಗಳ ಬಳಿ ತನ್ನ ಕಠಿಣ ನಿರ್ಧಾರದ ಸೂಚನೆಗಳನ್ನು ಆಗಾಗ ಕೊಟ್ಟಿದ್ದರು. ಬಹುತೇಕರಿಗೆ ಹೆಬ್ಬಾರ್ ಅಪ್ಪ-ಮಕ್ಕಳ ಸಕಲ ವ್ಯವಹಾರ ತಿಳಿದಿದ್ದರಿಂದ ಹೆಬ್ಬಾರ್ ಯಾವ ಕ್ಷಣದಲ್ಲಿ ಎಂಥಾ ತೀರ್ಮಾನಕ್ಕೆ ಬರುತ್ತಾರೋ ಎನ್ನುವ ಅಳುಕು ಅವರ ಆಪ್ತ ಕಾರ್ಯಕರ್ತರಲ್ಲಿತ್ತು.
ಈಗ ಹೆಬ್ಬಾರ್ ಕಾಂಗ್ರೆಸ್ ನಿಂದ ಅಮಾನತ್ತಾಗಿ ಏಕಾಂಗಿಯಾಗುತ್ತಾರೆ. ಮೊದಲಿನಿಂದಲೂ ಹೆಬ್ಬಾರ್ ವಿರುದ್ಧ ರಣತಂತ್ರ ಮಾಡುತಿದ್ದ ಬಿ.ಜೆ.ಪಿ.ಗಳು ಹೆಬ್ಬಾರ್ ಅತಂತ್ರತೆಯಲ್ಲಿ ಸುಮ್ಮನುಳಿದು ನಿರ್ಲಕ್ಷಿಸುತ್ತಾರೆ. ಇಂದಿನ ವರೆಗೆ ಹೆಬ್ಬಾರ್ ಮುಲಾಜಿನಲ್ಲಿದ್ದ ಅನೇಕ ಕಾರ್ಯಕರ್ತರು ಹೆಬ್ಬಾರ್ ಅತಂತ್ರತೆ ನೋಡಿ ಪಕ್ಷ ಪ್ರೇಮ ಪ್ರದರ್ಶಿಸಿ ಜಾಗೃತರಾಗಿಬಿಡುತ್ತಾರೆ. ಕೊನೆಗೂ ಹೆಬ್ಬಾರ್ ಯಾರೂ ಒಪ್ಪದವರಾಗಿ ಒಬ್ಬಂಟಿಯಾಗುತ್ತಾರೆ. ಇದು ಈವರೆಗೆ ಹೆಬ್ಬಾರ್ ಎದುರಿಸಲಿರುವ ದುಸ್ಥಿತಿಯ ಲೆಕ್ಕಾಚಾರ.
ಈ ಹಿನ್ನೆಲೆಗಳಲ್ಲಿ ಹೆಬ್ಬಾರ್ ನಾ ಘರ್ ಕಾ ನಾ ಘಾಟ್ ಕಾ ಅಗುವ ಅಪಾಯವಿದೆ. ಅಧಿಕಾರವಿಲ್ಲದೆಯೂ ಸುಪ್ಪತ್ತಿಗೆಯಲ್ಲಿ ಮೆರೆಯಬಹುದಾದಷ್ಟು ಸಂಪಾದಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಬಿ.ಜೆ.ಪಿ.ಯ ಬ್ಲ್ಯಾಕ್ ಮೇಲ್ ರಾಷ್ಟ್ರೀಯತೆಗೆ ಬಲಿಯಾಗಿರುವುದಂತೂ ದುರಂತ.
ಬಿ.ಜೆ.ಪಿ.ಯ ದೆಹಲಿ ಕುಳಗಳು ಶಿವರಾಮ ಹೆಬ್ಬಾರರಿಂದ ಕೀಳ ಬೇಕಿರುವುದನ್ನು ಕಿತ್ತು ನಂತರ ಕಾನೂನು ಕ್ರಮ ಎಂದರೆ ಹೆಬ್ಬಾರ್ ರಾಜಕೀಯ ಭವಿಷ್ಯವೂ ಅಂತ್ಯವಾದಂತೆಯೆ. ಆದರೆ ಕೆಲಸ,ನಿಯತ್ತಿನ ವಿಚಾರದಲ್ಲಿ ಮಾಜಿ ಸಚಿವರಾಗಿರುವ ಉತ್ತರ ಕನ್ನಡದ ಸಂಘದ ಹೆಗಡೆಗಳಿಗಿಂತ ಹೆಬ್ಬಾರ್ ಬಹಳ ಎತ್ತರದ ಮನುಷ್ಯ.